Investment Plans: ಮಹಿಳೆಯರೇ ಈಗ ನೀವಾಗಬಹುದು ಲಕ್ಷಾಧಿಪತಿ, ಗೃಹಿಣಿಯರಿಗಾಗಿ ಕೇಂದ್ರದಿಂದ ಯೋಜನೆ ಬಿಡುಗಡೆ

ಈ ಯೋಜನೆಯಲ್ಲಿ ಮಹಿಳೆಯರು ಹೂಡಿಕೆ ಮಾಡಿದರೆ ಕೆಲವೇ ಸಮಯದಲ್ಲಿ ಲಕ್ಷ ಲಕ್ಷ ಲಾಭ

Small Investment Plans For Housewives: ಭಾರತದಲ್ಲಿ ಮಹಿಳೆಯರು ಉಳಿತಾಯದ ವಿಷಯದಲ್ಲಿ ಸ್ವಲ್ಪ ಮುಂದೆ ಯೋಚಿಸುತ್ತಾರೆ. 10 ರೂಪಾಯಿಯಲ್ಲಿ ಕೇವಲ 1 ರೂಪಾಯಿಯನ್ನಾದರೂ ಕೂಡ ಉಳಿಸಬೇಕೆನ್ನುವ ಆಲೋಚನೆಯಲ್ಲಿರುತ್ತಾರೆ.

ಮನೆ ಖರೀಚಿಗೆಂದು ಇರುವ ಹಣದಲ್ಲೂ ಕೂಡ ಹೂಡಿಕೆಯನ್ನು ಮಾಡಲು ಬಯಸುತ್ತಾರೆ. ಈಗಾಗಲೇ ಸರ್ಕಾರ ಮಹಿಳೆಯರಿಗೆ ಹೂಡಿಕೆ ಮಾಡಲು ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಈ ಸ್ಕೀಮ್ ಗಳ ಮೂಲಕ ಮಹಿಳೆಯರು ತಮ್ಮ ಲಕ್ಷದ ಒಡತಿಯಾಗುವ ಕನಸನ್ನು ನನಸಾಗಿಸಿಕೊಳ್ಳಬಹುದು.

Public Provident Fund Scheme
Image Credit: News 18

ಕಡಿಮೆ ಹಣದಿಂದ ಹೂಡಿಕೆ ಮಾಡಬಹುದು
ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದಾಗಿದೆ. ಸರಕಾರ ಪರಿಚಯಿಸಿರುವ ಈ ಯೋಜನೆಗಳಲ್ಲಿ ನೀವು ಕೇವಲ 500 ಅಥವಾ 1000 ರೂಪಾಯಿಯಿಂದ ಹೂಡಿಕೆಯನ್ನು ಪ್ರಾರಂಭಿಸಬಹುದಾಗಿದೆ. ಕಡಿಮೆ ಹೂಡಿಕೆಯಲ್ಲೂ ಹೆಚ್ಚಿನ ಲಾಭ ಗಳಿಸಬಹುದಾದ ಹೂಡಿಕೆ ಯೋಜನಗಳೆಂದರೆ, ಸಾರ್ವಜನಿಕ ಭವಿಷ್ಯ ನಿಧಿ, SIP ಹಾಗೂ RD ಯೋಜನೆಗಳು. ಈ ಯೋಜನೆಗಳ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಸಾರ್ವಜನಿಕ ಭವಿಷ್ಯ ನಿಧಿ
ಸಾರ್ವಜನಿ ಭವಿಷ್ಯ ನಿಧಿ (PPF) ಯೋಜನೆಯಲ್ಲಿ ಮಹಿಳೆಯರು ಕನಿಷ್ಠ 500 ರೂಪಾಯಿಯನ್ನು ಹೂಡಿಕೆ ಮಾಡಬೇಕು. ಪ್ರಸ್ತುತ ಇದರ ಬಡ್ಡಿದರ 7.1 ರಷ್ಟಿದೆ. 15 ವರ್ಷಗಳ ನಿರಂತರ ಹೂಡಿಕೆ ನಂತರ ಸಂಪೂರ್ಣ ಹಣವನ್ನು ಬಡ್ಡಿಯೊಂದಿಗೆ ಹಿಂಪಡೆಯಬಹುದು. ನೀವು ಈ ಯೋಜನೆಯಲ್ಲಿ 15 ವರ್ಷಗಳ ವರೆಗೆ ಪ್ರತಿ ತಿಂಗಳು 1000 ಹಣವನ್ನು ಹೂಡಿಕೆ ಮಾಡಿದರೆ, 180000 ಹಣವನ್ನ ಹೂಡಿಕೆ ಮಾಡಿದಂತಾಗುತ್ತದೆ. ಇದಕ್ಕೆ ಬಡ್ಡಿಯಾಗಿ ನೀವು 1,45,457 ರೂಪಾಯಿಯನ್ನ ಪಡೆಯುತ್ತೀರಿ. ಅಂದರೆ ಒಟ್ಟಾಗಿ ನೀವು ಮೆಚ್ಯುರಿಟಿ ಅವಧಿಯಲ್ಲಿ 3,25,457 ರೂಪಾಯಿಯನ್ನ ನೀವು ಪಡೆದುಕೊಳ್ಳಬಹುದಾಗಿದೆ.

