Hyundai Tucson: ಹುಂಡೈ ಕಾರ್ ಖರೀದಿಸಲು ಇದು ಬೆಸ್ಟ್ ಟೈಮ್, ಈ SUV ಮೇಲೆ ಭರ್ಜರಿ 2 ಲಕ್ಷ ರೂ ಡಿಸ್ಕೌಂಟ್

ಹ್ಯುಂಡೈ ಟ್ಯೂಸಾನ್ ಕಾರಿನ ಬೆಲೆಯಲ್ಲಿ ಬಾರಿ ರಿಯಾಯಿತಿ, ಇಂದೇ ಬುಕ್ ಮಾಡಿ

Hyundai Tucscon In Discount Price: ಕಾರು ಖರೀದಿ ಮಾಡುವ ಪ್ಲಾನ್ ಇರುವವರು ಬಹಳ ಡಿಸ್ಕೌಂಟ್ ನಲ್ಲಿ ಹ್ಯುಂಡೈ ಟ್ಯೂಸಾನ್ ಕಾರನ್ನು ಖರೀದಿ ಮಾಡಬಹುದಾಗಿದೆ. 2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿ ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಪ್ರಸ್ತುತ ಜನರೇಷನ್ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ (Hyundai Tucson Facelift) ಎಸ್‍ಯುವಿಯನ್ನು 2022ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು.

ಇನ್ನು 2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿ ಕಾಸ್ಮೆಟಿಕ್ ವಿನ್ಯಾಸ ಮತ್ತು ಒಳಾಂಗಣ ಬದಲಾವಣೆಗಳೊಂದಿಗೆ ಬರುತ್ತದೆ. ಆದರೆ ಎಂಜಿನ್ ಆಯ್ಕೆಗಳು ಒಂದೇ ಆಗಿರುತ್ತವೆ. ಭಾರತದಲ್ಲಿ ಆಯ್ದ ಹ್ಯುಂಡೈ ಡೀಲರ್‌ಶಿಪ್‌ಗಳು ಈ ತಿಂಗಳು ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಪ್ರಯೋಜನಗಳು ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳ ರೂಪದಲ್ಲಿ ಲಭ್ಯವಿದೆ.

Top 5 Cheapest SUV Cars
Image Credit: autocarindia

ಹ್ಯುಂಡೈ ಟ್ಯೂಸಾನ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ

2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗದ ಫಾಸಿವು ಬ್ರ್ಯಾಂಡ್‌ನ ಸಿಗ್ನೇಚರ್ ಫ್ರಂಟ್ ಗ್ರಿಲ್ ಮತ್ತು ಸ್ವಲ್ಪ ಪರಿಷ್ಕೃತ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರಮುಖ ಸ್ಕಿಡ್ ಪ್ಲೇಟ್‌ಗಳು ಮತ್ತು ಹೊಸ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ. ಈ ಹೊಸ ಟ್ಯೂಸಾನ್ ವಿನ್ಯಾಸ ಮತ್ತಷ್ಟು ಸೋರ್ಟಿಯಾಗಿದೆ. 2024ರ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0-ಲೀಟರ್ ಪೆಟ್ರೋಲ್ ಮತ್ತು ಟರ್ಬೊ ಡೀಸೆಲ್ ಎಂಜಿನ್‌ಗಳೊಂದಿಗೆ ನೀಡಲಾಗುತ್ತದೆ.

ಈ ಎಂಜಿನ್ 156 bhp ಪವರ್ ಮತ್ತು 192 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಅದು ಅಲ್ಕಾಜರ್‌ಗೆ 160 bhp ಪವರ್ ಅನ್ನು ಉತ್ಪಾದಿಸುತ್ತದೆ.

Join Nadunudi News WhatsApp Group

ಇನ್ನು ಸೆಲ್ ಆವೃತ್ತಿಯು 2.0-ಲೀಟರ್ ಯೂನಿಟ್ ಅನ್ನು ಪಡೆಯುತ್ತದೆ, ಇದು 186 bhp ಮತ್ತು 416 Nm ಟಾರ್ಕ್ ಅನ್ನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎ‍ಯುವಿಯು ಮಲ್ಟಿ-ಟೆರೈನ್ ಮೋಡ್‌ಗಳೊಂದಿಗೆ AWD ಸೆಟಪ್‌ನೊಂದಿಗೆ ಬರುತ್ತದೆ.

Hyundai Tucson
Image CREDIT: ABP Live

ಹ್ಯುಂಡೈ ಟ್ಯೂಸಾನ್ ಕಾರಿನ ರಿಯಾಯಿತಿ ಕೊಡುಗೆ

ಹ್ಯುಂಡೈ ಟ್ಯೂಸಾನ್ ಎಸ್‍ಯುವಿ ಯ ಮೇಲೆ ರೂ.2 ಲಕ್ಷ ನಗದು ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿ 2023ರ ಟ್ಯೂಸಾನ್ ಎಸ್‍ಯುವಿಯ ಮೇಲೆ ಅನ್ವಯಿಸುತ್ತದೆ. ಮುಂಬರುವ ವಾರಗಳಲ್ಲಿ ಸ್ಥಳೀಯ ಡೀಲರ್‌ಶಿಪ್‌ಗಳಿಗೆ ಆಗಮಿಸಬಹುದಾದ 2024ರ ಟ್ಯೂಸಾನ್ ಎಸ್‍ಯುವಿಯ ಮೇಲೆ ರೂ.50,000 ರಿಯಾಯಿತಿಯನ್ನು ನೀಡುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಹತ್ತಿರದ ಹ್ಯುಂಡೈ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು .

Join Nadunudi News WhatsApp Group