Modi Dhyana: ಮೋದಿ ಧ್ಯಾನ ಮಾಡುತ್ತಿರುವ ಬಂಡೆಯ ವಿಶೇಷತೆ ಏನು ಗೊತ್ತಾ…? ಸಾಕಷ್ಟು ಜನರಿಗೆ ತಿಳಿದಿಲ್ಲ.

ಮೋದಿ ಧ್ಯಾನ ಮಾಡುತ್ತಿರುವ ಬಂಡೆಯ ವಿಶೇಷತೆ ಏನು ಗೊತ್ತಾ...?

Kanyakumari Speciality: ಸದ್ಯ ಲೋಕಸಭಾ ಚುನಾವಣೆ ಕೊನೆಯ ಹಂತವನ್ನು ತಲುಪಿರುವ ಸಮಯದಲ್ಲಿ ದೇಶದ ಪ್ರಧಾನಿ ಮೋದಿ ಅವರು ಧ್ಯಾನಕ್ಕೆ ತೆರಳಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆಯಿಂದ ಮೂರು ದಿನಗಳ ಕಾಲ ಆಧ್ಯಾತ್ಮಿಕ ವಿಹಾರಕ್ಕೆ ತೆರಳಲಿದ್ದಾರೆ. ದಕ್ಷಿಣದ ಅಂಚಿನಲ್ಲಿರುವ ಕನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಮೂರು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ.

ಇನ್ನು ಮೇ 30 ರಿಂದ ಜೂನ್ 1 ರವರೆಗೆ ಮೋದಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಶಿವನ ಸ್ಮರಣೆಯಲ್ಲಿ ಕಾಲ ಕಳೆಯಲಿದ್ದಾರೆ. ಹಾಗಾದರೆ ಮೋದಿ ಕನ್ಯಾಕುಮಾರಿಯಲ್ಲಿ ಈ ಸ್ಥಳವನ್ನು ಏಕೆ ಆರಿಸಿಕೊಂಡರು…? ಈ ಸ್ಥಳದ ವಿಶೇಷತೆ ಏನು…? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Kanyakumari Speciality
Image Credit: Tripsavvy

ಮೋದಿ ಧ್ಯಾನ ಮಾಡುತ್ತಿರುವ ಬಂಡೆಯ ವಿಶೇಷತೆ ಏನು ಗೊತ್ತಾ…?
ಭಾರತದ ವರ್ಣನೆಯ ಸಮಯದಲ್ಲಿಕನ್ಯಾಕುಮಾರಿಯ ಹೆಸರು ಬರುವುದು ಸಹಜ. ದಕ್ಷಿಣ ಭಾರತದ ನೆಲದ ತುತ್ತ ತುದಿಯಲ್ಲಿರುವ ‘ಕನ್ಯಾಕುಮಾರಿ’ ಎಂಬ ಹೆಸರಿನ ಮೂಲದ ಹಿಂದೆ ಪೌರಾಣಿಕ ಕಥೆಯಿದೆ. ಹೀಗಾಗಿ ಮೋದಿ ವಿವೇಕಾನಂದ ಸ್ಮಾರಕದಲ್ಲಿ ಹಗಲಿರುಳು ಧ್ಯಾನದಲ್ಲಿ ತೊಡಗಿ ಮತ್ತೊಂದು ಶಕ್ತಿಯ ಚುಕ್ಕಾಣಿ ಹಿಡಿಯಲು ವೇದಿಕೆ ಸೃಷ್ಟಿಸಲಿದ್ದಾರೆ ಎನ್ನಲಾಗಿದೆ. ಭಾರತದ ತುದಿಯಲ್ಲಿರುವ ಕನ್ಯಾಕುಮಾರಿಯು ವಿಶೇಷ ಶಕ್ತಿಯ ಪ್ರದೇಶವಾಗಿದೆ. ತಾಯಿ ಕನ್ಯಾಕುಮಾರಿಯಿಂದ ಆಶೀರ್ವಾದ ಪಡೆದ ಈ ಪ್ರದೇಶವು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಸಂಗಮವಾಗಿದೆ.

ಪಾರ್ವತಿಯನ್ನು ಶಿವನ ಧ್ಯಾನಸ್ಥಳವೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ, ಆದ್ದರಿಂದ ಇದು ಪವಿತ್ರ ಸ್ಥಳವಾಗಿದೆ. ಇಲ್ಲಿ ಧಾನ್ಯ ಮಾಡಿದರೆ ಅನೇಕ ಫಲಗಳು ಸಿಗುತ್ತವೆ. ಜೊತೆಗೆ ಸ್ವಾಮಿ ವಿವೇಕಾನಂದರು ತಪಸ್ಸು ಮಾಡಿದ ಸ್ಥಳವೂ ಹೌದು. ಹಿಂದೆ ಕನ್ಯಾಕುಮಾರಿಯಲ್ಲಿ ತಪಸ್ಸು ಮಾಡಿದ ನಂತರ ವಿವೇಕಾನಂದರ ಶಕ್ತಿ ಮತ್ತಷ್ಟು ಹೆಚ್ಚಾಯಿತು. ಹೀಗಾಗಿ ವಿವೇಕಾನಂದರ ಬದುಕಿನ ಮೇಲೆ ಪ್ರಭಾವ ಬೀರಿದ ಈ ಜಾಗವನ್ನು ಮೋದಿ ಧ್ಯಾನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Narendra Modi at Vivekananda Rock Memorial in Kanyakumari
Image Credit: The Week

ಈ ಹಿನ್ನಲೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ
ಪೌರಾಣಿಕ ಹಿನ್ನೆಲೆಯನ್ನು ಪರಿಗಣಿಸಿ, ಕನ್ಯಾಕುಮಾರಿ ಎಂಬ ಹೆಸರು ಬರಲು ಮುಖ್ಯ ಕಾರಣ ಪಾರ್ವತಿ ದೇವಿಯ ತಪಸ್ಸು ಎಂದು ಹೇಳಲಾಗುತ್ತದೆ. ಹೌದು, ಸತಿಯ ತಂದೆ ದಕ್ಷ ಪ್ರಜಾಪತಿ ತಾನು ನಡೆಸುತ್ತಿದ್ದ ಯಾಗಕ್ಕೆ ಶಿವನನ್ನು ಆಹ್ವಾನಿಸದ ಕಾರಣ, ಸತಿಯು ಯಾಗದ ಕುಂಡಕ್ಕೆ ಹಾರಿ ಆತ್ಮಾಹುತಿ ಮಾಡಿಕೊಂಡಳು. ಅದರ ನಂತರ, ಸತಿಯು ಪಾರ್ವತಿಯಾಗಿ ಮರುಜನ್ಮವನ್ನು ಪಡೆದಳು ಮತ್ತು ಈ ಸ್ಥಳದಲ್ಲಿ ಶಿವನನ್ನು ತನ್ನ ಪತಿಯಾಗಿ ಪಡೆಯಲು ತಪಸ್ಸು ಮಾಡಿದಳು. ಆದರೆ ಪಾರ್ವತಿ ಒಂದೇ ಕಾಲಿನ ಮೇಲೆ ನಿಂತಿದ್ದರಿಂದ ಈ ಪ್ರದೇಶಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

Join Nadunudi News WhatsApp Group

Modi Meditate in kanyakumari
Image Credit: Newsdrum

Join Nadunudi News WhatsApp Group