HSRP Fine: ತಕ್ಷಣ ನಿಮ್ಮ ವಾಹನದ ನಂಬರ್ ಪ್ಲೇಟ್ ಬದಲಿಸಿಕೊಳ್ಳದಿದ್ದರೆ 2000 ರೂ ದಂಡ, ಕೇಂದ್ರದ ಆದೇಶ

ಫೆಬ್ರವರಿ 17 ರೊಳಗೆ HSRP ಅಳವಡಿಕೆ ಕಡ್ಡಾಯ, HSRP ಅಳವಡಿಸದಿದ್ದರೆ ಕಟ್ಟಬೇಕು ಹೆಚ್ಚಿನ ದಂಡ.

HSRP Number Plate Fine: ದೇಶದಲ್ಲಿ ವಾಹನಗಳ ಬಳಕೆ ಹೆಚ್ಚುತ್ತಿದೆ. ಪ್ರತಿನಿತ್ಯ ಲಕ್ಷಾಂತರ ವಾಹನಗಳು ರಸ್ತೆಯಲ್ಲಿ ಓಡಾಡುತ್ತವೆ. ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಇರುವ ಕಾರಣ ಟ್ರಾಫಿಕ್ ಸಮಸ್ಯೆ ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತಿದೆ. ಈಗಾಗಲೇ ಕೇಂದ್ರ ಸಾರ್ಕಾರ ಟ್ರಾಫಿಕ್ ಸಮಸ್ಯೆಯನ್ನು ತಡೆಹಿಡಿಯಲು ಸಾಕಷ್ಟು ಕ್ರಮ ಕೈಗೊಂಡಿದೆ.

ಇದೀಗ ಸಾರಿಗೆ ಇಲಾಖೆ ಹಳೆಯ ವಾಹನಗಳ ನೋಂದಣಿಯ ಬಗ್ಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ಹಳೆಯ ಎಲ್ಲಾ ( ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರ್, ಕಾರ್ ಗಳು, ಮಧ್ಯಮ ಮತ್ತು ವಾಣಿಜ್ಯ ವಾಹನಗಳು, ಟ್ರಾಕ್ಟರ್ ) ವಾಹನಗಳಿಗೆ ಸುರಕ್ಷಿತ ನೋಂದಣಿ ಫಲಕಗಳನ್ನು ( HSRP ) ಅಳವಡಿಸುವುದು ಕಡ್ಡಾಯವಾಗಿದೆ.

HSRP Number Plate Mandatory
Image Credit: Economic Times

ಫೆಬ್ರವರಿ 17 ರೊಳಗೆ HSRP ಅಳವಡಿಕೆ ಕಡ್ಡಾಯ
ಸಾರಿಗೆ ಇಲಾಖೆಯ ಆದೇಶದ ಪ್ರಕಾರ, ವಾಹನ ಮಾಲೀಕರು 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳನ್ನು ಫೆಬ್ರವರಿ 17 ರೊಳಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಆದೇಶ ನೀಡಲಾಗಿದೆ. ವಾಹನಗಳಿಗೆ HSRP ಅನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿತ ಅವಧಿಯೊಳಗೆ ಅಂದರೆ ಫೆಬ್ರವರಿ 17 ರೊಳಗೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯವಾಗಿದೆ.

HSRP ಅಳವಡಿಸದಿದ್ದರೆ ಕಟ್ಟಬೇಕು ಹೆಚ್ಚಿನ ದಂಡ
2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಫೆಬ್ರವರಿ 17 ರೊಳಗೆ High Security Registration Plate (HSRP) ಅಳವಡಿಸಿಕೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಒಂದು ವೇಳೆ ಈ ನಿಗದಿತ ಗಡುವಿನ ಒಳಗೆ ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ಪ್ರಯೋಗ ಮಾಡುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಹೌದು ವಾಹನಗಳಿಗೆ HSRP ಅಳವಡಿಸದೇ ಮೊದಲ ಬಾರಿ ಸಿಕ್ಕಿಬಿದ್ದರೆ 1000 ರೂಪಾಯಿ ದಂಡ ಹಾಗೆ 2 ನೇ ಬಾರಿ ಸಿಕ್ಕಿ ಬಿದ್ದರೆ 2000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

HSRP Number Plate Fine
Image Credit: Jagran

HSRP ಅಳವಡಿಕೆಯ ಕಾರ್ಯವಿಧಾನ
•https:transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ಬುಕ್ HSRP ಕ್ಲಿಕ್ ಮಾಡಿ.

Join Nadunudi News WhatsApp Group

•ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.

•ವಾಹನದ ಮೂಲ ವಿವರವನ್ನು ಭರ್ತಿ ಮಾಡಬೇಕು.

•ನಿಮಗೆ ಅನುಕೂಲವಾಗುವ ಡೀಲರ್ಸ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

•ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

•ನಂತರ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

•ನಿಮಗೆ ಬೇಕಾದ ದಿನಾಂಕ, ಸ್ಥಳ, ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು.

•ಮಾಲೀಕರು HSRP ಯನ್ನು ಅಂಟಿಸಲು ವಾಹನ ತಯಾರಕರು ಅಥವಾ ಡೀಲರ್ ಗೆ ಭೇಟಿ ನೀಡಬೇಕು.

Join Nadunudi News WhatsApp Group