Honor 90: 200 MP ಕ್ಯಾಮೆರಾ ಇರುವ ಈ ಮೊಬೈಲ್ ಮೇಲೆ 21% ಡಿಸ್ಕೌಂಟ್, ಹೊಸ ವರ್ಷಕ್ಕೆ ಹೊಸ ಮೊಬೈಲ್ ಖರೀದಿಸಿ

200 MP ಕ್ಯಾಮೆರಾ ಮೊಬೈಲ್ ಮೇಲೆ ಆಕರ್ಷಕ ರಿಯಾಯಿತಿ ಘೋಷಣೆ ಮಾಡಿದ ಅಮೆಜಾನ್

Honor 90 5G Smart Phone: ಮೊಬೈಲ್ ಖರೀದಿ ಮಾಡಬೇಕು ಅಂದುಕೊಂಡವರಿಗೆ ಇಲ್ಲಿದೆ ಒಂದು ಉತ್ತಮ ಮಾಹಿತಿ. ಒಳ್ಳೆಯ ಮೊಬೈಲ್ ಖರೀದಿ ಮಾಡಬೇಕು, ಆದರೆ ಅದು ಕಡಿಮೆ ಬೆಲೆಗೆ ಎಂದು ಅಂದುಕೊಂಡವರಿಗೆ ಹೇಳಿಮಾಡಿಸಿದಂತ ಮೊಬೈಲ್ ಇಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಸರುವಾಸಿ ಆಗಿರುವ ಹಾನರ್ ಮೊಬೈಲ್ ಕಂಪನಿ ತನ್ನ ಹೊಸ ಶೈಲಿಯ ಮೊಬೈಲ್ ಆದ ಹಾನರ್‌ 90 5G (Honor 90 5G )ಮೊಬೈಲ್‌ ಅನ್ನು ಬಹಳ ಕಡಿಮೆ ಬೆಲೆಗೆ ಸೇಲ್ ಮಾಡುತ್ತಿದ್ದು, ಇದೀಗ ಈ ಸ್ಮಾರ್ಟ್‌ಫೋನ್‌ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಭಾರೀ ಡಿಸ್ಕೌಂಟ್‌ ಪ್ರೈಸ್‌ ಟ್ಯಾಗ್‌ ನಲ್ಲಿ ಕಾಣಿಸಿಕೊಂಡಿದೆ.

Honor 90 5G Smartphone
Image Credit: Mobiledrop

Honor 90 5G Smart Phone Feature

ಹಾನರ್‌ 90 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಜೊತೆಗೆ ಈ ಫೋನ್‌ 1,200 x 2,664 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ 120Hz ನ ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದ್ದು, 1,600 ನೀಟ್ಸ್‌ ಗರಿಷ್ಠ ಬ್ರೈಟ್‌ ನೆಸ್‌ ಪಡೆದುಕೊಂಡಿದೆ. ಹಾನರ್‌ 90 5G ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಪವರ್‌ ನಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಫೋನ್‌ ಆಂಡ್ರಾಯ್ಡ್‌ 13 ಆಧಾರಿತ ಮ್ಯಾಜಿಕ್‌ ಒಎಸ್‌ 7.1 ಸಪೋರ್ಟ್ ಹೊಂದಿದೆ. ಇನ್ನು ಇದು 8 + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ. ಈ ಫೋನ್‌ ಗ್ರೀನ್‌, ಸಿಲ್ವರ್ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆ ಪಡೆದುಕೊಂಡಿದೆ.

Honor 90 5G ಸ್ಮಾರ್ಟ್ ಫೋನ್ ನ ಬ್ಯಾಟರಿ ಹಾಗು ಕ್ಯಾಮೆರಾ

Join Nadunudi News WhatsApp Group

ಹಾನರ್‌ 90 5G ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದುಕೊಂಡಿದ್ದು, ಇದಕ್ಕೆ ಸಪೋರ್ಟ್‌ ಆಗಿ 66W ಫಾಸ್ಟ್‌ ಚಾರ್ಜಿಂಗ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ 5G, 4G, Wi-Fi 6, ಬ್ಲೂಟೂತ್ 5.2, ಜಿಪಿಎಸ್‌, NFC, ಮತ್ತು ಯುಎಸ್‌ಬಿ ಟೈಪ್-C ಪೋರ್ಟ್ ಅನ್ನು ಸಪೋರ್ಟ್ ಒಳಗೊಂಡಿದೆ.ಹಾಗೆಯೇ ಹಾನರ್‌ ಸಂಸ್ಥೆಯ ಈ 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

Honor 90 5G Smartphone Price
Image Credit: News 18

Honor 90 5G ಸ್ಮಾರ್ಟ್ ಫೋನ್ ನ ಬೆಲೆ ಹಾಗು ಆಫರ್

ಗ್ರಾಹಕರು 8GB + 256GB ವೇರಿಯಂಟ್‌ನ ಹಾನರ್‌ 90 5G ಸ್ಮಾರ್ಟ್ ಫೋನ್ ಅನ್ನು 37,999 ರೂ. ಗಳ ಬೆಲೆಯಲ್ಲಿ ಖರೀದಿಸಬಹುದು.ಇ ಕಾಮರ್ಸ್‌ ದೈತ್ಯ ಅಮೆಜಾನ್‌ ತಾಣದಲ್ಲಿ ಹಾನರ್‌ 90 5G ಮೊಬೈಲ್‌ ಶೇ. 21% ರಷ್ಟು ನೇರ ಡಿಸ್ಕೌಂಟ್‌ ಪಡೆದುಕೊಂಡಿದೆ. ಅಲ್ಲದೇ ಎಕ್ಸ್‌ಚೆಂಜ್‌ ಆಫರ್‌, ಬ್ಯಾಂಕ್‌ ಕೊಡುಗೆ ಹಾಗೂ ಇತರೆ ಆಫರ್‌ ಪಡೆದುಕೊಂಡರೆ ಇನ್ನಷ್ಟು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

Join Nadunudi News WhatsApp Group