Indian Railway: ಮೇ 1 ರಿಂದ ದೇಶದ ಎಲ್ಲಾ ರೈಲುಗಳು ಬಂದ್, ರೈಲ್ವೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್

ಮೇ 1 ರಿಂದ ದೇಶದ ಎಲ್ಲಾ ರೈಲುಗಳು ಬಂದ್, ರೈಲ್ವೆ ಪ್ರಯಾಣಿಕರ ಗಮನಕ್ಕೆ

Indian Railway latest Update: ಸದ್ಯ ದೇಶದಲ್ಲಿ ಹಳೆಯ ಪಿಂಚಣಿಯ ಜಾರಿಗಾಗಿ ಸರ್ಕಾರೀ ನೋಕಾರರು ಸಾಕಷ್ಟು ಸಮಯದಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಸರ್ಕಾರವು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯ ಬಗ್ಗೆ ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆದರೆ ನಿಖರವಾಗಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಆಗುತ್ತದಾ ಇಲ್ಲವ ಎನ್ನುವ ಬಗ್ಗೆ ಈವರೆಗೂ ಹೇಳಿಲ್ಲ. ಈ ಕಾರಣಕ್ಕೆ ರೈಲ್ವೆ ನೌಕರರು ಹಾಗೂ ಕಾರ್ಮಿಕರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಮೇ 1 ರಿಂದ ರೈಲಿಗಳನ್ನ ರದ್ದು ಮಾಡಲು ತೀರ್ಮಾನವನ್ನ ಮಾಡಲಾಗಿದೆ 

Indian Railway News Update
Image Credit: Krishijagran

ಮೇ 1 ರಿಂದ ದೇಶದ ಎಲ್ಲಾ ರೈಲುಗಳು ಬಂದ್
ಇದೀಗ ಮೇ 1 ರಿಂದ ದೇಶದ ಎಲ್ಲ ರೈಲುಗಳು ಬಂದ್ ಆಗಲಿವೆ ಎನ್ನುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ದೇಶದಲ್ಲಿ ಹಳೆಯ ಪಿಂಚಣಿ ವ್ಯಸ್ಥೆ ಜಾರಿಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.  ಹಳೆಯ ಪಿಂಚಣಿ ಯೋಜನೆ (OPS) ಜಾರಿಗಾಗಿ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮೇ 1 ರಿಂದ ಭಾರತದಾದ್ಯಂತ ಎಲ್ಲಾ ರೈಲು ಸೇವೆಗಳನ್ನು ನಿಲ್ಲಿಸುವುದಾಗಿ ರೈಲ್ವೆ ನೌಕರರು ಮತ್ತು ಕಾರ್ಮಿಕರ ಹಲವಾರು ಒಕ್ಕೂಟಗಳು ಬೆದರಿಕೆ ಹಾಕಿವೆ.

ಈ ಒಕ್ಕೂಟವು Joint Forum for Restoration of Old Pension Scheme ಅಡಿಯಲ್ಲಿ ಒಗ್ಗೂಡಿವೆ. JFROPS ಕೋರ್ ಕಮಿಟಿ ಸಭೆಯು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಮೇ 1, 2024 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ ಎಂದು JFROPS ಸಂಚಾಲಕ ಮತ್ತು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ತಿಳಿಸಿದ್ದಾರೆ.

Indian Railway latest Updates
Image Credit: Businesstoday

ರೈಲ್ವೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್
ಹೊಸ ಪಿಂಚಣಿ ಯೋಜನೆಯ ಬದಲಿಗೆ ಹಳೆಯ ವ್ಯಾಖ್ಯಾನಿತ ಖಾತರಿ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕೆಂಬ ನಮ್ಮ ಬೇಡಿಕೆಯನ್ನು ಸರ್ಕಾರ ಸಂಪೂರ್ಣವಾಗಿ ಪಾಲಿಸಿಲ್ಲ. ಈಗ ನೇರ ಕ್ರಮಕ್ಕೆ ಮುಂದಾಗದೆ ಬೇರೆ ದಾರಿಯಿಲ್ಲ. JFROPS ಅಡಿಯಲ್ಲಿ ವಿವಿಧ ಫೆಡರೇಶನ್‌ ಗಳ ಪ್ರತಿನಿಧಿಗಳು ಮಾರ್ಚ್ 19 ರಂದು ರೈಲ್ವೆ ಸಚಿವಾಲಯಕ್ಕೆ ಜಂಟಿಯಾಗಿ ಅಧಿಕೃತ ಸೂಚನೆಯನ್ನು ನೀಡಲಿದ್ದಾರೆ.

ಸರ್ಕಾರಿ ನೌಕರರ ಪ್ರತಿಭಟನೆ, ಗುಪ್ತಚರ ಮಾಹಿತಿ ನಾವು ಹೊರಡಿಸುವ ಈ ಸೂಚನೆಯು ಅವರಿಗೆ ರಾಷ್ಟ್ರವ್ಯಾಪಿ ಮುಷ್ಕರ ಮತ್ತು ಮೇ 1 ರಿಂದ ಎಲ್ಲಾ ರೈಲು ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸುತ್ತದೆ. ಎಂದು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group