Hyundai 2023: 20 Km ಮೈಲೇಜ್ ಮತ್ತು ಆಕರ್ಷಕ ಲುಕ್, ಹುಂಡೈ ಹೊಸ ಅಗ್ಗದ ಕಾರು ದಾಖಲೆಯ ಮಾರಾಟ.

ಪ್ರತಿ ಲೀಟರ್ ಗೆ 20 ಕಿಲೋಮೀಟರ್ ಮೈಲೇಜ್ ನೀಡುವ ನೂತನ ಮಾದರಿಯ ಕಾರ್ ಅನ್ನು ಬಿಡುಗಡೆ ಮಾಡಿದ ಹ್ಯುಂಡೈ.

Hyundai i20 N line Facelift Launch: ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರುಗಳು ಬಿಡುಗಡೆಯಾಗಿ ಗ್ರಾಹಕರ ಮನ ಸೆಳೆಯುತ್ತಿದೆ. ಇತ್ತೀಚಿಗಂತೂ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ವಿಶೇಷತೆ ಹೊಂದಿರುವ ಕಾರುಗಳು ಬಿಡುಗಡೆಯಾಗಿ ಹೆಚ್ಚು ಬೇಡಿಕೆಯಲ್ಲಿವೆ. ಅದರಲ್ಲೂ ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪದನಾ ಕಂಪನಿ ಆಗಿರುವ ಹುಂಡೈ (Hyundai Motors) ಕಾರುಗಳು ಹೆಚ್ಚು ಹೆಚ್ಚು ಜನಪ್ರಿಯ ಪಡೆದುಕೊಳ್ಳುತ್ತಿದೆ.

Hyundai i20 N line facelift launch
Image Credit: Autocarindia

Hyundai i20 N line facelift
ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಕಾರುಗಳಲ್ಲಿ N Line ಆವೃತ್ತಿಗಳನ್ನು ಪರಿಚಯಿಸಿದ್ದು, i20 Line ಕೂಡ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದೀಗ Hyundai ತನ್ನ ಬಹು ನಿರೀಕ್ಷಿತ Hyundai i20 N line facelift ಅನ್ನು ಬಿಡುಗಡೆಮಾಡಿದೆ. ಈ ನವೀಕೃತ ಮಾದರಿಯು ಹೆಚ್ಚು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Hyundai i20 N line facelift Price And Mileage 
Hyundai i20 N line N6 ಮ್ಯಾನುವೆಲ್ ಮಾದರಿಯ ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 9.99 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. N6 ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಗೆ 11 .10 ಲಕ್ಷ, N8 ಮ್ಯಾನುವೆಲ್ 11 .22 ಲಕ್ಷ ಹಾಗೆ N8 ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು 12 .32 ಲಕ್ಷ ಬೆಲೆ ಪಡೆದಿದೆ.

Hyundai i20 N line ಕಾರ್ ನಲ್ಲಿರುವ 1 =.0 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 120 Hs ಪವರ್ ಮತ್ತು 172 Nm ಟಾರ್ಕ್ ಉತ್ಪದಿಸುವ ಸಾಮರ್ಥ್ಯ ಹೊಂದಿದೆ. Hyundai i20 N line ಪ್ರತಿ ಲೀಟರ್ ಗೆ 20.2 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Hyundai i20 N line facelift Features
Image Credit: Autocarindia

Hyundai i20 N line Features
ಹ್ಯುಂಡೈ ಐ20 ಎನ್ ಲೈನ್ ಫೇಸ್ ಲಿಫ್ಟ್ ನಲ್ಲಿ 6 ಸ್ಪೀಡ್ ಮ್ಯಾನುವೆಲ್ ಗೇರ್ ಬಾಕ್ಸ್, ಡ್ಯುಯೆಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ. Hyundai i20 N line facelift 16 ಇಂಚಿನ ಅಲಾಯ್ ವೀಲ್, ಡಿಸ್ಕ್ ಬ್ರೇಕ್, ಆಕರ್ಷವಾದ ಡ್ಯಾಶ್ ಬೋರ್ಡ್, ರೆಡ್ ಆಯಂಬಿಯೆಂಟ್ ಲೈಟಿಂಗ್ಸ್, ಮೆಟಲ್ ಫಿನಿಷ್ ಹೊಂದಿರುವ ಪೆಡಲ್, 10 .25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ವೈರ್ ಲೆಸ್ ಫೋನ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸಿಂಗಲ್ ಪೇನ್ ಸನ್ ರೂಫ್, ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

Join Nadunudi News WhatsApp Group

Join Nadunudi News WhatsApp Group