MNREGA: ರಾಜ್ಯ ಸರ್ಕಾರದ ಇನ್ನೊಂದು ಘೋಷಣೆ, ರಾಜ್ಯದ ಎಲ್ಲಾ ರೈತರ ಖಾತೆಗೆ 2 ಲಕ್ಷ ರೂ. ಸಬ್ಸಿಡಿ ಹಣ

ರಾಜ್ಯದ ಎಲ್ಲಾ ರೈತರ ಖಾತೆಗೆ 2 ಲಕ್ಷ ರೂ ಸಬ್ಸಿಡಿ ಹಣ

Mahatma Gandhi National Rural Employment Guarantee Act: ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ಹೊಸ ಹೊಸ ಯೋಜನೆಯನ್ನು ಪರಿಚಯಿಸುತ್ತ ರೈತರ ಕೃಷಿಯನ್ನು ಉತ್ತೇಜಿಸುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಸಾಕಷ್ಟು ಕಾರಣಗಳಿಂದ ರೈತರು ತಮ್ಮ ಕೃಷಿಯಲ್ಲಿ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ.

ಅಂತಹ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಸಹಾಯದ ಅಗತ್ಯ ಇರುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರ ರೈತರಿಗಾಗಿ ಆರ್ಥಿಕವಾಗಿ ನೆರವಾಗಲು ವಿವಿಧ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಸರ್ಕಾರ ಪರಿಚಯಿಸಿರುವ ಹಲವು ಯೋಜನೆಯಲ್ಲಿ Mahatma Gandhi National Rural Employment Guarantee Act (MNREGA) ಕೂಡ ಒಂದಾಗಿದೆ. ಈ ಯೋಜನೆಯಡಿ ರೈತರು ಯಾವ ರೀತಿ ಆರ್ಥಿಕ ಸಹಾಯವನ್ನು ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Mahatma Gandhi National Rural Employment Guarantee Act
Image Credit: Getlegalindia

ರಾಜ್ಯ ಸರ್ಕಾರದ ಇನ್ನೊಂದು ಘೋಷಣೆ
ಕೇಂದ್ರ ಸರಕಾರ ಕೃಷಿ ಹಾಗೂ ಅದಕ್ಕೆ ಪೂರಕವಾದ ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗಳಿಸಿದೆ.ಈ ಯೋಜನೆಯಿಂದ ರೈತರಿಗೆ ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದೆ. ಹೈನುಗಾರಿಕೆಯಿಂದ ರೈತರಿಗೆ ಉತ್ತಮ ಲಾಭ ದೊರೆಯುತ್ತದೆ. ಆದರೆ, ಇದಕ್ಕಾಗಿ ಉತ್ತಮ ತಳಿಯ ಜಾನುವಾರುಗಳನ್ನು ಖರೀದಿಸಬೇಕು. ಅದಕ್ಕಾಗಿ ಗೋಶಾಲೆ ನಿರ್ಮಿಸಬೇಕು. ಇದೆಲ್ಲ ದುಬಾರಿ ವ್ಯವಹಾ ಎಂದು ಚಿಂತಿಸುವ ಅಗತ್ಯ ಇಲ್ಲ. ಆದರೆ, ಹೈನುಗಾರಿಕೆಯನ್ನು ಸ್ಥಾಪಿಸಲು ಬಯಸುವವರು ಹೊರಗಿನಿಂದ ಎಲ್ಲಿಂದಲಾದರೂ ಸಾಲ ಮತ್ತು ಸಾಲ ಪಡೆಯುವ ಬದಲು ಸರ್ಕಾರದ ಯೋಜನೆಗಳ ಮೂಲಕ ಆರ್ಥಿಕ ನೆರವು ಪಡೆಯಬಹುದು.

ರಾಜ್ಯದ ಎಲ್ಲಾ ರೈತರ ಖಾತೆಗೆ 2 ಲಕ್ಷ ರೂ ಸಬ್ಸಿಡಿ ಹಣ
ಕೇಂದ್ರ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗೋಶಾಲೆ ನಿರ್ಮಾಣಕ್ಕೆ ರೈತರಿಗೆ 2 ಲಕ್ಷ ರೂ. ವರೆಗೆ ಆರ್ಥಿಕ ನೆರವು ನೀಡುತ್ತಿದೆ. MNREGA ಯೋಜನೆಯಡಿ, ಸರ್ಕಾರವು ಗೋಶಾಲೆಗಳನ್ನು ನಿರ್ಮಿಸಲು ಹೈನುಗಾರರಿಗೆ ರೂ. 2 ಲಕ್ಷದವರೆಗೆ ಸಹಾಯವನ್ನು ಒದಗಿಸಿದೆ ಮತ್ತು ಅದಕ್ಕೆ ಸಬ್ಸಿಡಿಯನ್ನು ಸಹ ನೀಡುತ್ತಿದೆ.

ಪಶುಸಂಗೋಪನೆಯಲ್ಲಿ ಆಸಕ್ತಿ ಹೊಂದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಹತ್ತಿರದ ಬ್ಯಾಂಕ್‌ ಗೆ ತೆರಳಿ ಅರ್ಜಿ ನಮೂನೆಯನ್ನು ಆನ್‌ ಲೈನ್‌ ನಲ್ಲಿ ಭರ್ತಿ ಮಾಡಿ ಅಗತ್ಯ ವಿವರವನ್ನು ನೀಡಬೇಕಾಗುತ್ತದೆ. ನಿಮ್ಮ ಅರ್ಜಿ ಸಲ್ಲಿಕೆಯನ್ನು ಇಲಾಖೆಯು ಪರಿಶೀಲಿಸಿ ನೀವು ಸಾಲ ಪಡೆಯಲು ಅರ್ಹರಾಗಿದ್ದರೆ ನಿಮ್ಮ ಖಾತೆಗೆ 2 ಲಕ್ಷ ಹಣವನ್ನು ಜಮಾ ಮಾಡುತ್ತದೆ.

Join Nadunudi News WhatsApp Group

MNREGA Subsidy Amount
Image Credit: Hindustantimes

Join Nadunudi News WhatsApp Group