LIC Policy: LIC ಯಿಂದ ಮಹಿಳೆಯರಿಗೆ ಸಿಗಲಿದೆ 8 ಲಕ್ಷ, ಮಹಿಳೆಯರಿಗಾಗಿ ವಿಶೇಷ ಯೋಜನೆ ಪರಿಚಯಿಸಿದ LIC.

LIC ಯ ಈ ಯೋಜನೆಯಲ್ಲಿ ಮಹಿಳೆಯರು ಹೂಡಿಕೆ ಮಾಡುವ ಮೂಲಕ 8 ಲಕ್ಷ ಲಾಭ ಗಳಿಸಬಹುದಾಗಿದೆ

LIC Aadhaar Shila Investment: LIC ಜನಸಾಮಾನ್ಯರಿಗಾಗಿ ಅದರಲ್ಲೂ ಮಹಿಳೆಯರಿಗಾಗಿ ಸಾಕಷ್ಟು ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಕಡಿಮೆ ಹೂಡಿಕೆಯ ಹೆಚ್ಚಿನ ಲಾಭದಾಯಕ ಯೋಜನಗಳು LIC ಯಲ್ಲಿ ಸಾಕಷ್ಟಿವಿದೆ. ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ LIC ಒಂದು ರೀತಿಯಲ್ಲಿ ಹೂಡಿಕೆಗೆ ಉತ್ತಮ ಆಯ್ಕೆ ಎನ್ನಬಹುದು.

ಉತ್ತಮ ಆದಾಯ ಹಾಗೂ ಭವಿಷ್ಯದ ಭದ್ರತೆಗಾಗಿ LIC ಯಲ್ಲಿನ ಹೂಡಿಕೆ ಉತ್ತಮ ಎನ್ನಬಹುದು. ನೀವು ಹೂಡಿಕೆ ಮಾಡಲು ಯೋಜನೆಯನ್ನು ಹೂಡಿಕುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಇದೀಗ ಭಾರತೀಯ ಜೀವ ವಿಮಾ ಯೋಜನೆಯು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

LIC Aadhaar Shila Investment
Image Credit: Bimabazaar

ಮಹಿಳೆಯರಿಗಾಗಿ ವಿಶೇಷ ಯೋಜನೆ ಪರಿಚಯಿಸಿದ LIC
ದೀರ್ಘವದಿಯ ಹಣವನ್ನು ಉಳಿಸಲು ಈ LIC Aadhaar Shila ಯೋಜನೆ ಸಹಾಯವಾಗಲಿದೆ. 8 ರಿಂದ 55 ವರ್ಷದ ಮಹಿಳೆಯರು ಈ LIC Aadhaar shila ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಯು 10 ರಿಂದ 20 ವರ್ಷದ ಅವಧಿಯನ್ನು ಹೊಂದಿದೆ. ಈ LIC ಯೋಜನೆಯ ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ.

ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 75 ಸಾವಿರ ರೂ. ಹಾಗೂ ಗರಿಷ್ಟ 3 ಲಕ್ಷ ಹೂಡಿಕೆ ಮಾಡಬಹುದು. ಮಹಿಳೆಯರಿಗೆ ಈ LIC ಯೋಜನೆಯು ಉತ್ತಮ ಆದಾಯವನ್ನು ನೀಡುವ ಯೋಜನೆಯಾಗಿದೆ. ನೀವು ಈ ಆಧಾರ್ ಶೀಲಾ ಯೋಜನೆಗೆ ಇನ್ನು ಅರ್ಜಿ ಸಲ್ಲಿಸದಿದ್ದರೆ ಈ ಕೊಡಲೇ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು.

Aadhaar Shila Policy Updates
Image Credit: goodreturns

LIC ಯಿಂದ ಮಹಿಳೆಯರಿಗೆ ಸಿಗಲಿದೆ 8 ಲಕ್ಷ
LIC ಯ ಆಧಾರ್ ಶಿಲಾ ಪಾಲಿಸಿಯಲ್ಲಿ ನೀವು ಪ್ರತಿದಿನ 58 ರೂಪಾಯಿಗಳ ಸಣ್ಣ ಹೂಡಿಕೆಯನ್ನು ಆರಂಭಿಸಿದರೆ ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದು. ನೀವು ಪ್ರತಿ ದಿನ 58 ರೂ. ಹೂಡಿಕೆ ಮಾಡಿದರೆ  ನಿಮ್ಮ ವಾರ್ಷಿಕ ಪ್ರೀಮಿಯಂ 21,918 ರೂ ಆಗಿರುತ್ತದೆ. ನೀವು 20 ನೇ ವಯಸ್ಸಿನಲ್ಲಿ 20 ವರ್ಷಗಳ ಅವಧಿಯನ್ನು ಆಯ್ಕೆ ಮಾಡಿದ ನಂತರ ನೀವು ಮುಕ್ತಾಯದ ಮೇಲೆ 7.94 ಲಕ್ಷ ರೂ. ಹಣವನ್ನು ಪಡೆಯಬಹುದು.

Join Nadunudi News WhatsApp Group

LIC ಯ ಆಧಾರಶಿಲಾ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಪಾಲಿಸಿ ಮಾಡಿ 3 ವರ್ಷ ಕಳೆದಿದ್ದರೆ ಸಾಲದ ಸೌಲಭ್ಯವೂ ಸಿಗುತ್ತದೆ. ಇದರ ಜೊತೆಗೆ ಮರಣದ ಪ್ರಯೋಜನದ ಪ್ರಯೋಜನವು ಪಾಲಿಸಿಯಲ್ಲಿ ಲಭ್ಯವಿದೆ. ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಮೆಚ್ಯೂರಿಟಿಯ ಮೊದಲು ಪಾಲಿಸಿಯನ್ನು ಖರೀದಿಸಿದ ನಂತರ ವಿಮಾದಾರನು ಮರಣ ಹೊಂದಿದರೆ, ನಂತರ ನಾಮಿನಿಯು 7 ಪಟ್ಟು ಲಾಭವನ್ನು ಪಡೆಯಬಹುದು.

Join Nadunudi News WhatsApp Group