Kodi Mutt Sri: ಒಂದೇ ತಿಂಗಳಲ್ಲಿ ನಿಜವಾಯಿತು ಕೊಡಿ ಶ್ರೀಗಳು ನುಡಿದ ಭವಿಷ್ಯ, ಮುಂದೆ ಕಾದಿದೆ ದೊಡ್ಡ ಗಂಡಾಂತರ

ಮತ್ತೆ ನಿಜವಾಯಿತು ಕೊಡಿ ಮಠದ ಶ್ರೀಗಳು ನುಡಿದ ಭವಿಷ್ಯ

Kodi Mutt Sri Shivayogi Shivanand Rajendra Swamiji: ಸದ್ಯ ಎಲ್ಲೆಡೆ ಕೊಡಿ ಮಠದ ಶ್ರೀಗಳಾದ Shivayogi Shivananda Rajendra ಸ್ವಾಮೀಜಿಯವರ ಭವಿಷ್ಯವಾಣಿಯ ಬಗ್ಗೆ ಹೆಚ್ಚು ಹೆಚ್ಚು ಮಾತುಗಳು ಕೇಳಿಬರುತ್ತಿದೆ. ಶ್ರೀಗಳು ದೇಶಕ್ಕೆ ಮುಂದೆ ಎದುರಾಗುವಂತಹ ಕಂಟಕದ ಬಗ್ಗೆ ಆಗಾಗ ಭವಿಷ್ಯವಾಣಿ ನುಡಿದು ಜನರನ್ನು ಎಚ್ಚರಿಸುತ್ತಾ ಇರುತ್ತಾರೆ.

ಈಗಾಗಲೇ ಪ್ರಕೃತಿ ವಿಕೋಪ, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣ ಸೇರಿದಂತೆ ದೇಶದ ಪ್ರಮುಖ ವ್ಯಕ್ತಿಗಳಿಗೆ ಎದುರಾಗುವಂತಹ ಕಂಟಕದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಶ್ರೀಗಳು ನುಡಿದ ಭವಿಷ್ಯ ನಿಜವಾಯಿತಾ…? ಎನ್ನುವ ಬಗ್ಗೆ ಚರ್ಚೆ ನೆಡೆಯುತ್ತಿದೆ.

Kodi Mutt Sri Shivayogi Shivanand Rajendra Swamiji
Image Credit: ETV Bharat

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ
ಮಾರ್ಚ್‌ 02 ಅಂದರೆ ನಿನ್ನೆ ಬೆಂಗಳೂರು ನಗರದ ಕುಂದಲಹಳ್ಳಿಯಲ್ಲಿ ITPL ಮುಖ್ಯರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಆಗಿದೆ. ಈ ಸ್ಪೋಟದಿಂದ ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ಬೆಚ್ಚಿ ಬೀದಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದಿಂದ ಅನೇಕರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ 4 ಶಂಕಿತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಒಂದು ವಾರದ ಹಿಂದೆಯಷ್ಟೇ kodi Mutt sri ಬಾಂಬ್ ಸ್ಪೋಟದ ಬಗ್ಗೆ ಭವಿಷ್ಯ ನುಡಿದಿದ್ದು, ಸದ್ಯ ಶ್ರೀಗಳ ಭವಿಷ್ಯ ನಿಜವಾಯಿತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ವರ್ಷದ ಆರಂಭದಲ್ಲೇ ಕೊಡಿ ಶ್ರೀ ನುಡಿದ ಭವಿಷ್ಯ ನಿಜವಾಯಿತಾ…?
ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ವರ್ಷದ ಆರಂಭದಲ್ಲಿ ಅಂದರೆ, 2024 ರಲ್ಲಿ ಅನೇಕ ದುರ್ಘಟನೆಗಳು ನೆಡೆಯುತ್ತದೆ ಎಂದು ಭವಿಷ್ಯವಾಣಿ ನುಡಿದಿದ್ದರು. ಈ ಹಿಂದೆ ಶ್ರೀ ಗಳು ಬಾಂಬ್ ಸ್ಫೋಟ, ಭೂಕಂಪ, ಧಾರ್ಮಿಕ ಮುಖಂಡನ ಸಾವು ಸಂಭವಿಸಲಿದೆ ಎಂಬ ಭವಿಷ್ಯವನ್ನು ನುಡಿದ್ದಿದರು. ಇದೀಗ ಶ್ರೀಗಳು ನುಡಿದ ಭವಿಷ್ಯದಂತೆ ಬೆಂಗಳೂರಿನ ರಾಮೇಶ್ವರಂ ಕೆಫೆ ಅಲ್ಲಿ ಬಾಂಬ್ ಸ್ಫೋಟ ಆಗಿದೆ. ಹಾಗಾದರೆ ಶ್ರೀಗಳು ಹೇಳಿದ ಬಾಂಬ್ ಸ್ಫೋಟ ಇದೇನಾ…? ಅನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ.

Kodi Mutt Sri About Bomb Blast
Image Credit: Oneindia

2024 ರಲ್ಲಿ ಎದುರಾಗುವ ಕಂಟಕದ ಬಗ್ಗೆ ಭವಿಷ್ಯ ನುಡಿದ ಶ್ರೀಗಳು
2024 ರ ವರ್ಷದಲ್ಲಿ ಹಲವು ಕಂಟಕಗಳು ಎದುರಾಗುತ್ತವೆ. ಜಾಗತಿಕ ಮಟ್ಟದಲ್ಲಿ ಮತಾಂಧತೆ ಹೆಚ್ಚಾಗಲಿದ್ದು, ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಹೊಸವರ್ಷ ಭಯಾನಕ ಅನುಭವ ನೀಡಲಿದೆ. ರಾಜ್ಯ ರಾಜಕೀಯದಲ್ಲಿ ಈ ವರ್ಷ ಏನು ನಡೆಯಲಿದೆ ಎನ್ನುವ ಬಗ್ಗೆ ಯುಗಾದಿ ಕಳೆದ ನಂತರ ಹೇಳುವೆ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದು, ದೊಡ್ಡ ಗಂಡಾಂತರ ಸಂಭವಿಸಬಹುದು ಎನ್ನುವ ಆತಂಕ ಎದುರಾಗಿದೆ.

Join Nadunudi News WhatsApp Group

Join Nadunudi News WhatsApp Group