IMPS Update: UPI ಪೇಮೆಂಟ್ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್, ನಿಯಮ ಬದಲಿಸಿದ RBI

UPI ಹಣ ಪಾವತಿಯ ನಿಯಮ ಬದಲಿಸಿದ RBI, ಹೊಸ ನಿಯಮ ಜಾರಿ

IMPS Payment Limit Update: ಸದ್ಯ ದೊಡ್ಡ ಮೊತ್ತದ ಹಣದ ಪಾವತಿಗೆ ಬಳಸಲಾಗುತ್ತಿದ್ದ IMPS ಅಥವಾ Immediate Payment Service ನಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ. ಈ ಮೂಲಕ ಆನ್ಲೈನ್ ನಲ್ಲಿ ಹಣ ಪಾವತಿಸುವವರಿಗೆ ಹೊಸ ನಿಯಮ ಜಾರಿಯಾಗಲಿದೆ. ಫೆ. 1 ರಿಂದ IMPS ಮೂಲಕ ಹಣ ಪಾವತಿಯ ವಿಧಾನ ಬದಲಾಗಲಿದೆ. NPCI ಹೊಸ ನೆಟ್ ಬ್ಯಾಂಕಿಂಗ್ ನಿಯಮವನ್ನು ಜಾರಿಮಾಡಿದೆ.

New Rule For IMPS
Image Credit: The Hans India

ಆನ್ಲೈನ್ ಮೂಲಕ ಹಣ ಪಾವತಿಯ ನಿಯಮ ಬದಲಿಸಿದ RBI
ನೀವು NIFT, RTGS ಮೂಲಕ ಹಣ ಕಳುಹಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ IMPS ನಲ್ಲಿ ತಕ್ಷಣವೇ ಹಣವನ್ನು ವರ್ಗಾವಣೆ ಮಾಡಬಹುದು. ಈಗ National Payments Corporation ಐಎಂಪಿಎಸ್ ವ್ಯವಸ್ಥೆಯನ್ನು ಸರಳಗೊಳಿಸಿದೆ. NEFT ಮತ್ತು IMPS ನಲ್ಲಿ ಬೆನಿಫಿಶಿಯರಿ ಸೇರಿಸಿಕೊಳ್ಳಬೇಕು. ಯಾರಿಗೆ ಹಣ ಕಳುಹಿಸಬೇಕೋ ಅವರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ ಎಸ್ ಸಿ ಕೋಡ್ ಇತ್ಯಾದಿಗಳನ್ನು ನಮೂದಿಸಬೇಕು.

UPI ಪೇಮೆಂಟ್ ಮಾಡುವವರಿಗೆ ಇಂದಿನಿಂದ ಹೊಸ ರೂಲ್ಸ್
ಹೊಸ ನಿಯಮದ ಪ್ರಕಾರ, ಇನ್ನುಮುಂದೆ IMPS ಮೂಲಕ ವಹಿವಾಟು ಮಾಡಲು ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನಮೂದಿಸುವ ಅಗತ್ಯವಿಲ್ಲ. ಬೆನಿಫಿಶಿಯರಿ ಸೇರಿಸುವ ಅಗತ್ಯವೂ ಇಲ್ಲ. ಪಾವತಿದಾರರ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರನ್ನು ಮಾತ್ರ ನಮೂದಿಸಿದರೆ ಸಾಕಾಗುತ್ತದೆ. ಈ ಮೂಲಕ 5 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದು. ಈ ಹೊಸ ನಿಯಮ ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಇಂದಿಂದ ನೀವು ಯಾವುದೇ ಫಲಾನುಭವಿಯನ್ನು ಸೇರಿಸದೆಯೇ IMPS ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ರೂ. 5 ಲಕ್ಷದವರೆಗೆ ಕಳುಹಿಸಲು ಸಾಧ್ಯವಾಗುತ್ತದೆ.

IMPS Payment Limit
Image Credit: Gizbot

IMPS ಮೂಲಕ ಹಣ ವರ್ಗಾಯಿಸುವುದು ಹೇಗೆ..?
•ಮೊದಲು ನೀವು IMPS ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದು ಹೊಸ ನಿಧಿ ವರ್ಗಾವಣೆ ಸೌಲಭ್ಯವಾಗಿದೆ.

•ಇದರಲ್ಲಿ ನೀವು ಮೊಬೈಲ್ ಸಂಖ್ಯೆ ಮತ್ತು ಫಲಾನುಭವಿ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಬೇಕು.

Join Nadunudi News WhatsApp Group

•ಇದರಲ್ಲಿ ನೀವು IMPS ಸಂಖ್ಯೆಯನ್ನು ನಮೂದಿಸಬೇಕಾಗಿಲ್ಲ.

•ನಂತರ ನೀವು ವರ್ಗಾಯಿಸಲು ಬಯಸುವ ಹಣವನ್ನು ಆಯ್ಕೆ ಮಾಡಬೇಕು. ಇದರ ಮಿತಿ
5 ಲಕ್ಷ ರೂ. ಆಗಿದೆ.

•ಇದರ ನಂತರ ನೀವು ದೃಢೀಕರಣ ಬಟನ್ ಅನ್ನು ಕ್ಲಿಕ್ ಮಾಡಬೇಕು.

•ನಂತರ ನೀವು OTP ಅನ್ನು ನಮೂದಿಸಿದ ಮೇಲೆ ನಿಮ್ಮ ಪೇಮೆಂಟ್ ಪೂರ್ಣಗೊಳ್ಳುತ್ತದೆ.

Join Nadunudi News WhatsApp Group