Income Tax Rules: ನಗದು ಹಣದ ವ್ಯವಹಾರ ಮಾಡುವವರಿಗೆ ತೆರಿಗೆ ಇಲಾಖೆಯಿಂದ ಹೊಸ ನಿಯಮ, ಬರಲಿದೆ ನೋಟಿಸ್.

ಹೆಚ್ಚಿನ ನಗದು ಹಣವನ್ನ ವ್ಯವಹಾರ ಮಾಡುವ ಜನರಿಗೆ ತೆರಿಗೆ ಇಲಾಖೆ ಈಗ ನೋಟೀಸ್ ಕಳುಹಿಸಲು ಮುಂದಾಗಿದೆ.

Income Tax New Rule: ಇದೀಗ ಆದಾಯ ತೆರಿಗೆ ಇಲಾಖೆಯಿಂದ (Income tax) ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಆದಾಯ ತೆರಿಗೆ ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೆಚ್ಚಿನ ನಗದು ವಹಿವಾಟನ್ನು ನಡೆಸುತ್ತಿರುವವರು ಇನ್ನು ಮುಂದೆ ಜಾಗರೂಕರಾಗಿರುವುದು ಉತ್ತಮ.

ನಗದು ರೂಪದಲ್ಲಿ ಹೆಚ್ಚು ವಹಿವಾಟು ನಡೆಸುವ ಜನರ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ ವಹಿಸಿದ್ದು ನಿಮ್ಮ ಆದಾಯಯಕ್ಕೆ ಸರಿಯಾದ ದಾಖಲೆ ಇಲ್ಲದಿದ್ದರೆ ಐಟಿ ಇಲಾಖೆಯು ನಿಮ್ಮ ಹೆಸರಿನಲ್ಲಿ ನೋಟಿಸ್ ನೀಡಬಹುದು.

Income Tax New Rule
Image Source: The Economic Times

ನಿಮ್ಮ ವಹಿವಾಟಿನಲ್ಲಿ ನೀವು ಹೆಚ್ಚು ನಗದು ವಹಿವಾಟನ್ನು ಹೊಂದಿದ್ದರೆ ನಂತರ ಹಣದ ಮೂಲದ ಬಗ್ಗೆ ಆದಾಯ ತೆರಿಗೆ ಇಲಾಖೆಯು ನಿಮ್ಮ ಬಳಿ ದಾಖಲೆಯನ್ನು ಕೇಳುತ್ತದೆ. ನಗದು ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳೇನು ಎಂಬುದನ್ನು ನೀವು ತಿಳಿದುಕೊಳ್ಳುವುದು ಉತ್ತಮ.

Income Tax New Rule
Image Source: Vijay Karnataka

ತೆರಿಗೆ ಇಲಾಖೆಯ ಹೊಸ ನಿಯಮ
ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಯಾವುದೇ ಬ್ಯಾಂಕ್ ಖಾತೆಯಲ್ಲಿ ನೀವು 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ಆದಾಯ ತೆರಿಗೆ ಇಲಾಖೆಯು ಅದರ ಮಾಹಿತಿಯನ್ನು ಕೇಳಬಹುದು.

ಚಾಲ್ತಿ ಖಾತೆಯಲ್ಲಿ ಅದರ ಗರಿಷ್ಠ ಮಿತಿ 50 ಲಕ್ಷ ರೂಪಾಯಿಗಳಾಗಿವೆ. ಅದೇ ಸಮಯದಲ್ಲಿ ಎಫ್ ಡಿ ಯಲ್ಲಿ ಸಹ ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡುವಂತಿಲ್ಲ. ನೀವು ಇದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಲು ಬಯಸಿದರೆ ನೀವು ಆನ್ ಲೈನ್ ಚೆಕ್ ಮೂಲಕ ಪಾವತಿಸಬಹುದು.

Join Nadunudi News WhatsApp Group

Income Tax New Rule
Image Source: India Today

ಆದಾಯ ತೆರಿಗೆ ಇಲಾಖೆ ನೋಟಿಸ್
ಇನ್ನು ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಬಳಸಿದರೆ ಅದರ ಮಾಹಿತಿಯನ್ನು ನಿಮ್ಮಿಂದ ಪಡೆಯಬಹುದು. ಅದೇ ಸಮಯದಲ್ಲಿ ನೀವು ಹೂಡಿಕೆಗೆ ಹೆಚ್ಚಿನ ಹಣವನ್ನು ಬಳಸಲಾಗುವುದಿಲ್ಲ.

ಯಾವುದೇ ಷೇರುಗಳು, ಬಾಂಡ್ ಗಳು ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ನಗದು ವಹಿವಾಟು ನಡೆಸುತ್ತಿದ್ದರೆ ಇದಕ್ಕಾಗಿ ನೀವು ಆರ್ಥಿಕ ವರ್ಷದಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಲು ಆಗುವುದಿಲ್ಲ. ಈ ನಿಯಮವನ್ನು ನೀವು ಉಲ್ಲಂಘಿಸಿದರೆ ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ನೋಟಿಸ್ ಬರುತ್ತದೆ.

Join Nadunudi News WhatsApp Group