ಜಾಹ್ನವಿ ಕಪೂರ್ ಗೆ ಮದುವೆಯಾಗಲು ಇಂತಹ ಹುಡುಗ ಬೇಕಂತೆ, ಹುಡುಗನಿಗೆ ಯಾವ ಗುಣ ಇರಬೇಕು ನೋಡಿ.

ದೇಶದ ಚಿತ್ರರಂಗದ ಕಂಡ ಖ್ಯಾತ ನಟಿಯರಲ್ಲಿ ನಟಿ ಶ್ರೀದೇವಿ ಅವರು ಅಗ್ರ ಸ್ಥಾನದಲ್ಲಿ ಇದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟನೆಯನ್ನ ಮಾಡಿ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಗಳಿಸಿಕೊಂಡಿರುವ ನಟಿ ಶ್ರೀದೇವಿ ಇಂದು ನಮ್ಮಜೊತೆ ಇಲ್ಲದೆ ಇರಬಹುದು, ಆದರೆ ಅವರ ನಟನೆ ಮತ್ತು ಅವರ ಮುಖ ಸದಾ ಅಭಿಮಾನಿಗಳ ನೆನಪಿನಲ್ಲಿ ಇರುತ್ತದೆ. ಬೋನಿ ಕಪೂರ್ ಅವರನ್ನ ಮದುವೆಯಾದ ನಟಿ ಸೀದೇವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಅದರಲ್ಲಿ ಒಬ್ಬರು ಜಾಹ್ನವಿ ಕಪೂರ್‌. ಹೌದು ಸದ್ಯ ಬಾಲಿವುಡ್ ನಲ್ಲಿ ಸಕತ್ ಮಿಂಚುತ್ತಿರುವ ನಟಿ ಜಾಹ್ನವಿ ಕಪೂರ್‌ ಅವರು ದೇಶದ ಟಾಪ್ ನಟಿಯರಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದಾರೆ.

ತಮ್ಮ ನಡಿಗೆ ಮತ್ತು ಫೋಟೋ ಮೂಲಕ ಪಡ್ಡೆ ಹುಡುಗರ ನಿದ್ರೆ ಕೆಡಿಸಿರುವ ಜಾಹ್ನವಿ ಕಪೂರ್‌ ಅವರು ಈಗ ತನ್ನನ್ನ ಮದುವೆಯಾಗುವ ಹುಡುಗನ ಬಗ್ಗೆ ಹೇಳಿದ್ದಾರೆ. ಹೌದು ನಟಿ ಜಾಹ್ನವಿ ಕಪೂರ್‌ ಅವರು ತನ್ನನ್ನ ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ. ಹಾಗಾದರೆ ನಟಿ ಜಾಹ್ನವಿ ಕಪೂರ್‌ ಅವರನ್ನ ಮದುವೆಯಾಗುವ ಹುಡುಗ ಹೇಗಿರಬೇಕು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಸದಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ನಟಿ ಜಾಹ್ನವಿ ಕಪೂರ್‌ ಈಗ ಮತ್ತೆ ಮದುವೆಯ ವಿಚಾರದಲ್ಲಿ ವೈರಲ್ ಆಗಿದ್ದಾರೆ.

janhvi kapoor marriage

ಇನ್ನು ಈ ಸುದ್ದಿಯನ್ನ ಕೇಳಿದ ಜಾಹ್ನವಿ ಕಪೂರ್‌ ಅವರ ಅಭಿಮಾನಿಗಳು ಜಾಹ್ನವಿ ಕಪೂರ್‌ ಅವರಿಗೆ ಮದುವೆ ಫಿಕ್ಸ್ ಆಗಿರಬಹುದಾ ಅನ್ನುವ ಪ್ರಶ್ನೆಯನ್ನ ಎತ್ತಿದ್ದಾರೆ. ಮೊನ್ನೆ ನಡೆದ ಒಂದು ಸಂದರ್ಶನದಲ್ಲಿ ನಟಿ ಜಾಹ್ನವಿ ಕಪೂರ್‌ ಅವರು ತನ್ನನ್ನ ಮದುವೆ ಆಗುವ ಹುಡುಗ ಹೇಗಿರಬೇಕು ಅನ್ನುವುದನ್ನ ಹೇಳಿದ್ದಾರೆ. ‘ನಾನು ಮಾಡುವ ಕೆಲಸವನ್ನ ಇಷ್ಟಪಡುವ ಪ್ರತಿಭಾವಂತ ಪತಿ ನನಗೆ ಬೇಕು ಮತ್ತು ಅದರ ಜೊತೆ ಆತನಿಗೆ ಹಾಸ್ಯ ಮಾಡುವ ಸ್ವಭಾವ ಇರಬೇಕು ಮತ್ತು ಅವನ ಹಾಸ್ಯ ನನ್ನ ಮುಖದಲ್ಲಿ ಯಾವಾಗಲು ನಗು ಇರುವ ಹಾಗೆ ನೋಡಿಕೊಳ್ಳಬೇಕು ಎಂದು ನಟಿ ಜಾಹ್ನವಿ ಕಪೂರ್‌’ ಅವರು ಹೇಳಿದ್ದಾರೆ.

ಇನ್ನು ಅದರ ಜೊತೆಗೆ, ‘ನನ್ನ ಕಷ್ಟವನ್ನ ತನ್ನ ಕಷ್ಟದ ಹಾಗೆ ಸ್ವೀಕಾರ ಮಾಡಬೇಕು ಮತ್ತು ನನಗೆ ತಿಳಿಯದ ವಿಷಯಗಳನ್ನ ಆತ ನನಗೆ ಹೇಳಿಕೊಡಬೇಕು ಮತ್ತು ನನ್ನನ್ನ ಹುರಿದುಂಬಿಸುವ ಗುಣಗಳನ್ನ ಹೊಂದಿರುವ ಹುಡುಗ ನನ್ನ ಪತಿಯಾಗಿ ಬರಬೇಕು’ ಎಂದು ನಟಿ ಜಾಹ್ನವಿ ಕಪೂರ್‌ ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನು ಇದನ್ನ ಕೇಳಿದ ನಟಿ ಜಾಹ್ನವಿ ಕಪೂರ್‌ ಅಭಿಮಾನಿಗಳು ನಟಿ ಜಾಹ್ನವಿ ಕಪೂರ್‌ ಅವರು ಪ್ರೀತಿಯಲ್ಲಿ ಬಿದ್ದಿರಬಹುದು ಅಥವಾ ಅವರಿಗೆ ಮದುವೆ ನಿಶ್ಚಯ ಆಗಿರಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಸ್ನೇಹಿತರೆ ನಟಿ ಜಾಹ್ನವಿ ಕಪೂರ್‌ ಅವರು ತನ್ನ ಪತಿಯಾಗಿ ಬರುವ ಹುಡುಗ ಬಗ್ಗೆ ಹೇಳಿದ ಈ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

janhvi kapoor marriage

Join Nadunudi News WhatsApp Group