Itel Smartphone: ಬಜೆಟ್ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟ 2 ಮೊಬೈಲ್, 128 GB ಸ್ಟೋರೇಜ್ ಜೊತೆಗೆ 5000 mAh ಬ್ಯಾಟರಿ

ಬಜೆಟ್ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Itel ಕಂಪನಿಯ ಹೊಸ ಸ್ಮಾರ್ಟ್ ಫೋನ್

Itel P55 And Itel P55+ Smartphone: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಖರೀದಿಸಲು ಸ್ಮಾರ್ಟ್ ಫೋನ್ ಗಳ ಆಯ್ಕೆಗೆ ಯಾವುದೇ ಕೊರತೆ ಇಲ್ಲ ಎನ್ನಬಹುದು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು 5G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿರುವ Itel ಕಂಪನಿ ಹೊಸದಾಗಿ ಎರಡು ಹೊಚ್ಚ 5G Smartphone ಅನ್ನು ಗ್ರಾಹಕರ ಬಜೆಟ್ ಬೆಲೆಯಲ್ಲಿ ಪರಿಚಯಿಸಿದೆ.

Itel P55 5G Smartphone
Image Credit: Smartprix

ಬಜೆಟ್ ಪ್ರಿಯರಿಗಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನೂತನ ಸ್ಮಾರ್ಟ್ ಫೋನ್
ಸದ್ಯ ಮಾರುಕಟ್ಟೆಯಲ್ಲಿ Itel ಕಂಪಿನಲಿಯು ವಿಭಿನ್ನ ಫೀಚರ್ ಹಾಗೂ ವಿಭಿನ್ನ ಬೇಳೆಯೊಂದಿಗೆ Itel P55 ಮತ್ತು Itel P55 + ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಈ ಎರಡು ಸ್ಮಾರ್ಟ್ ಫೋನ್ ಗಳು ಫೆಬ್ರವರಿ 13 ರಿಂದ ಅಮೆಜಾನ್ ನಲ್ಲಿ ಲಭ್ಯವಿದೆ. ಗ್ರಾಹಕರು ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ ಈ ಎರಡು ಸ್ಮಾರ್ಟ್ ಫೋನ್ ಗಳು ಉತ್ತಮ ಆಯ್ಕೆ ಎನ್ನಬಹುದು.

Itel P55 5G Smartphone
Itel P55 5G ಸ್ಮಾರ್ಟ್‌ಫೋನ್ 6.6-ಇಂಚಿನ ಪೂರ್ಣ-HD ಪ್ಲಸ್ ಡಿಸ್‌ ಪ್ಲೇಯನ್ನು ಹೊಂದಿದ್ದು, 180 Hz ಟಚ್ ಮಾದರಿ ದರದೊಂದಿಗೆ ಹೊಂದಿದೆ. 90 Hz ರಿಫ್ರೆಶ್ ದರದೊಂದಿಗೆ ಬರುತ್ತಿರುವ ಈ ಬಜೆಟ್ ಫೋನ್ ಗ್ರಾಫಿಕ್ಸ್‌ ಗಾಗಿ Mali G57 GPU ಜೊತೆಗೆ ವೇಗ ಮತ್ತು ಬಹುಕಾರ್ಯಕ್ಕಾಗಿ MediaTek ಡೈಮೆನ್ಸಿಟಿ 6080 ಚಿಪ್‌ ಸೆಟ್ ಅನ್ನು ಬಳಸುತ್ತದೆ.

ಇನ್ನು 12GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ನೀವು ನೋಡಬಹುದು. ಫೋನ್ ನ ಹಿಂಭಾಗದಲ್ಲಿ 50 ಮೆಗಾಫೈಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ AI ಲೆನ್ಸ್ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನು Itel P55 5G Smartphone 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದ್ದು, 5000mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.

Itel P55 Plus 5G Smartphone
Image Credit: Gizarena

Itel P55+ 5G Smartphone
Tel P55 + Android 13 ನಲ್ಲಿ ಕಾರ್ಯನಿರ್ವಹಿಸುತ್ತದೆ. 90Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ HD (720 x 1,640 ಪಿಕ್ಸೆಲ್‌ಗಳು) ಡಿಸ್‌ ಪ್ಲೇಯನ್ನು ಹೊಂದಿದೆ. Itel P55+ ವರ್ಚುವಲ್ ಮೆಮೊರಿಯೊಂದಿಗೆ 16GB RAM ಮತ್ತು 256GB ಆನ್‌ ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ. P55+ AI ಬೆಂಬಲಿತ 50-ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

Join Nadunudi News WhatsApp Group

ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ, 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. Itel P55 ಫೇಸ್ ಅನ್‌ಲಾಕ್ ವೈಶಿಷ್ಟ್ಯ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫಿಂಗರ್‌ ಪ್ರಿಂಟ್ ಸಂವೇದಕವನ್ನು ಹೊಂದಿದೆ. Itel P55+ 5G ಸ್ಮಾರ್ಟ್‌ ಫೋನ್ 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 5000mAh ಬ್ಯಾಟರಿ ಬ್ಯಾಕಪ್ ಹೊಂದಿದೆ.

Join Nadunudi News WhatsApp Group