Jio book: ಲ್ಯಾಪ್ ಟಾಪ್ ಖರೀದಿಸಬೇಕು ಎಂದು ಕಾಯುತ್ತಿದ್ದವರಿಗೆ ಸಿಹಿಸುದ್ದಿ ಕೊಟ್ಟ ಅಂಬಾನಿ

ಸದ್ಯ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದರೆ ಮುಖೇಶ್ ಅಂಬಾನಿ ಎಂದು ತಮಗೆಲ್ಲರಿಗೂ ಕೂಡ ತಿಳಿದಿದೆ. ಹೌದು ಅವರು ಭಾರತ ಮಾತ್ರವಲ್ಲದೆ ಅನೇಕ ದೇಶಗಳ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿದ್ದು ಮುಖೇಶ್ ಅಂಬಾನಿ ಬಗ್ಗೆ ಮಾತನಾಡುವುದಾದರೇ ಭಾರತ 10 ಶ್ರೀಮಂತ ವ್ಯಕ್ತಿಗಳಲ್ಲಿ ಇವರೂ ಕೂಡ ಒಬ್ಬರು. ಜೇಬಿನಿಂದ ₹ 2000 ನೋಟು ಬಿದ್ದರೆ ಅವರು ಅದನ್ನು ತೆಗೆದುಕೊಳ್ಳುವುದಿಲ್ಲ ಎಂಬ ಅಂಶದಿಂದ ಅವರ ಗಳಿಕೆಯನ್ನು ನೀವು ಊಹಿಸಬಹುದಾಗಿದೆ.

ಏಕೆಂದರೆ ನೀವು ನೋಟುಗಳನ್ನು ಎತ್ತುವಲ್ಲಿ ಕಳೆಯುವ ಸಮಯ ಆ ಸಮಯದಲ್ಲಿ ಅವರು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಹೌದು ಮುಖೇಶ್ ಅಂಬಾನಿ ಅವರ ಸಂಪತ್ತು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ಹೆಚ್ಚಾಗಿದ್ದು ಅವರ ವ್ಯವಹಾರದ ಕುರಿತು ಮಾತನಾಡುವುದಾದರೆ ಇಂದಿನ ಕಾಲದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ.

ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದು ಅವರು ತುಂಬಾ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಅವರ ಬಂಗಲೆಗಳ ಬಗ್ಗೆ ಅದರ ಬೆಲೆ ಅಂದಾಜು ₹6000 ಕೋಟಿ. ಇನ್ನೂ ವ್ಯವಹಾರದಲ್ಲಿ ಬಹಳ ಬುದ್ದಿವಂತಿಕೆಯಿಂದ ಹೆಜ್ಜೆ ಇಡುವ ಮುಕೇಶ್ ಅಂಬಾನಿಯವರು ಸದ್ಯ ಇದೀಗ ಲ್ಯಾಪ್‌ಟಾಪ್‌ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

jio book,jio book price,jio laptop,jio book launch date,jio book laptop,jio book launch,jio notebook,jio book details,jio new laptop,reliance jio,jio 4g laptop,ad i4 u jio book,jio laptop launch date in india
Image Credit: Smartprix

ಸದ್ಯ ಇದೀಗ ಭಾರತದಲ್ಲಿ ಕಡಿಮೆ ಬೆಲೆಯಲ್ಲಿ Jio Phone  ಯಶಸ್ವಿಯಾಗಿರುವ ಕಾರಣದಿಂದಾಗಿ ಇದೇ ರೀತಿಯಾಗಿ ಲ್ಯಾಪ್ ಟ್ಯಾಪ್ ಗಳನ್ನು ಕೂಡ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ತರುವುದಾಗಿ ಜಿಯೋ ಕಂಪನಿ ಅಧಿಕೃತವಾಗಿ ತಿಳಿಸಿದೆ. ಹೌದು 4ಜಿ ಸಿಮ್‌ ಕಾರ್ಡ್‌ ಎಂಬೆಡೆಡ್‌ ಇರುವಂತಹ ಕೇವಲ 15,000 ರೂ. ಬೆಲೆಯ ಬಜೆಟ್ ಲ್ಯಾಪ್‌ಟಾಪ್ ಗಳನ್ನು ಮುಕೇಶ್‌ ಅಂಬಾನಿ ರವರ ನೇತೃತ್ವದ ಕಂಪನಿ ಬಿಡುಗಡೆ ಮಾಡಲಿದೆ ಎಂದು ರಾಯ್ಟರ್ಸ್‌ ವರದಿ ಮಾಡಿದೆ.