SIP Investment Plan
Image Credit: Mpnewshindi

SIP Investment
SIP ಅಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೊಡ್ಡ ಮಟ್ಟದ ಲಾಭವನ್ನು ಗಳಿಸಬಹುದಾಗಿದೆ. ಪ್ರಸ್ತುತ SIP ಅಲ್ಲಿ 12 % ಬಡ್ಡಿಯನ್ನು ನೀಡಲಾಗುತ್ತಿದೆ. ಈ ಬಡ್ಡಿ ಸ್ಥಿರವಾಗಿರುದಿಲ್ಲ. ಇದೀಗ ನೀವು ಪ್ರತಿ ತಿಂಗಳು 1,000 ರೂಪಾಯಿಯನ್ನ SIP ಅಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂದುಕೊಳ್ಳೋಣ. 1,000 ಹಣವನ್ನು ನೀವು 15 ವರ್ಷಗಳ ವರೆಗೆ ಹೂಡಿಕೆ ಮಾಡಿದರೆ, ಹೂಡಿಕೆ ಮೊತ್ತ 1,80,000 ಆಗುತ್ತದೆ. 15 ವರ್ಷಗಳಲ್ಲಿ 3,24,576 ರೂಪಾಯಿ ಬಡ್ಡಿಯನ್ನು ಪಡೆಯುತ್ತೀರಿ. ಅಂದರೆ ನೀವು 15 ವರ್ಷಗಳಲ್ಲಿ 5,04,576 ರೂಪಾಯಿ ಆದಾಯವನ್ನ ಗಳಿಸುತ್ತೀರಿ.

Join Nadunudi News WhatsApp Group

RD Investment
Image Credit: Smallcase

ಮರುಕಳಿಸುವ ಠೇವಣಿ
ಅಲ್ಪಾವಧಿಗೆ ಹೂಡಿಕೆಗೆ RD ಅತ್ಯುತ್ತಮ ಆಯ್ಕೆಯಾಗಿದೆ. ಸಂಪೂರ್ಣವಾಗಿ ಸುರಕ್ಷಿತ ಆಯ್ಕೆಯನ್ನು ನೀವು ಬಯಸುದಾದರೆ ಬ್ಯಾಂಕ್ ನಲ್ಲಿ RD ಖಾತೆಯನ್ನು ತೆರೆಯುದು ಉತ್ತಮ. ಏಕೆಂದರೆ ಹೂಡಿಕೆದಾರರು RD ಅಲ್ಲಿ ಸ್ಥಿರ ಲಾಭವನ್ನು ಪಡೆಯುತ್ತಾರೆ. ಪ್ರಸ್ತುತ ರದ ಬಡ್ಡಿದರ 6 .5 ಆಗಿದೆ. ನೀವು RD ಖಾತೆಯಲ್ಲಿ 5 ವರ್ಷಗಳ ವರೆಗೆ 1000 ಹೂಡಿಕೆ ಮಾಡಿದರೆ, ಹೂಡಿಕೆ ಮೊತ್ತ 60000 ಆಗಿರುತ್ತದೆ. ಹಾಗೆ ಇದರ ಮುಕ್ತಾಯದ ನಂತರ ನೀವು 70989 ರೂಪಾಯಿಯನ್ನ ಪಡೆಯಬಹುದಾಗಿದೆ. ನೀವು ಈ ಹಣವನ್ನು ಹಿಂಪಡೆಯಬಹುದು ಅಥವಾ ಅದನ್ನು FD ಅಲ್ಲಿ ಠೇವಣಿ ಮಾಡಬಹುದು.

Join Nadunudi News WhatsApp Group