Jio Plans: 75 ರೂಪಾಯಿ ರಿಚಾರ್ಜ್ ಮಾಡಿದರೆ ಅನಿಯಮಿತ ಕರೆ ಮತ್ತು ಡೇಟಾ, Jio ಗ್ರಾಹಕರಿಗೆ ಇನ್ನೊಂದು ಪ್ಲ್ಯಾನ್.

Jio ಇದೀಗ ಈ 4G ಫೋನ್ ಗೆ ಮಾಡಲಾಗುವ ರಿಚಾರ್ಜ್ ಪ್ಲಾನ್ ಗಳ ಪಟ್ಟಿಯನ್ನು ಕಂಪನಿ ಬಿಡುಗಡೆ ಮಾಡಿದೆ.

Jio phone Prima 4G Recharge Plans: ದೇಶದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ Jio ಇದೀಗ 5G ನೆಟ್ ವರ್ಕ್ ನೊಂದಿಗೆ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಜಿಯೋ ಇತ್ತೀಚೆಗಷ್ಟೇ  ಪ್ರೈಮಾ ಫೋನ್ ಅನ್ನು ಬಿಡುಗಡೆ ಮಾಡಿದೆ.

ಸದ್ಯ Jio Reliance ಪರಿಚಯಿಸಿರುವ 4G ಫೋನ್ ಮಾರುಕಟ್ಟೆಯಲ್ಲಿ ಅತಿ ಅಗ್ಗದ ಬೆಲೆಯಲ್ಲಿ ಲಭ್ಯವಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಇದೀಗ ಈ 4G ಫೋನ್ ಗೆ ಮಾಡಲಾಗುವ ರಿಚಾರ್ಜ್ ಪ್ಲಾನ್ ಗಳ ಪಟ್ಟಿಯನ್ನು ಕಂಪನಿ ಬಿಡುಗಡೆ ಮಾಡಿದೆ.

Jiophone Prima 4G Recharge Plans
Image Credit: Telecomtalk

2599 ಕ್ಕೆ ಖರೀದಿಸಿ ಜಿಯೋಫೋನ್‌ ಪ್ರೈಮಾ 4G
ಮುಕೇಶ್ ಅಂಬಾನಿ ಕಳೆದ ಕೆಲವು ತಿಂಗಳುಗಳಲ್ಲಿ ಬಿಡುಗಡೆ ಮಾಡಿದ ಎರಡನೇ 4G ಫೋನ್ ಇದಾಗಿದೆ. ಜಿಯೋಫೋನ್‌ ಪ್ರೈಮಾ 4G ಫೋನ್ ಅನ್ನು ರಿಲಯನ್ಸ್ ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಅನ್ನು ಕೇವಲ 2,599 ರೂಪಾಯಿಗೆ ಖರೀದಿಸಬಹುದಾಗಿದೆ. ಇದರಲ್ಲಿ ನೀವು Jio TV, Jio Savan, Jio Cinema, Jio News ಮುಂತಾದ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ.
Jiophone Prima 4G Recharge Plans
Jio 75 Rs Recharge Plan
ಜಿಯೋಫೋನ್‌ ಪ್ರೈಮಾ 4G ಯಾ ಮೂಲ ಯೋಜನೆ 75 ರೂಪಾಯಿ ಆಗಿದೆ. ಈ ರಿಚಾರ್ಜ್ ಪ್ಲಾನ್ 23 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಜೊತೆಗೆ ಉಚಿತ ಕರೆ ಸೌಲಭ್ಯ, ಡೇಟಾ ಹಾಗೂ SMS ಅನ್ನು ನೀಡುತ್ತಿದೆ.

Jio 75 Rs Recharge Plan
Image Credit: Timesnownews

Jio 91 Rs Recharge Plan
ಈ ರಿಚಾರ್ಜ್ ಪ್ಲಾನ್ ನಲ್ಲಿ ಬಳಕೆದಾರರು ಪ್ರತಿದಿನ 100 MB ಡೇಟಾ, ಅನಿಯಮಿತ ಕರೆ, SMS ಅನ್ನು ಪಡೆದುಕೊಳ್ಳುತ್ತಾರೆ. ಇದು 28 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರಲ್ಲಿ ನೀವು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ಗೆ ಪ್ರವೇಶ ಮಾಡಬಹುದಾಗಿದೆ.
Jio 125 Rs Recharge Plan
ಈ 125 ರಿಚಾರ್ಜ್ ಪ್ಲಾನ್ 23 ದಿನಗಳ ಮಾನ್ಯತೆಯೊಂದಿಗೆ ಗ್ರಾಹಕರ ಕೈ ಸೇರುತ್ತದೆ. ಇದರಲ್ಲಿ ಅನಿಯಮಿತ ಕೆರೆ, ಪ್ರತಿದಿನ 0 .5 GB ಡೇಟಾ, ಹಾಗೂ SMS ಸೌಲಭ್ಯ ಲಭ್ಯವಿದೆ.
Jio 152 Rs Recharge Plan
ಈ ರಿಚಾರ್ಜ್ ಪ್ಲಾನ್ ನಲ್ಲಿ ಬಳಕೆದಾರರು ಪ್ರತಿದಿನ 0 .5 GB ಡೇಟಾ, ಅನಿಯಮಿತ ಕರೆ, SMS ಅನ್ನು ಬಳಕೆ ಮಾಡಬಹುದಾಗಿದೆ. ಇದು 28 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ.

jio recharge plans
Image Credit: E24bollywood

Jio 186 Rs Recharge Plan
ಈ 186 ರಿಚಾರ್ಜ್ ಪ್ಲಾನ್ 28 ದಿನಗಳ ಮಾನ್ಯತೆಯೊಂದಿಗೆ ಗ್ರಾಹಕರ ಕೈ ಸೇರುತ್ತದೆ. ಇದರಲ್ಲಿ ಬಳಕೆದಾರರು 1GB ಡೇಟಾ, 100 SMS , ಅನಿಯಮಿತ ಕರೆಯ ಪ್ರಯೋಜನವನ್ನು ಪಡೆಯುತ್ತಾರೆ.
Jio 223 Rs Recharge Plan
ಈ ರಿಚಾರ್ಜ್ ಪ್ಲಾನ್ ನಲ್ಲಿ ಬಳಕೆದಾರರು ಪ್ರತಿದಿನ 2GB ಡೇಟಾ, ಅನಿಯಮಿತ ಕರೆ, SMS ಅನ್ನು ಪಡೆದುಕೊಳ್ಳುತ್ತಾರೆ. ಇದು 28 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ.
Jio 895 Rs Recharge Plan
ಈ ರಿಚಾರ್ಜ್ ಪ್ಲಾನ್ 336 ದಿನಗಳ ಮಾನ್ಯತೆಯೊಂದಿಗೆ ಗ್ರಾಹಕರ ಕೈ ಸೇರುತ್ತದೆ. ಜೊತೆಗೆ ಅನಿಯಮಿತ ಕರೆ, SMS , ಡೇಟಾ ಪ್ರಯೋಜನಗಳು ಲಭ್ಯವಿದೆ. ಇದಲ್ಲದೆ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ಗೆ ಪ್ರವೇಶ ಮಾಡಬಹುದಾಗಿದೆ. ಆದರೆ ಬೆಲೆ ಕೊಂಚ ಅಧಿಕವಾಗಿದೆ.

Join Nadunudi News WhatsApp Group

Join Nadunudi News WhatsApp Group