ಹೌದು ಕಂಪನಿಯು ತನ್ನ ಬಹುನಿರೀಕ್ಷಿತ ಜಿಯೋಬುಕ್‌ಗಾಗಿ ಜಾಗತಿಕ ದೈತ್ಯರಾದ ಕ್ವಾಲ್‌ಕಾಮ್ ಹಾಗೂ ಮೈಕ್ರೋಸಾಫ್ಟ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು ಕ್ವಾಲ್‌ಕಾಮ್‌ ತನ್ನ ಆರ್ಮ್ ಲಿಮಿಟೆಡ್‌ ಮೂಲಕವಾಗಿ ಕಂಪ್ಯೂಟಿಂಗ್ ಚಿಪ್‌ಗಳನ್ನು ನೀಡಲಿದ್ದು ಕೆಲವು ಅಪ್ಲಿಕೇಶನ್‌ಗಳಿಗೆ ವಿಂಡೋಸ್ ಓಎಸ್ ತಯಾರಿಸುವ ಮೈಕ್ರೋಸಾಫ್ಟ್‌ ಬೆಂಬಲವನ್ನು ಕೂಡ ಒದಗಿಸಲಿರುವುದು ವಿಶೇಷವಾಗಿದೆ. ಇನ್ನು ದೇಶದಲ್ಲಿ 42 ಕೋಟಿಗೂ ಕೂಡ ಹೆಚ್ಚು ಗ್ರಾಹಕರನ್ನು ಹೊಂದಿರುವ ಭಾರತದ ಅತಿದೊಡ್ಡ ಟೆಲಿಕಾಂ ವಾಹಕ ಜಿಯೋ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Join Nadunudi News WhatsApp Group

ಇನ್ನು ಲ್ಯಾಪ್‌ಟಾಪ್ ಈ ತಿಂಗಳಿನಿಂದ ಪ್ರತಿ ಶಾಲೆಗಳು ಹಾಗೂ ಸರ್ಕಾರಿ ಸಂಸ್ಥೆಗಳಂತಹ ಸಾಂಸ್ಥಿಕ ಗ್ರಾಹಕರಿಗೆ ಲಭ್ಯವಿರಲಿದ್ದು ಮುಂದಿನ ಮೂರು ತಿಂಗಳೊಳಗೆ ಸಾಮಾನ್ಯ ಗ್ರಾಹಕರಿಗೂ ಕೂಡ ಇದನ್ನು ಬಿಡುಗಡೆ ಮಾಡುವುದನ್ನು ನಿರೀಕ್ಷಿಸಲಾಗಿದೆ. ಇನ್ನು ಇದಾದ ಬೆನ್ನಿಗೆ 5ಜಿ ಆವೃತ್ತಿಯ ಜಿಯೋಫೋನ್‌ ಬಿಡುಗಡೆಯಾಗಲಿದ್ದುಈ ಯೋಜನೆಯು ಜಿಯೋಫೋನ್‌ನಷ್ಟು ದೊಡ್ಡದಾಗಿದೆ ಎಂದು ಈ ವಿಷಯದ ಬಗ್ಗೆ ನೇರ ಜ್ಞಾನ ಹೊಂದಿರುವ ಮೂಲವೊಂದು ರಾಯ್ಟರ್ಸ್‌ಗೆ ತಿಳಿಸಿದೆಯಂತೆ.

ಇನ್ನು Jio book ನ ಬಿಡುಗಡೆಯು ಒಟ್ಟಾರೆ ಲ್ಯಾಪ್‌ಟಾಪ್ ಮಾರುಕಟ್ಟೆಯನ್ನು ಕನಿಷ್ಠ ಶೇ. 15ರಷ್ಟು ವಿಸ್ತರಿಸಲಿದೆ ಎಂದು ಕೂಡ ಕೌಂಟರ್‌ಪಾಯಿಂಟ್ ವಿಶ್ಲೇಷಕ ತರುಣ್ ಪಾಠಕ್ ರವರು ಹೇಳಿದ್ದು ಲ್ಯಾಪ್‌ಟಾಪ್ ಜಿಯೋದ ಸ್ವಂತ ಜಿಯೋಒಎಸ್‌ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಲಿದ್ದು ಅಪ್ಲಿಕೇಶನ್‌ಗಳನ್ನು ಜಿಯೋಸ್ಟೋರ್‌ನಿಂದ ಡೌನ್‌ಲೋಡ್ ಕೂಡ ಮಾಡಬಹುದಾಗಿದೆ. ಕಚೇರಿಯಿಂದ ಹೊರಗಿರುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಟ್ಯಾಬ್ಲೆಟ್‌ಗಳಿಗೆ ಪರ್ಯಾಯವಾಗಿ ಲ್ಯಾಪ್‌ಟಾಪ್‌ಗೆ ಒತ್ತು ನೀಡುವಂತೆ ಜಿಯೋ ಮಾಡಲಿದೆಯಂತೆ.

Join Nadunudi News WhatsApp Group