LIC Policy Close: ಸೆ. 30 ರ ನಂತರ ಬಂದ್ ಆಗಲಿದೆ LIC ಯ ಈ ಪಾಲಿಸಿ, LIC ಪಾಲಿಸಿ ಮಾಡಿಸಿದವರೇ ಎಚ್ಛೆತ್ತುಕೊಳ್ಳಿ.

ಇನ್ನು 5 ದಿನಗಳಲ್ಲಿ ಸ್ಥಗಿತಗೊಳ್ಳಲಿದೆ ಈ ಯೋಜನೆ, ಪಾಲಿಸಿ ಮಾಡಿಸುವ ಜನರೇ ಎಚ್ಛೆತ್ತುಕೊಳ್ಳಿ.

LIC Policy Close 2023: ಭಾರತೀಯ ಜೀವ ವಿಮೆ ಜನಸಾಮಾನ್ಯರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ದೇಶದ ಕೋಟ್ಯಂತರ ಜನರು LIC ವಿವಿಧ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎನ್ನಬಹುದು.

LIC ಈಗಾಗಲೇ ಸಾಕಷ್ಟು ಯೋಜನೆಯನ್ನು ಪರಿಚಯಿಸಿದ್ದು ಅದರಲ್ಲಿ ಒಂದು ಪ್ರೀಮಿಯಂ ಯೋಜನೆಯು ಇನ್ನು ಕೆಲವೇ ದಿನಗಳಲ್ಲಿ ಮುಚ್ಚಲಿದೆ. ಈ ಯೋಜನೆಯ LIC ಉತ್ತಮ ಹೂಡಿಕೆಯ ಆಯ್ಕೆಯಾಗಿದೆ. ನೀವು ಈ ಯೋಜನೆಯ ಬಗ್ಗೆ ತಿಳಿದುಕೊಳ್ಳುವ ಮೂಲಕ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳಬಹುದು.

LIC Dhan Vriddhi Scheme Update
Image Credit: Rightsofemployees

ಇನ್ನು 5 ದಿನಗಳಲ್ಲಿ ಸ್ಥಗಿತಗೊಳ್ಳಲಿದೆ ಈ ಯೋಜನೆ
LIC Dhan Vriddhi Scheme ಈಗಾಗಲೇ ಗ್ರಾಹಕರಿಗೆ ಲಭ್ಯವಾಗಿದೆ. Septembar ನಲ್ಲಿ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. LIC ಇದೀಗ ತನ್ನ Dhan Vriddhi ಯೋಜನೆಯನ್ನು ಇನ್ನು 5 ದಿನಗಳಲ್ಲಿ ಮುಚ್ಚಲಿದೆ. ನೀವು LIC ಯ ಧನ್ ವೃದ್ಧಿ ಪಾಲಿಸಿಯಲ್ಲಿ ಒಮ್ಮೆ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಜೀವನದುದ್ದಕ್ಕೂ ಈ ಯೋಜನೆಯ ಲಾಭವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಇದರಲ್ಲಿ ಗ್ರಾಹಕರು ಜೀವ ರಕ್ಷಣೆಯ ಜೊತೆಗೆ ಉಳಿತಾಯದ ಲಾಭವನ್ನೂ ಪಡೆಯುತ್ತಾರೆ.

ಸೆ. 30 ರ ನಂತರ ಬಂದ್ ಆಗಲಿದೆ LIC Dhan Vriddhi
ವೈಯಕ್ತಿಕ, ಉಳಿತಾಯ ಮತ್ತು ಏಕ ಪ್ರೀಮಿಯಂ ಜೀವನ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ನೀವು ಯೋಜಿಸುತ್ತಿದ್ದರೆ ನಿಮಗೆ LIC Dhan Vriddhi Scheme ಉತ್ತಮ ಆಯ್ಕೆಯಾಗಲಿದೆ. ಈ ಯೋಜನೆಯನ್ನು LIC ಜೂನ್ 23 ರಂದು ಪ್ರಾರಂಭಿಸಿದ್ದು, ಸೆಪ್ಟೆಂಬರ್ 30 ರಿಂದ ಯೋಜನೆಯು ಬಂದ್ ಆಗಲಿದೆ. ಈ ಬಗ್ಗೆ LIC Tweet ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.

Join Nadunudi News WhatsApp Group

LIC Dhan Vriddhi ಯೋಜನೆಯ ಲಾಭ
LIC Dhan Vriddhi ಯೋಜನೆಯು 10, 15 ಮತ್ತು 18 ವರ್ಷಗಳ ಅವಧಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು, ನಿಮ್ಮ ವಯಸ್ಸು ಕನಿಷ್ಠ 3 ತಿಂಗಳಿಂದ 8 ವರ್ಷಗಳಾಗಿರಬೇಕು. ಈ ಯೋಜನೆಯಲ್ಲಿ, ನೀವು 80C ಅಡಿಯಲ್ಲಿ 1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಸಹ ಪಡೆಯುತ್ತೀರಿ. LIC ಧನ್ ವೃದ್ಧಿ ಯೋಜನೆಯಲ್ಲಿ ಕನಿಷ್ಠ 1,25,000 ರೂ.ಗಳ ಖಾತರಿಯ ಲಾಭವನ್ನು ನೀಡುತ್ತದೆ.

Join Nadunudi News WhatsApp Group