Co-operative Bank: ರಾತ್ರೋರಾತ್ರಿ ಇನ್ನೊಂದು ಬ್ಯಾಂಕಿಗೆ ಬೀಗ ಹಾಕಿದ RBI, ಕಣ್ಣೀರು ಹಾಕುತ್ತಿದ್ದಾರೆ ಹಣ ಇಟ್ಟಿರುವ ಜನರು.

ಮತ್ತೊಂದು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿದ RBI .

Lucknow Urban Co-operative Bank Licence Cancelled: ದೇಶದಲ್ಲಿ ಕೇಂದ್ರ ಬ್ಯಾಂಕ್ ಇದೀಗ ನಿಯಮ ಉಲ್ಲಂಘನೆ ಮಾಡುತ್ತಿರುವ Cooperative Bank ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಸದ್ಯ RBI ದೇಶದಲ್ಲಿ ವಿವಿಧ ನಿಯಮವನ್ನು ಜಾರಿಗೊಳಿಸುತ್ತ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಬ್ಯಾಂಕ್ ಗ್ರಾಹಕರ ಭದ್ರತೆಗಾಗಿ RBI ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ RBI ಕಳೆದ ತಿಂಗಳಿನಿಂದ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

ಕರ್ನಾಟಕ ಸೇರಿದಂತೆ ಕೇರಳ, ಉತ್ತರ ಪ್ರದೇಶ್, ಗುಜರಾತ್, ಮುಂಬೈ, ಲಕ್ನೋ, ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಪಡಿಸಿದೆ. ಇದೀಗ ಲಕ್ನೋದ ಮತ್ತೊಂದು ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದುಗೊಳಿಸಿ ಬ್ಯಾಂಕ್ ನಲ್ಲಿ ಹಣ ಹಿಂಪಡೆಯಲು RBI ಮಿತಿಯನ್ನು ನೀಡಿದೆ. ಬ್ಯಾಂಕ್ ನ ಚೆಕ್ ವಿವರಗಳನ್ನು ರದ್ದುಗೊಳಿಸುವ ಮೂಲಕ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ.

 Bank Licence Cancelled
Image Credit: Economictimes

ಈ ಬ್ಯಾಂಕ್ ನ ಲೈಸೆನ್ಸ್ ರದ್ದುಮಾಡಿದ RBI
Septembar 20 ರಿಂದ 30 ರೊಳಗೆ ಕೇವಲ 10 ದಿನಗಳಲ್ಲಿ RBI ದೇಶದ 8 ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದು ಮಾಡಿದೆ. ಇದೀಗ RBI Lucknow Urban Co-operative Bank ನ ಪರವಾನಗಿಯನ್ನು ರದ್ದುಪಡಿಸಿದೆ. ಬಂಡವಾಳ ಮತ್ತು ಗಳಿಕೆಯ ಕೊರತೆ ಇರುವ ನಿಟ್ಟಿನಲ್ಲಿ RBI ಪರವಾನಗಿಯನ್ನು ರದ್ದು ಮಾಡಿದೆ. ಬ್ಯಾಂಕ್ ಅನ್ನು ಮುಚ್ಚಲು ಮತ್ತು ಸಹಕಾರಿ ಬ್ಯಾಂಕ್‌ಗೆ ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶವನ್ನು ಹೊರಡಿಸಲು ಉತ್ತರ ಪ್ರದೇಶದ ಸಹಕಾರಿ ಆಯುಕ್ತ ಮತ್ತು ರಿಜಿಸ್ಟ್ರಾರ್‌ ಗೆ ಮನವಿ ಮಾಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

Lucknow Urban Co-operative Bank
ಬ್ಯಾಂಕ್ ನ ಪರವಾನಗಿ ರದ್ದಾದ ಬಳಿಕ ಬ್ಯಾಂಕ್ ನಲ್ಲಿ ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದಾಗಲಿ ಅಥವಾ ಗ್ರಾಹಕರು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ ಎಂದು RBI ಆದೇಶ ಹೊರಡಿಸಿದೆ. ಪ್ರತಿ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಅಡಿಯಲ್ಲಿ ರೂ. 5 ಲಕ್ಷದವರೆಗೆ ಠೇವಣಿಗಳನ್ನು ಪಡೆಯಬಹುದು.

Lucknow Urban Co-operative Bank Licence Cancelled
Image Credit: Original Source

ಇದಕ್ಕಿಂತ ಹೆಚ್ಚಿನ ಠೇವಣಿ ಮೊತ್ತವನ್ನು ಕ್ಲೈಮ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು RBI ಮಾಹಿತಿ ನೀಡಿದೆ. ಬ್ಯಾಂಕಿನ ಅಂಕಿಅಂಶಗಳ ಪ್ರಕಾರ, 99.53 ಪ್ರತಿಶತ ಠೇವಣಿದಾರರು ತಮ್ಮ ಠೇವಣಿಗಳ ಸಂಪೂರ್ಣ ಮೊತ್ತವನ್ನು ಡಿಐಸಿಜಿಸಿ ಯಿಂದ ಸ್ವೀಕರಿಸಲು ಅರ್ಹರಾಗಿದ್ದಾರೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಸದ್ಯ Lucknow Urban Co-operative Bank ನಲ್ಲಿ ಖಾತೆ ಹೊಂದಿರುವವರು ಚಿಂತಿಸುವಂತಾಗಿದೆ.

Join Nadunudi News WhatsApp Group

Join Nadunudi News WhatsApp Group