Hackers Alert: Realme, Oppo ಮತ್ತು OnePlus ಮೊಬೈಲ್ ಬಳಸುವವರು ತಕ್ಷಣ ಈ ಕೆಲಸ ಮಾಡಿ, ಇಲ್ಲವಾದ್ರೆ ಮೊಬೈಲ್ ಹ್ಯಾಕ್ ಆಗಲಿದೆ

ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಮಾಡದಿದ್ದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಲಿದೆ

Smartphone Hack Alert: ಸದ್ಯ ಮೊಬೈಲ್ ಮಾನವನ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು, ಏಕೆಂದರೆ ಜನರು ಅಷ್ಟೊಂದು ಮೊಬೈಲ್ ಫೋನ್ ಗಳನ್ನೂ ಬಳಸುತ್ತಿದ್ದಾರೆ. ಮೊಬೈಲ್ ಫೋನ್ ಬಳಕೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎನ್ನಬಹುದು.

ಈಗಂತೂ ದೇಶದಲ್ಲಿ ವಿವಿಧ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಹೆಚ್ಚಿನ ವೈಶಿಷ್ಟ್ಯಗಳಿರುವ ಮೊಬೈಲ್ ಫೋನ್ ಗಳನ್ನೂ ಲಾಂಚ್ ಮಾಡುತ್ತಿದೆ. ಇನ್ನು ಅತಿಯಾದ ಮೊಬೈಲ್ ಬಳಕೆ ನಿಮಗೆ ಹೆಚ್ಚಿನ ಸಮಸ್ಯೆಯನ್ನು ಉಂಟುಮಾಡಬಹುದು.

hackers alert mobile setting
Image Credit: Original Source

ಆಂಡ್ರಾಯ್ಡ್ ಮೊಬೈಲ್ ಬಳಸುವವರಿಗೆ ಎಚ್ಚರಿಕೆ
ಇನ್ನು ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುವುದರಿಂದ ಮೊಬೈಲ್ ಬಳಕೆದಾರರಿಗೆ ಹೊಸ ಹೊಸ ಅನುಭವನ್ನು ನೀಡಲಾಗುತ್ತದೆ. ಇನ್ನು ಈ ತಂತ್ರಜ್ಞಾನಗಳ ಬಳಕೆ ಕೆಲವೊಮ್ಮೆ ಮೊಬೈಲ್ ಬಳಕೆದಾರರ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು. ಸರಳವಾಗಿ ಹೇಳುವುದಾದರೆ, ಮೊಬೈಲ್ ಬಳಕೆದಾರರ ವೈಯಕ್ತಿಕ ಮಾಹಿತಿಯು ಎಲ್ಲವು ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಈ ಮೂರು ಬ್ರಾಂಡ್ ನ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ.

ತಕ್ಷಣ ಈ ಸೆಟ್ಟಿಂಗ್ ಆಫ್ ಮಾಡದಿದ್ದರೆ ಹ್ಯಾಕ್ ಆಗಲಿದೆ ಮೊಬೈಲ್
ಮೊಬೈಲ್ ಬಳಕೆದಾರರ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವುದರಿಂದ AKPA Data ಸೋರಿಕೆಗೆ ಕಾರಣವಾಗಬಹುದು. ಈ ವೈಶಿಷ್ಟ್ಯವು Realme, Oppo ಮತ್ತು OnePlus ನಂತಹ ಸ್ಮಾರ್ಟ್‌ ಫೋನ್‌ ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. Realme, OnePlus ಮತ್ತು Oppo ನಿಂದ ಸ್ಮಾರ್ಟ್‌ ಫೋನ್‌ ಗಳು ಡೀಫಾಲ್ಟ್ ಆಗಿ ವರ್ಧಿತ ಗುಪ್ತಚರ ಸೇವೆಗಳ (Enhanced Intelligence Service) ವೈಶಿಷ್ಟ್ಯವನ್ನು ಹೊಂದಿವೆ.

how to identify mobile hack
Image Credit: Original Source

ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ, ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಸಾಧನವನ್ನು ಆಪ್ಟಿಮೈಜ್ ಮಾಡಲು ಬಳಕೆದಾರರ ಡೇಟಾವನ್ನು ಬಳಸಲಾಗುತ್ತಿದೆ ಎಂದು ಕಂಪನಿಗಳು ಹೇಳಿಕೊಳ್ಳುತ್ತವೆ. ಇದರಿಂದಾಗಿ ಬಳಕೆದಾರರ ವೈಯಕ್ತಿಯ ಮಾಹಿತಿ ಎಲ್ಲವು ಸೋರಿಕೆಯಾಗಲಿದೆ. ಇತ್ತೀಚಿನ ಸಾಫ್ಟ್‌ ವೇರ್‌ ನಲ್ಲಿ ಚಾಲನೆಯಲ್ಲಿರುವ Realme, Oppo ಮತ್ತು OnePlus ಸ್ಮಾರ್ಟ್‌ ಫೋನ್‌ ಗಳಲ್ಲಿ ವರ್ಧಿತ ಇಂಟೆಲಿಜೆಂಟ್ ಸೇವೆಗಳ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲು, ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ.

Join Nadunudi News WhatsApp Group

ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗದೆ ಇರಲು ಈ ರೀತಿ ಮಾಡಿ
•ನಿಮ್ಮ ಸ್ಮಾರ್ಟ್ ಫೋನ್ ಹ್ಯಾಕ್ ಆಗದೆ ಇರಲು ಮೊದಲು, ಫೋನ್‌ ನ Setting ಗೆ ಹೋಗಿ.
•ನಂತರ Additional Settings ಗೆ ಹೋಗಿ.
•ನಂತರ System Services ಆಯ್ಕೆಯನ್ನು ಟ್ಯಾಪ್ ಮಾಡಿ.
•ನಂತರ Enhanced Intelligent Service ವೈಶಿಷ್ಟ್ಯವನ್ನು ಆಫ್ ಮಾಡಿ.
•ಇದರ ನಂತರ, ಫೋನ್ ಅನ್ನು Restart ಮಾಡಿದರೆ ನಿಮ್ಮ ಫೋನ್ ಹ್ಯಾಕ್ ಆಗುವುದನ್ನು ತಪ್ಪಿಸಿಕೊಳ್ಳಬಹುದು.

Join Nadunudi News WhatsApp Group