Lakhpati Didi: ದೇಶದ ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಬಡ್ಡಿ ಇಲ್ಲದೆ ಸಿಗಲಿದೆ 5 ಲಕ್ಷ ರೂ ಸಾಲ

ದೇಶದ ಬಡ ಮಹಿಳೆಯರಿಗಾಗಿ ಲಖ್ಪತಿ ದೀದಿ ಯೋಜನೆ ಜಾರಿಗೆ ತಂದ ಕೇಂದ್ರ

Lakhpati Didi Yojana: ಕೇಂದ್ರ ಸರ್ಕಾರ ಇತ್ತೀಚಿಗೆ ಮಹಿಳೆಯರಿಗಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಈಗಾಗಲೇ ಕೇಂದ್ರದ ಮೋದಿ ಸರ್ಕಾರ ಮಹಿಳೆಯರಿಗೆ ವಿವಿಧ ಯೋಜನೆಯನ್ನು ಜಾರಿಗೊಳಿಸಿದೆ. ಸದ್ಯ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಹೊಸ ಯೋಜನೆ ಅನುಷ್ಠಾನಗೊಂಡಿದೆ.

Lakhpati Didi Yojana 2024
Image Credit: Jagran

ಮಹಿಳೆಯರಿಗಾಗಿ ವಿಶೇಷ ಯೋಜನೆ ಜಾರಿ
ಮಹಿಳೆಯರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ತನ್ನ ಬಜೆಟ್ ನಲ್ಲಿ ಘೋಷಿಸಿದೆ. ದೇಶದ ಮಹಿಳೆಯರನ್ನು ಲಕ್ಷಾಧಿಪತಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಲು ನಿರ್ಧರಿಸಿದೆ. ಹೊಸ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಘೋಷಣೆ ಹೊರಡಿಸಿದ್ದಾರೆ.

ಲಖ್ಪತಿ ದೀದಿ ಯೋಜನೆ ಎಂದರೇನು..?
ಸ್ವ-ಸಹಾಯ ಗುಂಪುಗಳಲ್ಲಿ ಸಕ್ರಿಯರಾಗಿರುವ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದಿಂದ ಈ ಲಖ್ಪತಿ ದೀದಿ ಯೋಜನೆ ಜಾರಿ ಮಾಡಲಾಗಿದೆ. ಮಹಿಳೆಯರಿಗೆ ಕೌಶಲ ತರಬೇತಿ ನೀಡುವುದರ ಮೂಲಕ ಆದಾಯ ಗಳಿಸುವ ಮಾರ್ಗವನ್ನು ತೋರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ದೇಶದ ಬಡ ಮಹಿಳೆಯರಿಗಾಗಿ ಲಖ್ಪತಿ ದೀದಿ ಯೋಜನೆ
ಫೆ. 1 ರಂದು ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು 20234 ರ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಘೋಷಣೆ ಮಾಡಲಾಗಿದೆ. ಈ ವೇಳೆ ನಿರ್ಮಲ ಸೀತಾರಾಮನ್ ಅವರು ದೇಶದ ಬಡ ಮಹಿಳೆಯರಿಗಾಗಿ ಲಖ್ಪತಿ ದೀದಿ ಯೋಜನೆಯನ್ನು ಪರಿಚಯಿಸಿದ್ದಾರೆ. ಈ ಯೋಜನೆಯು ದೇಶದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲಿದೆ.

Lakhpati Didi Yojana
Image Credit: Indiapublickhabar

ಕೇಂದ್ರದ ಈ ಯೋಜನೆಯಿಂದ ಏನು ಲಾಭವಾಗಲಿದೆ..?
ಕೇಂದ್ರ ಸರ್ಕಾರವು ಸ್ವಸಹಾಯ ಗುಂಪುಗಳ ಸದ್ಯಸರಾಗಲಿರುವ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಲಖ್ಪತಿ ದೀದಿ ಯೋಜನೆಯನ್ನು ಪರಿಚಯಿಸಿದೆ. ಪ್ರಸ್ತ ದೇಶದಲ್ಲಿ 83 ಲಕ್ಷ ಸ್ವಸಹಾಯ ಗುಂಪುಗಳಿದ್ದು, ಅವುಗಳಲ್ಲಿ 9 ಕೋಟಿಗೂ ಹೆಚ್ಚು ಮಹಿಳೆಯರಿದ್ದಾರೆ. ಇಂತಹ ಮಹಿಳೆಯರ ವಾರ್ಷಿಕ ಆದಾಯ ಸಹಜವಾಗಿ ಕಡಿಮೆ ಇರುತ್ತದೆ. ಹೀಗಾಗಿ 1 ರಿಂದ 5 ಲಕ್ಷ ರೂ. ಗಳ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತದೆ.

Join Nadunudi News WhatsApp Group

ಮಹಿಳೆಯರ ವಾರ್ಷಿಕ ಆದಾಯವನ್ನು 1 ಲಕ್ಷಕ್ಕೆ ಹೆಚ್ಚಿಸಲು ವಿವಿಧ ಸ್ಥಳಗಳಲ್ಲಿ ನಡೆಯುವ ಡಿಪಾರ್ಟ್‌ ಮೆಂಟಲ್ ಸ್ಟೋರ್‌ ಗಳು ಮತ್ತು ಮೇಳಗಳಲ್ಲಿ ಅವರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಆ ಆದಾಯವನ್ನು ಸ್ವಸಹಾಯ ಗುಂಪುಗಳಿಗೆ ವರ್ಗಾಯಿಸಲಾಗುತ್ತದೆ. ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ, ಅವರ ಜೀವನಮಟ್ಟ ಸುಧಾರಿಸಿ, ಆದಾಯ ಹೆಚ್ಚಿಸಿ, ಸ್ವಾವಲಂಬಿ, ಸಬಲರನ್ನಾಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.

Join Nadunudi News WhatsApp Group