Investment: ಮಗಳ ಶಿಕ್ಷಣ ಮತ್ತು ಮದುವೆಗೆ ಸಮಸ್ಯೆ ಆಗಬಾರದು ಅಂದರೆ ಮಗಳ ಹೆಸರಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು…? ಹೂಡಿಕೆ ವಿಧಾನ

ಮಗಳ ಮದುವೆ ಮತ್ತು ಶಿಕ್ಷಣಕ್ಕಾಗಿ ಎಷ್ಟು ಹೂಡಿಕೆ ಮಾಡಬೇಕು...? ಇಲ್ಲಿದೆ ಡೀಟೇಲ್ಸ್

Money Investment Plan: ಒಂದು ಕುಟುಂಬದಲ್ಲಿ ಹೆಣ್ಣು ಮಗು ಜನಿಸಿಥೆಂದರೆ ಸಂಭ್ರಮ, ಸಡಗರದ ಜೊತೆಗೆ ಭಯ ಕೂಡ ಪೋಷಕರಲ್ಲಿ ಇರುತ್ತದೆ ಯಾಕೆಂದರೆ ತನ್ನ ಹೆಣ್ಣು ಮಗಳಿಗೆ ಉತ್ತಮ ಶಿಕ್ಷಣ ನೀಡಬೇಕು, ಅವಳಿಗೆ ಮದುವೆ ಮಾಡಿಸಬೇಕು ಅಂತೆಲ್ಲ. ಹೆಣ್ಣು ಮಗುವಿನ ಬಗ್ಗೆ ಇಷ್ಟೆಲ್ಲ ಆಲೋಚನೆ ಮಾಡೋ ಪೋಷಕರು ನಿಮ್ಮ ಮಗಳಿಗಾಗಿ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ ಸುಕನ್ಯಾ ಸಮೃದ್ಧಿ ಯೋಜನೆ ಉತ್ತಮ ಆಯ್ಕೆ ಆಗಿದೆ.

ಈ ಯೋಜನೆ ನಿಮ್ಮನ್ನು ಮಿಲಿಯನೇರ್ ಮಾಡಬಹುದು ಈ ಮೂಲಕ ನಿಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ. ನಿಮ್ಮ ಮಗಳ ಹೆಸರಿನಲ್ಲಿ ವಾರ್ಷಿಕವಾಗಿ ಇಷ್ಟು ಹೂಡಿಕೆ ಮಾಡಿ, ನೀವು ಮೆಚ್ಯೂರಿಟಿಯಲ್ಲಿ ಉತ್ತಮ ಮೊತ್ತವನ್ನು ಪಡೆಯುತ್ತೀರಿ ಅನ್ನುವುದರ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Sukanya Samriddhi Scheme Details
Image Credit: Timesnownews

ಭವಿಷ್ಯದಲ್ಲಿ ಹಣವು ಉಪಯುಕ್ತವಾಗಿರುತ್ತದೆ

ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯನ್ನು ಸಾಕಷ್ಟು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಈ ಖಾತೆಯಲ್ಲಿ ಠೇವಣಿ ಇಡಲಾದ ಬಂಡವಾಳವನ್ನು ನೀವು ನಿಮ್ಮ ಮಗಳ ವಿದ್ಯಾಭ್ಯಾಸಕ್ಕೆ ಹಾಗೂ ಆಕೆಯ ಮದುವೆಗೆ ಬಳಸಬಹುದು ಏಕೆಂದರೆ ಇದು ಉತ್ತಮ ಬಡ್ಡಿ ಗಳಿಸುತ್ತದೆ.

