Income Tax 2023: ಇಂತಹ ಜನರು ತಮ್ಮ ಆದಾಯಕ್ಕೆ 30% ತೆರಿಗೆ ಪಾವತಿ ಮಾಡಬೇಕು, ಕೇಂದ್ರದ ಆದೇಶ.

ಇಂತವರು ತಮ್ಮ ಆದಾಯಕ್ಕೆ ಕಡ್ಡಾಯವಾಗಿ ಶೇಕಡಾ 30 ರಷ್ಟು ತೆರಿಗೆ ಪಾವತಿ ಮಾಡಬೇಕು ಎಂದು ಆದೇಶ ಹೊರಡಿಸಿದೆ ಆದಾಯ ತೆರಿಗೆ ಇಲಾಖೆ.

Income Tax New Rules 2023: ಹೊಸ ಹಣಕಾಸು ವರ್ಷದ (New Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ. ಇನ್ನು ಇತ್ತೀಚಿಗಂತೂ ತೆರಿಗೆ (Tax) ಸಂಬಂಧಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ವಿನಾಯಿತಿಗಳು ಲಭ್ಯವಿದೆ.

ಇದೀಗ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಲಭಿಸಿದೆ. ಯಾರು ತೆರಿಗೆಯನ್ನು ಕಟ್ಟಬೇಕು ಹಾಗೂ ಯಾರಿಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗಲಿದೆ ಎನ್ನುವ ಬಗ್ಗೆ ಇದೀಗ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

Income Tax Latest Update
Image Source: Vijay Karnataka

ಆದಾಯ ತೆರಿಗೆಯ ನಿಯಮ
2023-24 ರ ಹಣಕಾಸು ವರ್ಷದ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಹಲವು ಘೋಷಣೆಗಳನ್ನು ಮಾಡಿದ್ದಾರೆ. ಈ ಪ್ರಕಟಣೆಗಳ ಮೂಲಕ ಇದರೊಂದಿಗೆ ಹೊಸ ಆದಾಯ ತೆರಿಗೆ ಪದ್ದತಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಹೊಸ ಆದಾಯ ತೆರಿಗೆ ಆಡಳಿತದ ಅಡಿಯಲ್ಲಿ ತೆರಿಗೆಯನ್ನು ಸಲ್ಲಿಸಿದರೆ ನೀವು 30% ಯನ್ನು ಪಾವತಿಸಬೇಕಾಗಬಹುದು.

Income Tax Latest Update
Image Source: India.com

ಹೊಸ ತೆರಿಗೆ ಪದ್ಧತಿ
ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ಆದಾಯ ತೆರಿಗೆ ಕೆಲವು ನಿಯಮಗಳನ್ನ ಬದಲಾಯಿಸಲಾಗಿದೆ. ಇದರ ಅಡಿಯಲ್ಲಿ ವಾರ್ಷಿಕ 3 ಲಕ್ಷ ರೂಪಾಯಿ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಸಲ್ಲಿಸಬೇಕಾಗಿಲ್ಲ. ಇದಾದ ನಂತರ ವಾರ್ಷಿಕ 3 ರಿಂದ 6 ಲಕ್ಷ ರೂಪಾಯಿಗಳ ಆದಾಯದ ಮೇಲೆ 6 ರಿಂದ 9 ಲಕ್ಷ ರೂಪಾಯಿಗಳ ಆದಾಯದ ಮೇಲೆ 10 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಇದಾದ ನಂತರ ವಾರ್ಷಿಕ 9 ರಿಂದ 12 ಲಕ್ಷ ರೂಪಾಯಿಗಳ ಆದಾಯದ ಮೇಲೆ ಶೇಕಡಾ 15 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಯಾರೊಬ್ಬರ ವಾರ್ಷಿಕ ಆದಾಯವು 15 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಅಂತಹ ಜನರು 30 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Income Tax Latest Update
Image Source: India Today

Join Nadunudi News WhatsApp Group