Home Loan Tax: ಮನೆ ಕಟ್ಟುವವರಿಗೆ ಮತ್ತು ಖರೀದಿಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಹೊಸ ತೆರಿಗೆ ನಿಯಮ ಜಾರಿ

ಹೊಸ ಮನೆ ಖರೀದಿಸುವವರಿಗೆ ಜಾರಿಗೆ ಬಂತು ಹೊಸ ತೆರಿಗೆ ನಿಯಮ

Interest Concession On Home Loan: ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmaala Sitharaman) ಅವರು ಫೆಬ್ರವರಿ 1 2024 ರಂದು 2024 Budget ಮಂಡಿಸಲಿದ್ದಾರೆ. ಈ ವೇಳೆ ವಿತ್ತ ಸಚಿವೆ ಆದಾಯ ತೆರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಬಜೆಟ್ ನಲ್ಲಿ ಹೋಮ್ ಲೋನ್ ಸಂಬಂಧಿಸಿದಂತೆ ಬದಲಾವಣೆ ಆಗಲಿದೆ.

2024 Budget ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ. ತೆತೆರಿಗೆದಾರರು ತೆರಿಗೆ ವಿನಾಯಿತಿಯ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫೆಬ್ರವರಿ 1 ರಂದು ಮಂಡನೆಯಾಗಲಿರುವ ಬಜೆಟ್ ನಲ್ಲಿ ತೆರಿಗೆ ವಿನಾಯಿತಿಯ ಬಗ್ಗೆ ಘೋಷಣೆ ಹೊರಬೀಳಲಿದೆ. ಸದ್ಯ ಮನೆ ಕಟ್ಟುವವರಿಗೆ ಮತ್ತು ಖರೀದಿಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್ ಹೊರಬಿದ್ದಿದೆ.

Interest Concession On Home Loan
Image Credit: Estatedrive

ಮನೆ ಕಟ್ಟುವವರಿಗೆ ಮತ್ತು ಖರೀದಿಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಸ್ವಂತ ಮನೆ ಹೊಂದುವ ಜನರ ಕನಸನ್ನು ನನಸಾಗಿಸಲು, ಸರ್ಕಾರವು ಗೃಹ ಸಾಲದ ಮೇಲಿನ ರಿಯಾಯಿತಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಮಧ್ಯಂತರ ಬಜೆಟ್‌ ನಲ್ಲಿ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆಯನ್ನು ಸರ್ಕಾರ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಯೋಜನೆಗೆ 60,000 ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗಿದೆ. ಯೋಜನೆಯಡಿಯಲ್ಲಿ, ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು ಗೃಹ ಸಾಲ ಪಡೆಯುವವರು 3 ರಿಂದ 6 ಪ್ರತಿಶತದಷ್ಟು ಬಡ್ಡಿ ರಿಯಾಯಿತಿಯನ್ನು ಪಡೆಯಬಹುದು.

Home Loan Update 2024
Image Credit: Financialexpress

ಗೃಹ ಸಾಲದ ಮೇಲೆ ಬಡ್ಡಿ ರಿಯಾಯಿತಿ
ಮಧ್ಯಂತರ ಬಜೆಟ್ ನಲ್ಲಿ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ. ಈ ಹೊಸ ಯೋಜನೆಯ ಅಡಿಯಲ್ಲಿ ನೀವು ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು ಗೃಹ ಸಾಲದ ಮೇಲಿನ ಬಡ್ಡಿ ರಿಯಾಯಿತಿಯನ್ನು ಪಡೆಯಬಹುದು. ಗೃಹ ಸಾಲದ ಬಡ್ಡಿಯಲ್ಲಿ ಶೇ.3-6ರಷ್ಟು ಬಡ್ಡಿ ರಿಯಾಯಿತಿ ದೊರೆಯಲಿದೆ ಎನ್ನಲಾಗಿದೆ. ಫೆಬ್ರವರಿಯಲ್ಲಿ ಗೃಹ ಸಾಲದ ಬಡ್ಡಿ ರಿಯಾಯಿತಿಯ ಬಗ್ಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಘೋಷಣೆ ಹೊರಡಿಸಲಿದ್ದಾರೆ.

Join Nadunudi News WhatsApp Group

Join Nadunudi News WhatsApp Group