Income Tax India: ಇಂತಹ ಜನರಿಗೆ ಬರುತ್ತದೆ ಆದಾಯ ತೆರಿಗೆ ನೋಟೀಸ್, ಹಣದ ವ್ಯವಹಾರ ಮಾಡುವವರು ಎಚ್ಚರ.

ಆದಾಯ ತೆರಿಗೆ ಪಾವತಿ ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನ ಮಾಡಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬರಲಿದೆ.

Income Tax Return 2023: ಇದೀಗ ಏಪ್ರಿಲ್ 1 2023 ರಿಂದ ಹೊಸ ಹಣಕಾಸು ವರ್ಷ (Financial Year) ಆರಂಭವಾಗಿದೆ. ಈ ಹೊಸ ಹಣಕಾಸು ವರ್ಷ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ತರುತ್ತಿದೆ. ಜನಸಾಮಾನ್ಯರು ಇದೀಗ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಇನ್ನು ಈ ಹಣದುಬ್ಬರದ ಏರಿಕೆಯ ಪರಿಣಾಮವಾಗಿ ಜನತೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.

Income Tax Return 2023
Image Source: India Today

ಆದಾಯ ತೆರಿಗೆ ನೋಟೀಸ್
ಇತ್ತೀಚೆಗಂತೂ ತೆರಿಗೆಗೆ (Tax) ಸಂಬಂಧಿತ ನಿಯಮಗಳು ಕೂಡ ಬದಲಾಗುತ್ತಿದೆ. ಆದಾಯ ತೆರಿಗೆ (Income Tax) ಪಾವತಿದಾರರು ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಕಟ್ಟುವ ಪರಿಸ್ಥಿತಿ ಬಂದೊದಗಿದೆ. ಹಾಗೆಯೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯಲ್ಲಿ ಈ ಬಾರಿ ಬದಲಾವಣೆ ಆಗಲಿದೆ. ಸಾಮಾನ್ಯವಾಗಿ ಆದಾಯ ತೆರಿಗೆಗೆ ಒಳಪಡುವವರು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು.

ಪ್ರಸ್ತುತ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿ ಇದೆ. ಇದೀಗ ಐಟಿ ರಿಟರ್ನ್ ಆದ ಮೇಲು ಕೂಡ ಇಲಾಖೆಯಿಂದ ನೋಟಿಸ್ ಬರಬಹುದು. ಯಾವ ಕಾರಣಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಕಳುಹಿಸುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

Income Tax Return 2023
Image Source: Times Of India

ಯಾವ ಸಂದರ್ಭದಲ್ಲಿ ಆದಾಯ ತೆರಿಗೆಯಿಂದ ನೋಟೀಸ್ ಬರುತ್ತದೆ
ಸಾಮನ್ಯವಾಗಿ ಐಟಿ ರಿಟರ್ನ್ ಫೈಲ್ ಮಾಡದೆ ಇರುವ ಸಮಯದಲ್ಲಿ ಹೆಚ್ಚಾಗಿ ನೋಟಿಸ್ ಬರುತ್ತದೆ. ಐಟಿ ಆರ್ ಫೈಲ್ ಮಾಡಿಯೂ ಕೂಡ ಬೇರೆ ಬೇರೆ ಕಾರಣಗಳಿವೆ ನೋಟಿಸ್ ಬರುತ್ತದೆ.

ನೈಜ್ಯ ಆದಾಯ ಮತ್ತು ಘೋಷಿತ ಆದಾಯದಲ್ಲಿ ಹೆಚ್ಚು ವ್ಯತ್ಯಾಸ ಇದ್ದರೆ, ದೊಡ್ಡ ಮೊತ್ತದ ವಹಿವಾಟಿನ ವಿವರ ಮುಚ್ಚಿಟ್ಟಿದ್ದರೆ ದಾಖಲೆಗಳನ್ನು ಸರಿಯಾಗಿ ನೀಡದಿದ್ದರೆ, ಐಟಿ ರಿಟರ್ನ್ ಸಲ್ಲಿಕೆಯ ಸಮಯ ಮುಗಿದಿದ್ದರೆ, ನಿಗದಿಪಡಿಸಿದ ಕ್ಲೈಮ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಡಿಡಕ್ಷನ್ ಕ್ಲೈಮ್ ಮಾಡಿದರೆ ಐಟಿ ಇಲಾಖೆಯಿಂದ ನೋಟೀಸ್ ಬರುತ್ತದೆ.

Join Nadunudi News WhatsApp Group

Income Tax Return 2023
Image Source: India Today

Join Nadunudi News WhatsApp Group