LPG Cylinder: ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್, ಗ್ಯಾಸ್ ಬೆಲೆಯಲ್ಲಿ 200 ರೂ ರಿಯಾಯಿತಿ.

ಈಗ ಫ್ಲಿಪ್ಕಾರ್ಟ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ಸಿಗಲಿದೆ 200 ರೂಪಾಯಿ ರಿಯಾಯಿತಿ.

LPG Cylinder In Flipkart:: ಇದೀಗ ಗ್ಯಾಸ್ ಸಿಲಿಂಡರ್ (Gas Cylinder) ಬಳಕೆದಾರರಿಗೆ ಹೊಸ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್ ಬಳಕೆ ಎಲ್ಲರ ಮನೆಯಲ್ಲೂ ಮಾಡುತ್ತಾರೆ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇತ್ತೀಚಿಗೆ ಏರಿಕೆ ಕಂಡಿದ್ದು ಜನ ಸಾಮಾನ್ಯರಿಗೆ ಅದನ್ನು ಖರೀದಿಸಲು ಕಷ್ಟ ಎನಿಸಿದೆ. ಇದೀಗ ಗ್ಯಾಸ್ ಸಿಲಿಂಡರನ್ನು 200 ರೂಪಾಯಿ ರಿಯಾಯಿತಿ ಮೇಲೆ ಖರೀದಿಸುವ ಹೊಸ ಮಾರ್ಗ ಒಂದು ಜನರಿಗೆ ಪಾರಿಚಯ ಆಗಲಿದೆ.

If you book a gas cylinder on Flipkart, you will get a discount of Rs 200.
Image Credit: paytm

200 ರೂಪಾಯಿ ರಿಯಾಯಿತಿಯಲ್ಲಿ ಗ್ಯಾಸ್ ಸಿಲಿಂಡರ್
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದರೆ ಅದನ್ನು ಬುಕ್ ಮಾಡುವ ವಿಧಾನವನ್ನು ನೀವು ಚೇಂಜ್ ಮಾಡಿದರೆ 200 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದು. ಫ್ಲಿಪ್ಕಾರ್ಟ್ (Flipkart) ನಲ್ಲಿ ಓರ್ಡರ್ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಅಂದರೆ 200 ರೂಪಾಯಿಯ ರಿಯಾಯಿತಿಯನ್ನು ಪಡೆಯಬಹುದು.

ಫ್ಲಿಪ್ಕಾರ್ಟ್ ನಲ್ಲಿ ರಿಯಾಯಿತಿಯಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್
ಸದ್ಯ ಈಗ ಫ್ಲಿಪ್ಕಾರ್ಟ್ ನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದಾಗಿದೆ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಜನರಿಗೆ 200 ರೂಪಾಯಿಗಳ ಆಫರ್ ಕೂಡ ಘೋಷಣೆ ಆಗಿದೆ.

Now gas cylinders can be booked on Flipkart and people who book gas cylinders on Flipkart will get a discount of around 200 rupees.
Image Credit: moneycontrol

ಫ್ಲಿಪ್ಕಾರ್ಟ್ ಅಪ್ ಗೆ ಹೋಗಿ ಸೂಪರ್ ಕಾಯಿನ್ಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಕಾಯಿನ್ ಪೇ ಎಂಬ ಆಯ್ಕೆ ಮಾಡಬೇಕು. LPG ಬುಕಿಂಗ್ ಆಯ್ಕೆ ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಹೊಸ ಪುಟದಲ್ಲಿ ನೀವು ಯಾವ ಕಂಪನಿಯ ಗ್ಯಾಸ್ ಸಿಲಿಂಡರ್ ಬುಕ್ ಬಳಸುತ್ತಿದ್ದೀರಿ ಅನ್ನುವ ಮಾಹಿತಿಯನ್ನ ನೀಡಬೇಕಾಗುತ್ತದೆ.

Join Nadunudi News WhatsApp Group

ಅದೇ ರೀತಿಯಲ್ಲಿ ಗ್ಯಾಸ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೆಕು. ಸರಿಯಾದ ನಂಬರ್ ಅನ್ನು ನೋಂದಾವಣೆ ಮಾಡುವುದು ಅವಶ್ಯಕವಾಗಿದೆ ನಂತರ ಮೇಕ್ ಪೇಮೆಂಟ್ ಮೇಲೆ ಕ್ಲಿಕ್ ಮಾಡಿ ಈಗ ನಿಮಗೆ ಸಿಲೆಂಡರ್ ಬೆಲೆ ಎಷ್ಟು ಕಾಣಿಸುತ್ತದೆ.

Offer announcement on gas cylinder booking on Flipkart.
Image Credit: ndtv

ನಂತರ ಪಾವತಿ ಆಯ್ಕೆ ನಿಮ್ಮ ಮುಂದೆ ಬರುತ್ತದೆ. ಈಗ ನಿಮಗೆ ಎಷ್ಟು ರಿಯಾಯಿತಿ ಸಿಗುತ್ತೆ ಅನ್ನುವುದು ಕಾಣುತ್ತದೆ.  ಫ್ಲಿಪ್ಕಾರ್ಟ್ ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಜನರಿಗೆ ಮಾತ್ರ ಈ ಆಫರ್ ಲಭ್ಯ ಇರುತ್ತದೆ.

ಉದಾಹರಣೆಗೆ ನೀವು 700 ಸೂಪರ್ ಕಾಯಿನ್ ಹೊಂದಿದ್ದರೆ ನಿಮಗೆ 200 ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಈಗ ಸಿಲಿಂಡರ್ ಬೆಲೆ 1,150 ರೂಪಾಯಿ ಆಗಿದೆ. ನೀವು 200 ರೂಪಾಯಿ ರಿಯಾಯಿತಿ ಪಡೆದುಕೊಂಡರೆ ಕೇವಲ 950 ರೂಪಾಯಿಯಲ್ಲಿ ಸಿಲಿಂಡರ್ ಬುಕ್ ಮಾಡಬಹುದು.

Join Nadunudi News WhatsApp Group