HSRP Alert: HSRP ನಂಬರ್ ಪ್ಲೇಟ್ ಹಾಕಿದರೂ ಕಟ್ಟಬೇಕು ದಂಡ, HSRP ನಂಬರ್ ನಲ್ಲಿ ಈ ತಪ್ಪು ಮಾಡಿದರೆ ದಂಡ ಖಚಿತ.

HSRP ನೋಂದಣಿ ಮಾಡುವಾಗ ಈ ತಪ್ಪು ಮಾಡಿದರೆ ದಂಡ ಕಟ್ಟಬೇಕು.

HSRP Fake Link Scam: ಸದ್ಯ ಸರ್ಕಾರ ವಾಹನ ಮಾಲೀಕರಿಗೆ HSRP ಅಳವಡಿಕೆಯ ಬಗ್ಗೆ ರಿಲೀಫ್ ನೀಡಿದೆ. ವಾಹನ ಮಾಲೀಕರಿಗೆ ಇನ್ನು ಮೂರು ತಿಂಗಳು HSRP ಅಳವಡಿಕೆಗೆ ಸಮಯವನ್ನು ನೀಡಿದೆ. ಸದ್ಯ ಈ HSRP ಅಳವಡಿಕೆಯು Online Scam ಗೆ ಒಳಗಾಗುತ್ತಿದೆ. ಸೈಬರ್ ಕ್ರಿಮಿನಲ್ ಗಳು ಈ HSRP ಅನ್ನು ಬಳಸಿಕೊಂಡು ವಾಹನ ಮಾಲೀಕರನ್ನು ವಂಚಿಸಲು ಹೊಸ ರೀತಿಯ ಸ್ಕೀಮ್ ಗಳನ್ನೂ ಹಾಕುತ್ತಿದ್ದಾರೆ.

ಈ ಬಗ್ಗೆ ಕೇಂದ್ರ ಸರ್ಕಾರ ಜನರಿಗೆ ಎಚ್ಚರಿಕೆ ನೀಡುತ್ತಿದೆ. HSRP ಅಳವಡಿಕೆಯ ಹೆಸರಿನಲ್ಲಿ ಇದೀಗ ಆನ್ಲೈನ್ ಫ್ರಾಡ್ ಆರಂಭವಾಗಿದೆ. ಎಲ್ಲ ಮಾರ್ಗಗಳನ್ನು ಬಿಟ್ಟು ಇದೀಗ ಸೈಬರ್ ಕ್ರಿಮಿನಲ್ಸ್ HSRP ಅನ್ನು ವಂಚನೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ HSRP Online Scam ನಿಂದಾಗಿ ಸಾಕಷ್ಟು ಜನರು ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸರ್ಕಾರ ಜನಸಮಾನ್ಯರಿಗೆ ಎಚ್ಚರಿಕೆಯನ್ನು ನೀಡಿದೆ.

HSRP Fake Link Scam
Image Credit: Coindesk

HSRP ನಂಬರ್ ಪ್ಲೇಟ್ ಹಾಕಿದರೂ ಕಟ್ಟಬೇಕು ದಂಡ
ಈಗಾಗಲೇ ಸರ್ಕಾರ HSRP ಅಳವಡಿಕೆಯ ಕೊನೆಯ ದಿನಾಂಕವನ್ನು ನಿಗದಿ ಪಡಿಸಿತ್ತು. ಎರಡು ಬಾರಿ ಕೇಂದ್ರ ಸರ್ಕಾರ ಗಡುವನ್ನು ವಿಸ್ತರಿಸಿದೆ. ನವನೆಂಬರ್ 17 ರ ಕೊನೆಯ ದಿನಾಂಕವನ್ನು ಫೆಬ್ರವರಿ 17 ಕ್ಕೆ ಮುಂದೂಡಿತ್ತು. ಆದರೆ ವಾಹನ ಮಾಲೀಕರು HSRP ಅಳವಡಿಕೆಯಲ್ಲಿ ಯಶಸ್ಸಿಯಾಗದ ಕಾರಣ ಇದೀಗ ಮತ್ತೆ ಮೂರು ತಿಂಗಳು ಸಮಯಾವಕಾಶವನ್ನು ನೀಡಿದೆ.

ವಾಹನ ಮಾಲೀಕರು ಮೇ ತಿಂಗಳವರೆಗೆ ತಮ್ಮ ವಾಹನಕ್ಕೆ HSRP Number Plate ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಅವಕಾಶವನ್ನು ನೀಡಿದೆ. ವಾಹನ ಮಾಲೀಕರು ಆದಷ್ಟು ಬೇಗ HSRP ನೋಂದಣಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ವಾಹನಕ್ಕೆ HSRP Number Plate ಇಲ್ಲದಿದ್ದರೆ ನೀವು ಬಾರಿ ದಂಡವನ್ನು ಕಟ್ಟಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

HSRP Latest News Update
Image Credit: Economic Times

HSRP ನೋಂದಣಿ ಮಾಡುವಾಗ ಈ ತಪ್ಪು ಮಾಡಬೇಡಿ
HSRP ನೋಂದಣಿ ಮಾಡಿಕೊಳ್ಳುತ್ತಿರುವ ಜನರನ್ನು ಇದೀಗ ವಂಚನೆಗೆ ಗುರಿಪಡಿಸಲಾಗುತ್ತಿದೆ. ಆನ್ಲೈನ್ ನಲ್ಲಿ HSRP ನೋಂದಣಿಗೆ ನಕಲಿ ಲಿಂಕ್ ಗಳನ್ನೂ ಶೇರ್ ಮಾಡಲಾಗುತ್ತಿದೆ. ವಾಹನ ಮಾಲೀಕರು HSRP ನೋಂದಣಿ ಮಾಡುವ ಬರದಲ್ಲಿ ಫೇಕ್ ಲಿಂಕ್ ನಲ್ಲಿ ನೋಂದಣಿ ಮಾಡಿಕೊಂಡರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

Join Nadunudi News WhatsApp Group

RTO ಅಧಿಕೃತ ವೆಬ್ ಸೈಟ್ ನ ಹೊರತಾಗಿ ಸರ್ಕಾರ ಇನ್ನಿತರ ಯಾವುದೇ ಲಿಂಕ್ ಅನ್ನು HSRP Registration ಗಾಗಿ ಬಿಡುಗಡೆ ಮಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವಂತಹ ನಕಲಿ ಲಿಂಕ್ ಗಳ ಬಗ್ಗೆ ಜನರು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ನೀವು ಯಾವುದೇ ಲಿಂಕ್ ನಲ್ಲಿ HSRP Registration ಮಾಡುವ ಮುನ್ನ ಅದರ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಇನ್ನು ಅನ್ಯ ವೆಬ್ಸೈಟ್ ನಲ್ಲಿ HSRP ಮಾಡಿಸಿಕೊಂಡು ಅದೂ ನಿಜವಾದ ಹಸ್ರ್ಪ್ ನಂಬರ್ ಅಲ್ಲ ಎಂದು ತಿಳಿದರೆ ನೀವು ಕಾನೂನು ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ.

Join Nadunudi News WhatsApp Group