Railway Job: 10 ನೇ ತರಗತಿ ಪಾಸ್ ಆದವರಿಗೆ ಭಾರತೀಯ ರೈಲ್ವೆ ಅಲ್ಲಿ ಭರ್ಜರಿ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಹುದ್ದೆ ಖಾಲಿ ಇದ್ದು ಅರ್ಜಿ ಆಹ್ವಾನ ಮಾಡಲಾಗಿದೆ.

Karnataka Railway Recruitment: ದೇಶದಲ್ಲಿ ಇತ್ತೀಚಿಗೆ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಲಕ್ಷಾಂತರ ವಿದ್ಯಾವಂತರು ಉದ್ಯೋಗ ಇಲ್ಲದೆ ಈಗಲೂ ಕೂಡ ಖಾಲಿ ಕೂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳು ಹರಿದಾಡುತ್ತಿವೆ. ರೈಲ್ವೆ ಇಲಾಖೆಯು ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ.

SSLC ಪಾಸ್ ಆದವರಿಗೆ ಸಿಹಿ ಸುದ್ದಿ
ಇದೀಗ ಕರ್ನಾಟಕ ರೈಲ್ವೆ (Karnataka Railway) ಇಲಾಖೆಯಲ್ಲಿ ಹುದ್ದೆ ಖಾಲಿ ಇದ್ದು ಅರ್ಜಿ ಆಹ್ವಾನ ಮಾಡಲಾಗಿದೆ. ನೀವು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶ ನಿಮಗಿರುತ್ತದೆ. ಕರ್ನಾಟಕ ರೈಲ್ವೆ ಇಲಾಖೆಯ ಖಾಲಿ ಇರುವ ಹುದ್ದೆಯ ವಿವರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.

Vacancy in Karnataka Railway Department
Image Credit: Quora

ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಹುದ್ದೆ ಖಾಲಿ
ನೀವು ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ್ದು ಉದ್ಯೋಗ ಹುಡುಕುತ್ತಿದ್ದರೆ ಇದೀಗ ನೀವು ಕರ್ನಾಟಕ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ನೈಋತ್ಯ ರೈಲ್ವೆಯಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ 904 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೈಋತ್ಯ ರೈಲ್ವೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 2 2023 ಕೊನೆಯ ದಿನಾಂಕವಾಗಿದೆ.

ಖಾಲಿ ಇರುವ ಹುದ್ದೆಯ ವಿವರ
ಹುಬ್ಬಳ್ಳಿ ವಿಭಾಗದಲ್ಲಿ 237, ಕ್ಯಾರೇಜ್ ರಿಪೇರಿ ಕಾರ್ಯಾಗಾರ ಹುಬ್ಬಳ್ಳಿ- 217, ಬೆಂಗಳೂರು ವಿಭಾಗದಲ್ಲಿ 230, ಮೈಸೂರು ವಿಭಾಗದಲ್ಲಿ 177, ಕೇಂದ್ರ ಕಾರ್ಯಾಗಾರ, ಮೈಸೂರಿನಲ್ಲಿ 43 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರು,ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪೋಸ್ಟ್ ನೀಡಲಾಗುತ್ತದೆ.

Vacancy in Karnataka Railway Department
Image Credit: IndianExpress

ಅರ್ಜಿದಾರರ ವಿದ್ಯಾರ್ಹತೆ
ನೈಋತ್ಯ ರೈಲ್ವೆ ನೇಮಕಾತಿ ಪ್ರಕಾರ, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು SSLC , ITI , NTC ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು 15 ರಿಂದ 24 ವರ್ಷ ಆಗಿರಬೇಕು. SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು PwD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಲಭ್ಯವಿದೆ ಹಾಗೂ ಇತರ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.

Join Nadunudi News WhatsApp Group

Join Nadunudi News WhatsApp Group