LIC Pension: LIC ಈ ಯೋಜನೆಯಲ್ಲಿ ಜೀವನಪೂರ್ತಿ ಬರಲಿದೆ ಪಿಂಚಣಿ, ಆಕರ್ಷಕ ಯೋಜನೆ ಬಿಡುಗಡೆ.

LIC ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಜೀವನಪೂರ್ತಿ ಪಿಂಚಣಿ ಹಣವನ್ನ ಪಡೆಯಬಹುದು.

LIC Pension Scheme Investment: ಎಲ್ ಐ ಸಿ (LIC)ಯೋಜನೆಯಲ್ಲಿ ಸಾಕಷ್ಟು ಜನರು ಹಣ ಹೂಡಿಕೆ ಮಾಡುವ ಮೂಲಕ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ಎಲ್ ಐ ಸಿ ಮತ್ತೆ ಅತ್ಯಂತ ಲಾಭವನ್ನು ಪಡೆಯುವ ಹೊಸ ಸ್ಕೀಮ್ ಒಂದಿ ಹೊರ ಬಿದ್ದಿದೆ. ಇದರಲ್ಲಿ ನೀವು ಪ್ರತಿ ತಿಂಗಳು ಪಿಂಚಣಿ ಲಾಭವನ್ನು ಪಡೆಯಬಹುದು.

Investing in LIC pension scheme can reap huge returns
Image Credit: outlookindia

ಎಲ್ ಐ ಸಿ ಸರಳ ಪಿಂಚಣಿ ಯೋಜನೆಯ ಪ್ರಯೋಜನದ ಮಾಹಿತಿ
ಎಲ್ ಐ ಸಿ ಯಾ ಈ ಹೊಸ ಯೋಜನೆಯಲ್ಲಿ ನೀವು ಮೊತ್ತವನ್ನು ಠೇವಣಿ ಮಾಡಿದರೆ 40 ವರ್ಷ ವಯಸ್ಸಿನಲ್ಲಿಯೇ ಪಿಂಚಣಿ ಪ್ರಯೋಜನವನ್ನು ಪಡೆಯಬಹುದು. ಎಲ್ ಐ ಸಿ ಯ ಹೊಸ ಪಾಲಿಸಿ ಹೆಸರು ಸರಳ ಪಿಂಚಣಿ ಯೋಜನೆ. LIC ಯ ಸರಳ ಪಿಂಚಣಿ ಯೋಜನೆ ಒಂದೇ ಪ್ರೀಮಿಯಂ ಪಿಂಚಣಿ ಯೋಜನೆ ಆಗಿದೆ. ಇದರಲ್ಲಿ ಪಾಲಿಸಿಯನ್ನು ತೆಗೆದುಕೊಳ್ಳುವ ವೇಳೆ ಒಂದು ಬಾರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ನಂತರ ನೀವು ಇಡೀ ಜೀವನದುದ್ದಕ್ಕೂ ಪಿಂಚಣಿ ಪಡೆಯಬಹುದು.

ಈ ಯೋಜನೆಯಲ್ಲಿ ಪಾಲಿಸಿದಾರನು ಮರಣ ಹೊಂದಿದರೆ, ಏಕ ಪ್ರೀಮಿಯಂ ಮೊತ್ತವನ್ನು ಅವನ ನಾಮಿನಿಗೆ ಹಿಂತಿರುಗಿಸಲಾಗುತ್ತದೆ. ಸರಳ ಪಿಂಚಣಿ ಯೋಜನೆಯು ತಕ್ಷಣದ ವರ್ಷದ ಯೋಜನೆಯಾಗಿದೆ. ಅಂದರೆ ನೀವು ಪಾಲಿಸಿಯನ್ನು ತೆಗೆದುಕೊಂಡ ತಕ್ಷಣ ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ.

If you invest in LIC pension scheme, you can get pension every month after 40 years
Image Credit: thehindu

ಎಲ್ ಐ ಸಿ ಸರಳ ಪಿಂಚಣಿ ಯೋಜನೆ
ಎಲ್ ಐ ಸಿ ಸರಳ ಪಿಂಚಣಿ ಯೋಜನೆಯಲ್ಲಿ ಕನಿಷ್ಟ 1,000 ರೂಪಾಯಿಗಳ ಪಿಂಚಣಿ ಪಡೆಯಬಹುದು. ವಯಸ್ಸು 40 ವರ್ಷಗಳಾಗಿದ್ದು, 10 ಲಕ್ಷ ರೂಪಾಯಿಯ ಒಂದೇ ಪ್ರೀಮಿಯಂ ಅನ್ನು ಠೇವಣಿ ಮಾಡಿದರೆ ವಾರ್ಷಿಕವಾಗಿ 50,250 ರೂಪಾಯಿ ಸಿಗುತ್ತದೆ. ಇದರ ಹೊರತಾಗಿ ಠೇವಣಿ ಮೊತ್ತವನ್ನು ಮಧ್ಯದಲ್ಲಿ ಹಿಂಪಡೆಯಲು ಬಯಸಿದರೆ 5 ಪ್ರತಿಶತದಷ್ಟು ಮೊತ್ತ ಕಡಿಮೆಗೊಳಿಸಿದ ನಂತರ ಅದನ್ನು ನೀಡಲಾಗುತ್ತದೆ.

ಎಲ್‌ ಐ ಸಿಯ ಈ ಪಿಂಚಣಿ ಯೋಜನೆಯ ಪ್ರಯೋಜನವೆಂದರೆ ನೀವು ಅದರ ಮೇಲೆ ಸಾಲದ ಲಾಭವನ್ನು ಸಹ ಪಡೆಯಬಹುದು. ನಿಮಗೆ ಯಾವುದೇ ಗಂಭೀರ ಕಾಯಿಲೆ ಇದ್ದರೆ ಅದರ ಚಿಕಿತ್ಸೆಗಾಗಿ ಹಣವನ್ನು ಸಹ ತೆಗೆದುಕೊಳ್ಳಬಹುದು.

Join Nadunudi News WhatsApp Group

If you invest a large amount of money in LIC Pension Scheme, you can get a large amount of pension benefit.
Image Credit: indianexpress

ಪಾಲಿಸಿಯನ್ನು ಸರೆಂಡರ್ ಮಾಡಿದಾಗ, ಮೂಲ ಬೆಲೆಯ ಶೇ.95ರಷ್ಟನ್ನು ಹಿಂತಿರುಗಿಸಲಾಗುತ್ತದೆ. ಯೋಜನೆಯನ್ನು ಪ್ರಾರಂಭಿಸಿದ 6 ತಿಂಗಳ ನಂತರ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳಲು LIC ಏಜೆಂಟ್ ಅಥವಾ LIC ಕಚೇರಿಗೆ ಭೇಟಿ ನೀಡಬಹುದು.

Join Nadunudi News WhatsApp Group