ಈ ಯೋಜನೆಯಲ್ಲಿ ಪಾಲಕರು ತಮ್ಮ ಮಗಳ ಹೆಸರಿನಲ್ಲಿ 50 ಸಾವಿರ ರೂ. ಹೂಡಿಕೆ ಮಾಡಿದರೆ ಮಗಳು ದೊಡ್ಡವರಾದ ತಕ್ಷಣ ಮೆಚ್ಯೂರಿಟಿ ಆದ ಮೇಲೆ ಉತ್ತಮ ಹಣ ಸಿಗುತ್ತದೆ. ಈ ಖಾತೆಯಲ್ಲಿ ಹೂಡಿಕೆ ಮಾಡುವುದರಿಂದ ಶೇಕಡಾ 8 ರ ದರದಲ್ಲಿ ಬಡ್ಡಿ ಸಿಗುತ್ತದೆ. ಅದೇ ರೀತಿಯಲ್ಲಿ 2024 ರ ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಕೂಡ ಹೆಚ್ಚಾಗಿದೆ

Join Nadunudi News WhatsApp Group

ವಯಸ್ಸಿನ ಮಿತಿ ಬಗ್ಗೆ ಗಮನವಿರಲಿ

ಮಗಳು ಹುಟ್ಟಿದ ನಂತರ SSY ಯೋಜನೆಯಲ್ಲಿ ಖಾತೆ ತೆರೆಯಬಹುದು. ಇದರಲ್ಲಿ 10 ವರ್ಷದೊಳಗಿನ ಮಗಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದಾಗಿದೆ. ಹೂಡಿಕೆದಾರರು 15 ವರ್ಷಗಳವರೆಗೆ ನಿರಂತರವಾಗಿ ಹೂಡಿಕೆ ಮಾಡಬಹುದು. ಮಗಳಿಗೆ 18 ವರ್ಷ ತುಂಬಿದಾಗ, ಖಾತೆಯಿಂದ ಸ್ವಲ್ಪ ಮೊತ್ತವನ್ನು ಹಿಂಪಡೆಯಬಹುದು. ಆದರೆ 21 ವರ್ಷ ವಯಸ್ಸನ್ನು ತಲುಪಿದ ನಂತರ, ಸಂಪೂರ್ಣ ಮೊತ್ತವನ್ನು SSY ಖಾತೆಯಿಂದ ಹಿಂಪಡೆಯಬಹುದು. ಖಾತೆಯಿಂದ ಹಿಂಪಡೆಯಲಾದ ಸಂಪೂರ್ಣ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.

Sukanya Samriddhi Scheme Profit
Image Credit: Kannadanews

ಲಕ್ಷಗಳ ಮೌಲ್ಯದ ಆದಾಯವನ್ನು ಹೇಗೆ ಪಡೆಯುವುದು?

ಹೂಡಿಕೆದಾರರು ತಮ್ಮ ಮಗಳು 5 ವರ್ಷದವಳಿದ್ದಾಗ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಅವರು ಮುಂದಿನ 15 ವರ್ಷಗಳವರೆಗೆ ನಿರಂತರ ಹೂಡಿಕೆಯನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ಒಟ್ಟು 7 ಲಕ್ಷ 50 ಸಾವಿರ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ಬಡ್ಡಿಯಾಗಿ 14 ಲಕ್ಷ 94 ಸಾವಿರದ 8454 ರೂ.ಆಗಿರುತ್ತದೆ.

ಇದರ ಪ್ರಕಾರ ಮೆಚ್ಯೂರಿಟಿ ಅಂದರೆ 18 ವರ್ಷ ತುಂಬಿದ ಮೇಲೆ ಮಗಳ ಖಾತೆಗೆ 14 ಲಕ್ಷ 39 ಸಾವಿರದ 845, ಬಡ್ಡಿ ಸೇರಿ ಒಟ್ಟು 7 ಲಕ್ಷ 50 ಸಾವಿರ ರಿಟರ್ನ್ ಸೇರಿ, ಒಟ್ಟು 22,44 ,845 ರೂಪಾಯಿ ಗಳಿಸಬಹುದಾಗಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದಾಗಿದೆ.

Join Nadunudi News WhatsApp Group