Sudeep Helpnig: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಗೆ ನೀರು ಕುಡಿಸಿದ ಕಿಚ್ಚ, ವಿಡಿಯೋ ವೈರಲ್ ಆಗಿದೆ.

ರಸ್ತೆಯಲ್ಲಿ ಅಪಘಾತವಾದ ವ್ಯಕ್ತಿಗೆ ನೀರು ಕುಡಿಸಿ ಸಹಾಯ ಮಾಡಿದ ಕಿಚ್ಚ ಸುದೀಪ್, ವೈರಲ್ ಆಗಿದೆ ವಿಡಿಯೋ.

Actor Kiccha Sudeep Helping Nature: ಸ್ಯಾಂಡಲ್ ವುಸ್ ಸ್ಟಾರ್ ನಟ ಕಿಚ್ಚ ಸುದೀಪ್ (Kiccha Sudeep) ಇದೀಗ ರಾಜಕೀಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ರಾಜಕೀಯ ಎಂಟ್ರಿಯ ನಡುವೆಯೂ ಕಿಚ್ಚ ತಮ್ಮ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅಭಿನಯ ಚಕವರ್ತಿ ಕಿಚ್ಚ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.

ತಮ್ಮ ಅಭಿಮಾನಿಗಳ ಮೇಲೆ ಕಿಚ್ಚ ವಿಶೇಷ ಪ್ರೀತಿಯನ್ನು ಇಟ್ಟಿದ್ದಾರೆ. ಇದೀಗ ಕಿಚ್ಚ ರಸ್ತೆಯಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಯೋರ್ವನನ್ನು ಆರೈಕೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಿಚ್ಚನ ಸಹಾಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Kichcha Sudeep helped the person who had an accident on the road by drinking water
Image Credit: prokerala

ರಸ್ತೆಯಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಗೆ ಸಹಾಯ ಮಾಡಿದ ಕಿಚ್ಚ
ನಟ ಕಿಚ್ಚ ಸುದೀಪ್ ಅವರು ರಸ್ತೆಯಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ್ದಾರೆ. ವ್ಯಕ್ತಿಯೋರ್ವ ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಆ ವ್ಯಕ್ತಿಗೆ ಯಾರು ಕೂಡ ಸಹಾಯ ಮಾಡಲಿಲ್ಲ. ಅಪಘಾತ ನಡೆದ ಸ್ಥಳದಲ್ಲಿ ಸಾಕಷ್ಟು ಜನ ಸೇರಿದ್ದರು ಕೂಡ ಯಾರು ಆ ವ್ಯಕ್ತಿಗೆ ಸಹಾಯ ಮಾಡಲಿಲ್ಲ.

Actor Kiccha Sudeep helped a man suffering from injuries in a road accident
Imge Credit: facebook

ಈ ಸಂದರ್ಭದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕಿಚ್ಚ ವ್ಯಕ್ತಿಯನ್ನು ಆರೈಕೆ ಮಾಡಿದ್ದಾರೆ. ವ್ಯಕ್ತಿಗೆ ನೀರು ಕುಡಿಸಿ, ಆಂಬುಲೆನ್ಸ್ ಗೆ ಕರೆ ಮಾಡಿ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಕಿಚ್ಚ ಅಪಘಾತಕ್ಕೊಳಗಾದ ವ್ಯಕ್ತಿಗೆ ಸಾಹಯ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಿಚ್ಚನ ಈ ನಡೆಗೆ ಅಭಿಮಾನಿಗಳು ಇನ್ನಷ್ಟು ಮನ ಸೋತಿದ್ದಾರೆ.

Join Nadunudi News WhatsApp Group

ಬಿಜೆಪಿ ಪ್ರಚಾರ ಕಾರ್ಯದಲ್ಲಿ ಕಿಚ್ಚ ಬ್ಯುಸಿ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಮುಂದಿನ ತಿಂಗಳು ಚುನಾವಣೆ ಇರುವ ಕಾರಣ ರಾಜಕೀಯ ಮುಖಂಡರು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಟ ಕಿಚ್ಚ ಇದೀಗ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಪರ ಪ್ರಚಾರದ ಜೊತೆಗೆ ಕಿಚ್ಚ ಚಿತ್ರೀಕರಣದಲ್ಲಿ ಕೂಡ ಬ್ಯುಸಿ ಆಗಿದ್ದಾರೆ.

Actor Kiccha Sudeep was helped by an ambulance to a person injured in an accident
Image Credit: krishijagran

Join Nadunudi News WhatsApp Group