Kia Car Issue: ಈ ಕಿಯಾ ಕಾರ್ ಬಳಸುವವರು ತಮ್ಮ ಕಾರನ್ನ ಕಂಪನಿಗೆ ವಾಪಾಸ್ ಕೊಡಬೇಕು, ಕಂಪನಿಯ ಅಧಿಕೃತ ಆದೇಶ

ಈ ಮಾದರಿಯ ಕಾರನ್ನು ಹಿಂಪಡೆಯಲು ನಿರ್ಧರಿಸಿದ ಕಿಯಾ

Kia Seltos Car Technical Issue: ಭಾರತೀಯ ಆಟೋ ವಲಯದಲ್ಲಿ Kia ಕಂಪನಿಯು ಅನೇಕ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ. ಕೀಯ ಕಂಪನಿಯ ಸಾಕಷ್ಟು ಮಾದರಿಯ ಕಾರ್ ಗಳು ಗ್ರಾಹಕರಿಗೆ ಖರೀದಿಗೆ ಲಭ್ಯವಾಗಿದೆ. ಇನ್ನು ಮಾರುಕಟ್ಟೆಯಲ್ಲಿ Kia Seltos ಅತಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು Kia Seltos ಮಾದರಿಯನ್ನು ಖರೀದಿಸುತ್ತಿದ್ದಾರೆ. ಸದ್ಯ Kia ಭಾರತದಲ್ಲಿ Seltos ಮಾದರಿಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ಕಂಪನಿಯು Seltos ಮಾದರಿಯ ಪೆಟ್ರೋಲ್ ರೂಪಾಂತರವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ. ಕಂಪನಿಯ ಈ ದಿಢೀರ್ ನಿರ್ಧಾರದ ಹಿಂದಿನ ಕಾರಣವೇನು ಎನ್ನುವುದು ಸದ್ಯದ ಪ್ರಶೆಯಾಗಿದೆ.

Kia Seltos In India
Image Credit: ABP Live

ಈ ಮಾದರಿಯ ಕಾರನ್ನು ಹಿಂಪಡೆಯಲು ನಿರ್ಧರಿಸಿದ ಕಿಯಾ
Kia India ಇದೀಗ ತನ್ನ Seltos Petrol ಮಾದರಿಯ 4358 Unit ಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಈ ಬಗ್ಗೆ Kia India ಅಧಿಕೃತ ಮಾಹಿತಿ ನೀಡಿದೆ. ಹೊಸ Kia Seltos SUV ಎಕ್ಸ್ ಶೋ ರೂಂ ಬೆಲೆ 10.90 ಲಕ್ಷದಿಂದ 20.30 ಲಕ್ಷ ರೂ. ಆಗಿದೆ. HTE, HTC, HTC Plus, HTX ಸೇರಿದಂತೆ ವಿವಿಧ ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಸಿಲ್ವರ್, ಕ್ಲಿಯರ್ ವೈಟ್, ಗ್ರಾವಿಟಿ ಗ್ರೇ, ಪ್ಯೂಟರ್ ಆಲಿವ್, ಅರೋರಾ ಬ್ಲ್ಯಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್ ಸೇರಿದಂತೆ ಆಕರ್ಷಕ ಬಣ್ಣದ ಆಯ್ಕೆಗಳು ಸಿಗಲಿವೆ.

Seltos Car 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. 6 – ಸ್ಪೀಡ್ ಮ್ಯಾನುವಲ್/ಆಟೋಮ್ಯಾಟಿಕ್, CVT, 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಗೇರ್‌ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ. ಇದು ರೂಪಾಂತರಗಳ ಆಧಾರದ ಮೇಲೆ 17 ರಿಂದ 20.7 kmpl Mileage ನೀಡುತ್ತದೆ. ಇಷ್ಟೆಲ್ಲ Feature ಇರುವ Seltos ಮಾದರಿಯನ್ನು ಹಿಂಪಡೆಯಲು ಕಾರಣವೇನು ಅನ್ನುವುದರ ಬಗೆ ತಿಳಿಯೋಣ.

Kia Seltos In India
Image Credit: Overdrive

ಸೆಲ್ಟೋಸ್ ಮಾದರಿಯನ್ನು ಹಿಂಪಡೆಯಲು ಕಾರಣವೇನು…?
ಎಲೆಕ್ಟ್ರಾನಿಕ್ ಆಯಿಲ್ ಪಂಪ್ ಕಂಟ್ರೋಲರ್‌ ನಲ್ಲಿನ ಸಂಭಾವ್ಯ ದೋಷವನ್ನು ಪರಿಹರಿಸಲು Kia Seltos ಪೆಟ್ರೋಲ್ ಮಾದರಿಗಳ 4,358 Unit ಗಳನ್ನು ಹಿಂಪಡೆಯಲಾಗುತ್ತಿದೆ. ಈ ಬಗ್ಗೆ Kia India ಅಧಿಕೃತ ಮಾಹಿತಿ ನೀಡಿದೆ. ಫೆಬ್ರವರಿ 28, 2023 ಮತ್ತು ಜುಲೈ 13, 2023 ರ ನಡುವೆ ತಯಾರಿಸಲಾದ 1.5-ಲೀಟರ್ ನೈಸರ್ಗಿಕ ಆಕಾಂಕ್ಷಿತ ಪೆಟ್ರೋಲ್ ಎಂಜಿನ್ ಹೊಂದಿರುವ CVT ಟ್ರಾನ್ಸ್‌ ಮಿಷನ್ ಹೊಂದಿರುವ Seltos SUV ಗಳನ್ನು ಹಿಂಪಡೆಯಲಾಗುತ್ತಿದೆ. ಕಾರ್ ಸವಾರರ ಸುರಕ್ಷತೆಗಾಗಿ Kia ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group