Wagon R New: 34 ಕಿ.ಮೀ ಮೈಲೇಜ್ ನೀಡುವ ಈ ಮಾರುತಿ ಕಾರಿನ ಖರೀದಿಗಾಗಿ ಮುಗಿಬಿದ್ದ ಜನ, ಕಡಿಮೆ ಬೆಲೆ

34 Km ಮೈಲೇಜ್ ನೀಡುವ ಈ ಕಾರ್ ಗೆ ಹೆಚ್ಚಿದೆ ಬೇಡಿಕೆ

Maruti Suzuki Wagon R: ಸದ್ಯ Maruti ಕಂಪನಿ ತನ್ನ ಹೊಚ್ಚ ಹೊಸ Maruti Suzuki Wagon R ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ವ್ಯಾಗನ್ ಆರ್ ಕಾರ್ ನಲ್ಲಿ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ.

ಮಾರುತಿ ಬಿಡುಗಡೆಗೊಳಿಸಿರುವ ಕಾರ್ ಗಳಲ್ಲಿ ಈ ಹೊಸ ಮಾರುತಿ ವ್ಯಾಗನಾರ್ ಅತಿ ಹೆಚ್ಚು ಮೈಲೇಜ್ ನೀಡಲಿದೆ. ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ. ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಈ ವ್ಯಾಗನಾರ್ ಮಾದರಿಗೆ ಮಾರುಕಟ್ಟೆಗೆ ಬೇಡಿಕೆ ಹೆಚ್ಚಿದೆ.

Maruti Suzuki Wagon R
Image Credit: Original Source

Maruti Suzuki Wagon R
ಈ ಮಾರುತಿ ಸುಜುಕಿ ವ್ಯಾಗನಾರ್ ಕಾರ್ ನಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ ಮೆಂಟ್, ಆಪಲ್ ಕಾರ್‌ ಪ್ಲೇ, ಆಂಡ್ರಾಯ್ಡ್ ಆಟೋ, 4-ಸ್ಪೀಕರ್ ಆಡಿಯೊ ಸಿಸ್ಟಮ್, ಹಿಲ್-ಹೋಲ್ಡ್ ಅಸಿಸ್ಟ್, ಸ್ಪೀಡ್ ಸೆನ್ಸಿಟಿವ್ ಆಟೋ ಡೋರ್, ಕೀಲೆಸ್ ಎಂಟ್ರಿ, ಸೆಂಟ್ರಲ್ ಲಾಕಿಂಗ್ ಫೀಚರ್ ಅನ್ನು ಪಡೆಯಬಹುದಾಗಿದೆ. ಇನ್ನು ವಾಹನ ಚಾಲಕರ ಸುರಕ್ಷತೆಗಾಗಿ ಕಾರ್ ನಲ್ಲಿ ಎರಡು ಏರ್‌ ಬ್ಯಾಗ್‌ ಗಳು, ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಇಬಿಡಿ ಜೊತೆಗೆ ಎಬಿಎಸ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸ್ಟೀರಿಂಗ್ ವೀಲ್‌ ಸೇರಿದಂತೆ ಇನ್ನಿತರ ಹತ್ತು ಹಲವು ಸುಧಾರಿತ ಫೀಚರ್ ಅನ್ನು ಅಳವಡಿಸಲಾಗಿದೆ.

ಮಾರುತಿ ಸುಜುಕಿ ವ್ಯಾಗನಾರ್ ಎಂಜಿನ್ ಸಾಮರ್ಥ್ಯ
ಕಂಪನಿಯು ಈ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಇದರಲ್ಲಿ 1.0 ಲೀಟರ್ ಕೆ ಸಿರೀಸ್ ಡ್ಯುಯಲ್-ಜೆಟ್ ಡ್ಯುಯಲ್ ವಿವಿಟಿ ಎಂಜಿನ್ ಮತ್ತು 1.2 ಲೀಟರ್ ಎಂಜಿನ್ ಅನ್ನು ನೀಡಿದೆ. ಇನ್ನು ಮಾರುತಿ ಸುಜುಕಿ ವ್ಯಾಗನಾರ್ CNG ರೂಪಾಂತರದಲ್ಲಿ ಕೂಡ ಲಭ್ಯವಿರುತ್ತದೆ. ವ್ಯಾಗನಾರ್ 1.0 ಲೀಟರ್ ಎಂಜಿನ್ CNG ಆವೃತ್ತಿಯನ್ನು ನೀಡಲಿದೆ.

Maruti Suzuki Wagon R Price
Image Credit: Autocarpro

34 Km ಮೈಲೇಜ್ ನೀಡುವ ಈ ಕಾರ್ ಗೆ ಹೆಚ್ಚಿದೆ ಬೇಡಿಕೆ
ಕಂಪನಿಯ ಇನ್ನಿತರ ಮಾದರಿಯ ಕಾರ್ ಗಳಿಗೆ ಹೋಲಿಸಿದರೆ ಮಾರುತಿ ಸುಜುಕಿ ವ್ಯಾಗನಾರ್ ನಲ್ಲಿ ಹಲವಾರು ಸುಧಾರಿತ ನವೀಕರಿಸಿದ ಫೀಚರ್ ಗಳನ್ನೂ ನೋಡಬಹುದಾಗಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ VXI AMT ಟ್ರಿಮ್ ನಲ್ಲಿ ಪ್ರತಿ ಲೀಟರ್ ಗೆ 25.19 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಮಾರುತಿ ವ್ಯಾಗನಾರ್ CNG ಆವೃತ್ತಿಯು ಪ್ರತಿ ಕೆಜಿಗೆ 34.05 ಕಿಲೋಮೀಟರ್ ಮೈಲೇಜ್ ನೀಡಲಿದೆ.

Join Nadunudi News WhatsApp Group

Join Nadunudi News WhatsApp Group