ಮೇಘನಾ ರಾಜ್ ಮಾತು ಕೇಳದ ಜೂನಿಯರ್ ಚಿರು ಮಾಡಿದ್ದೇನು ಗೊತ್ತಾ, ವಿಡಿಯೋ ಸಿಕ್ಕಾಪಟ್ಟೆ ವೈರಲ್.

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದ ಸುಂದರ ಜೋಡಿಗಳು ಎಂದು ಹೇಳಬಹುದು. ಈ ಸುಂದರ ಜೋಡಿಗಳ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಎರಡು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ತೀವ್ರವಾದ ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು. ಇನ್ನು ಚಿರು ಇಹಲೋಕವನ್ನ ತ್ಯಜಿಸುವ ಸಮಯದಲ್ಲಿ ಮೇಘನಾ ರಾಜ್ ಅವರು ತುಂಬಿ ಗರ್ಭಿಣಿಯಾಗಿದ್ದು ಈಗ ತನ್ನ ಮಗನಲ್ಲಿ ಚಿರುವನ್ನ ಕಾಣುತ್ತಿದ್ದಾರೆ ಮೇಘನಾ ರಾಜ್. ಇನ್ನು ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಮೇಘನಾ ಮತ್ತು ಮಗ ರಾಯನ್ ರಾಜ್ ಸರ್ಜಾ ವಿಡಿಯೋ ಮತ್ತು ಫೋಟೋ ವೈರಲ್ ಆಗುತ್ತಲೇ ಇರುತ್ತದೆ.

ಮೊನ್ನೆ ಚಿರು ಅಗಲಿ ಎರಡು ವರ್ಷಗಳು ಕಳೆದಿದ್ದು ಅಪ್ಪನ ಮುಂದೆ ಜೂನಿಯರ್ ಚಿರು ಹೇಳಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಚಿರು ಮಗನ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ. ಹೌದು ರಾಯಲ್ ಸರ್ಜಾ ಅಮ್ಮನ ಮಾತನ್ನ ಕೇಳದೆ ಏನು ಮಾಡುತ್ತಿದ್ದಾನೆ ಎಂದು ತಿಳಿದರೆ ಆಶ್ಚರ್ಯ ಅನಿಸುತ್ತದೆ. ಹಾಗಾದರೆ ಅಮ್ಮನ ಮಾತು ಕೇಳದ ಜೂನಿಯರ್ ಚಿರು ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Meghana raj and royan raj sarja

ಹೌದು ಸ್ನೇಹಿತರೆ ಮೇಘನಾ ರಾಜ್ ಅವರು ಮಗನಿಗೆ ಅಪ್ಪನಿಗೆ ಅಗಲಿಕೆ ಕಾಡಬಾರದು ಅನ್ನುವ ಉದ್ದೇಶದಿಂದ ಅಪ್ಪನ ಫೋಟೋ, ಅಪ್ಪನ ಧ್ವನಿ ಮತ್ತು ಅಪ್ಪನ ಸಿನಿಮಾಗಳನ್ನ ತೋರಿಸುತ್ತ ಅಪ್ಪ ಜೊತೆಗೆ ಇದ್ದಾರೆ ಅನುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಅದೇ ರೀತಿಯಲ್ಲಿ ಜೂನಿಯರ್ ಚಿರು ಎಲ್ಲೇ ಅಪ್ಪನ ಫೋಟೋ ನೋಡಿದರು ಅಪ್ಪನನ್ನ ಗುರುತು ಹಿಡಿದು ಅಪ್ಪ ಅಪ್ಪ ಎಂದು ಕೂಗುತ್ತಾನೆ. ಇನ್ನು ಅದೇ ರೀತಿಯಲ್ಲಿ ಮೇಘನಾ ರಾಜ್ ಅವರು ಈಗ ಒಂದು ವಿಡಿಯೋ ತಮ್ಮ ಅಭಿಮಾನಿಗಳ ಮತ್ತು ಚಿರು ಅಭಿಮಾನಿಗಳ ಜೊತೆ ಹಂಡಿಕೊಂಡಿದ್ದಾರೆ.

ಹೌದು ರಾಯನ್ ರಾಜ್ ಸರ್ಜಾಗೆ ಎಷ್ಟು ಭಾರಿ ಅಮ್ಮ ಅಮ್ಮ ಎಂದು ಹೇಳಿದರು ಅವನು ಅಪ್ಪ ಅಪ್ಪ ಎಂದು ಹೇಳುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ ಮೇಘನಾ ರಾಜ್. ಹೌದು ಮೇಘನಾ ರಾಜ್ ಅವರು ಜ್ಯೂನಿಯ ಚಿರು ಬಳಿ ಅಮ್ಮ ಎಂದು ಕರೆಯಲು ಹೇಳಿಕೊಡುತ್ತಿದ್ದರೆ ಅವನು ಅಪ್ಪ ಎಂದು ಕರೆಯುತ್ತಿದ್ದು ಅದನ್ನ ನೋಡಿ ಖುಷಿಪಟ್ಟಿರುವ ಮೇಘನಾ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು ಇದನ್ನ ನೋಡಿದ ಅಭಿಮಾನಿಗಳು ಚಿರು ಅವರು ಇದ್ದಿದ್ದರೆ ಇದನ್ನ ನೋಡಿ ತುಂಬಾ ಖುಷಿ ಪಡುತ್ತಿದ್ದರು ಎಂದು ಹೇಳಿದ್ದಾರೆ. ಸ್ನೇಹಿತರೆ ಜೂನಿಯರ್ ಚೀರುವಿಗೆ ಅಪ್ಪನ ಮೇಲಿರುವ ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

 

View this post on Instagram

 

A post shared by Meghana Raj Sarja (@megsraj)

 

Join Nadunudi News WhatsApp Group