Dubai Gold: ದುಬೈ ನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟು, ಭಾರತದಲ್ಲಿ ಏಕೆ ಚಿನ್ನದ ಬೆಲೆ ಅಧಿಕ.

ದುಬೈ ಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟು ಅಧಿಕವಾಗಿದೆ ತಿಳಿದುಕೊಳ್ಳಿ.

India And Dubai Gold Price: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಗಣನೀಯ ಏರಿಕೆಯಾಗುತ್ತಿದೆ. ಚಿನ್ನದ ಖರೀದಿಗೆ ಯಾವುದೇ ರೀತಿಯ ಅವಕಾಶ ಸಿಗುತ್ತಿಲ್ಲ.ಆಭರಣ ಪ್ರಿಯರು ಚಿನ್ನದ ಬೆಲೆ ಯಾವಾಗ ಇಳಿಕೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿಯೇ ಕಾಯುತ್ತಿದ್ದಾರೆ.

ಇನ್ನು ಕಳೆದ ಎರಡು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡು ಬಂದಿದೆ. ಆದರೆ ಕಳೆದ ನಾಲ್ಕು ದಿನದಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.

Find out how high the price of gold in India is compared to Dubai.
Image Credit: Alromaizan

ದಿನೇ ದಿನೇ ದುಬಾರಿಯಾಗುತ್ತಿದೆ ಚಿನ್ನ
ಚಿನ್ನದ ಬೆಲೆ ಇಳಿಕೆಯಾದರೆ ಹತ್ತು ಗ್ರಾಂ ನಲ್ಲಿ ಕೇವಲ 100 ರಿಂದ 200 ರೂ. ಮಾತ್ರ ಇಳಿಕೆಯಾಗುತ್ತದೆ. ಆದರೆ ಚಿನ್ನದ ಬೆಲೆಯಲ್ಲಿನ ಏರಿಕೆಯು ಒಂದೇ ಬಾರಿಗೆ 500 ರಿಂದ 700 ರೂ. ತಲುಪುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆರುತ್ತಿದೆ. ಚಿನ್ನದ ಮೇಲಿನ ಬೇಡಿಕೆಯು ಹೆಚ್ಚಿದ್ದು ಬೆಲೆ ಕೂಡ ಹೆಚ್ಚಾಗುತ್ತಿದೆ.

ಇನ್ನು ಬೇರೆ ದೇಶಗಳಿಗೆ ಹೋಲಿಸಿದರೆ ಚಿನ್ನದ ಬೆಲೆ ಭಾರತದಲ್ಲಿ ಹೆಚ್ಚು ಏರಿಕೆಯಾಗುತ್ತದೆ. ಇದೀಗ ದುಬೈ ಮತ್ತು ದೇಶಿಯ ಚಿನ್ನದ ಬೆಲೆಯ ನಡುವಿನ ವ್ಯತ್ಯಾಸ ಎಷ್ಟಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
ದೇಶಿಯ ಮಾರುಕಟ್ಟೆಯಲ್ಲಿ ಇಂದು ಒಂದು ಗ್ರಾಂ ಚಿನ್ನದ ಬೆಲೆ 5,435 ರೂ. ಆಗಿದೆ. ಹತ್ತು ಗ್ರಾಮ ಚಿನ್ನದ ಬೆಲೆ 54,350 ರೂ ಆಗಿದ್ದು, ಎಂಟು ಗ್ರಾಂ ಚಿನ್ನದ ಬೆಲೆ 43,480 ರೂ. ಆಗಿದೆ.

Join Nadunudi News WhatsApp Group

Find out how high the price of gold in India is compared to Dubai.
Image Credit: Thehansindia

ಇನ್ನು ನೂರು ಗ್ರಾಂ ಚಿನ್ನದ ಬೆಲೆಯ ಬಗ್ಗೆ ಹೇಳುವುದಾದರೆ, ಇಂದಿನ ನೂರು ಗ್ರಾಂ ಚಿನ್ನದ ಬೆಲೆ ದೇಶಿಯ ಮಾರುಕಟ್ಟೆಯಲ್ಲಿ 5,43,500 ರೂ. ಗೆ ತಲುಪಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯೂ ಕೂಡ ದೇಶಿಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿದೆ. ಹತ್ತು ಗ್ರಾಂ ಚಿನ್ನದ ಬೆಲೆ 59,280 ರೂ. ಆಗಿದ್ದು ನೂರು ಗ್ರಾಂ ಚಿನ್ನ 5,92,800 ರೂ. ತಲುಪಿದೆ.

ದುಬೈ ನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟು
ದುಬೈನಲ್ಲಿನ ಚಿನ್ನದ ಬೆಲೆ ಭಾರತೀಯ ಚಿನ್ನಗಿಂತಲೂ ಸ್ವಲ್ಪ ಕಡಿಮೆ ಇದೆ. ದೇಶಿಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 5 ಸಾವಿರ ಗಡಿ ದಾಟಿದರೆ ದುಬೈನಲ್ಲಿ ಒಂದು ಗ್ರಾಂ ಚಿನ್ನ 4,803 ರೂ. ಆಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ 48,033 ರೂ ಆಗಿದ್ದು, ಎಂಟು ಗ್ರಾಂ ಚಿನ್ನದ ಬೆಲೆ 38426 ರೂ. ಆಗಿದೆ.

Find out how high the price of gold in India is compared to Dubai.
Image Credit: Retailjewellerindia

ಇನ್ನು ದುಬೈನಲ್ಲಿ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 48,0334 ರೂ. ಗೆ ತಲುಪಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯೂ ಕೂಡ ದುಬೈನಲ್ಲಿ ಕಡಿಮೆ ಇದೆ. ಹತ್ತು ಗ್ರಾಂ ಚಿನ್ನದ ಬೆಲೆ 51,882 ರೂ. ಆಗಿದ್ದು ನೂರು ಗ್ರಾಂ ಚಿನ್ನದ ಬೆಲೆ 5,18,828 ರೂ. ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ  ಏರಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಯ ಏರಿಕೆಯು ದೇಶಿಯ ಮಾರುಕಟ್ಟೆಯ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಬಹುದಾಗಿದೆ.

Join Nadunudi News WhatsApp Group