JioBook: ಮಾರುಕಟ್ಟೆಗೆ ಬಂತು ಅತೀ ಕಡಿಮೆ ಬೆಲೆಯ ಜಿಯೋ Laptop, ದೀಪಾವಳಿಗೆ ಬಂಪರ್ ಉಡುಗೊರೆ ಕೊಡಲಿರುವ ಜಿಯೋ.

JioBook: ಭಾರತದಲ್ಲಿ ಶೀಘ್ರದಲ್ಲೇ  JioBook  ಲಾಂಚ್ ಮಾಡುವ ಎಲ್ಲಾ ಸಿದ್ಧತೆಗಳನ್ನು ಸದ್ಯ Reliance ಮಾಡಿಕೊಳ್ಳುತ್ತಿದೆ.  Jio Sim ಜಾರಿಗೆ ಬಂದರೆ ದೇಶದಲ್ಲಿ ಕೋಟ್ಯಾಂತರ ಜನರು ಜಿಯೋ ಸಿಮ್ ಬಳಕೆ ಮಾಡಲು ಆರಂಭ ಮಾಡಿದರು. ಹೌದು ಉಚಿತ ಇಂಟರ್ನೆಟ್ ಮತ್ತು ಉಚಿತ ಕರೆ ಸೇವೆಯನ್ನ ನೀಡುವುದರ ಮೂಲಕ ದೇಶದಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿದ ಜಿಯೋ ನಂತರ Jio Phone ಕಡಿಮೆ ಬೆಲೆಗೆ ಮಾರುಕಟ್ಟೆಗೆ ಜಾರಿಗೆ ತರುವುದರ ಮೂಲಕ ಇನ್ನಷ್ಟು ಜನರಿಗೆ ಹತ್ತಿರವಾಯಿತು.

 

ಸದ್ಯ ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ Laptop ನೀಡಲು ಮುಂದಾಗಿದೆ ಮತ್ತು ಗ್ರಾಹಕರು ಹಲವು ವಿಶೇಷತೆ ಇರುವ ಲ್ಯಾಪ್ ಟಾಪ್ ಅನ್ನು ಕಡಿಮೆಗೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಹಾಗಾದರೆ Jio Laptop ಹೇಗಿದೆ ಮತ್ತು ಅವರ Jio Laptop Price ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಹೌದು ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಉತ್ತಮವಾದ ಲ್ಯಾಪ್ ಟಾಪ್ ನೀಡಲು ಈಗ ಜಿಯೋ ಮುಂದಾಗಿದೆ. ಹೌದು ಈಗ JioBook ಲಾಂಚ್ ಆಗಿದ್ದು ಜನರು ಆನ್ಲೈನ್ ನಲ್ಲಿ ಇದನ್ನ ಖರೀದಿ ಮಾಡಬಹುದಾಗಿದೆ. JioBook ಅನ್ನು ಆನ್ಲೈನ್ ನಲ್ಲಿ 20000 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

 

Join Nadunudi News WhatsApp Group

ಸದ್ಯ ಜಿಯೋ ನೀಡಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ಸರ್ಕಾರೀ ಉದ್ಯೋಗದಲ್ಲಿ ಇರುವ ಜನರು ಮಾತ್ರ ಈ JioBook ಖರೀದಿ ಮಾಡಬಹುದಾಗಿದೆ ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ಜನಸಾಮಾನ್ಯರು ಈ JioBook ಖರೀದಿ ಮಾಡಬಹುದು ಎಂದು ಜಿಯೋ ಹೇಳಿದೆ. ಫುಲ್ ಪ್ಲಾಸ್ಟಿಕ್ ಮಾಡಲಾಗಿರುಗವ JioBook ಹಿಂಬದಿಯಲ್ಲಿ ಬ್ರ್ಯಾಂಡಿಂಗ್ ಜೊತೆಗೆ ಕೀಬೋರ್ಡ್ ವಿಂಡೋಸ್ ಕೀ ಕೂಡ ಹೊಂದಿದೆ.

JioBook
Image Credit: www.reuters.com

1366×768 ರೆಸಲ್ಯೂಶನ್‌ನೊಂದಿಗೆ 11.6 ಇಂಚಿನ ಡಿಸ್ಪ್ಲೇ ಹೊಂದಿರುಗವ ಈ JioBook 32GB ಮೆಮೊರಿ ಹೊಂದಿದೆ. JioOS ಆಪರೇಟಿಂಗ್ ಸಿಸ್ಟಮ್ ಹೊಂದಿರುವ JioBook ಜನರ ಮೆಚ್ಚುಗೆಯನ್ನ ಪಡೆದುಕೊಳ್ಳುವಲ್ಲಿ ಯಶಸ್ಸನ್ನ ಸಾಧಿಸಿದೆ. ಇನ್ನು ಅದರ ಜೊತೆಗೆ ಈ ಈ ಜಿಯೋ ಲ್ಯಾಪ್ ಟಾಪ್ ಡ್ಯುಯಲ್ ಮೈಕ್ರೊಫೋನ್‌ಗಳೊಂದಿಗೆ ಡ್ಯುಯಲ್ ಸ್ಪೀಕರ್ ಸೆಟಪ್ ಮತ್ತು ಹೆಡ್‌ಸೆಟ್‌ಗಾಗಿ ಟು ಇನ್ ಒನ್ ಕಾಂಬೊ ಪೋಸ್ಟ್ ಹೊಂದಿದೆ ಎಂದು ಕಂಪನಿ ಹೇಳಿದೆ.

ಇನ್ನು ಭಾರತದಲ್ಲಿ ಈ JioBook ನ ಆರಂಭಿಕ ಬಲೆ 19500 ರೂಪಾಯಿ ಆಗಿದೆ ಮತ್ತು ಇದನ್ನ ಸರ್ಕಾರೀ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು. ಹೌದು JioBook ಅನ್ನು ಜನರು GeM ನಲ್ಲಿ 19500 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಸದ್ಯ ಸರ್ಕಾರೀ ನೌಕರರು ಮಾತ್ರ ಈ GeM ನಲ್ಲಿ ಈ ಲ್ಯಾಪ್ ಟಾಪ್ ಖರೀದಿ ಮಾಡಬಹುದಾಗಿದ್ದು ದೀಪಾವಳಿಯ ನಂತರ ಎಲ್ಲಾ ಜನಸಾಮಾನ್ಯರು ಈ JioBook ಖರೀದಿ ಮಾಡಬಹುದಾಗಿದೆ.

Join Nadunudi News WhatsApp Group