Mutual Fund: ಈ ಯೋಜನೆಯಲ್ಲಿ ಪ್ರತಿ ತಿಂಗಳು 17 ರೂಪಾಯಿ ಹೂಡಿಕೆ ಮಾಡಿದರೆ ಸಿಗಲಿದೆ 1 ಕೋಟಿ.

Mutual Fund: ಈಗಿನ ಕಾಲದಲ್ಲಿ ಜನರು ಹಣವನ್ನ ಹೂಡಿಕೆ (Money Investment) ಮಾಡಲು ಬಹಳ ಇಷ್ಟಪಡುತ್ತಾರೆ. ಹೆಚ್ಚಿನ ಲಾಭ ಇರುವ ಕಡೆ ಜನರು ಹಣವನ್ನ ಹೂಡಿಕೆ ಮಾಡಲು ಇಷ್ಟಪಡುವ ಕಾರಣ ಕೆಲವು ಖಾಸಗಿ ಕಂಪನಿಗಳು ಹಲವು ಆಫರ್ ಗಳನ್ನ ಕೂಡ ಘೋಷಣೆ ಮಾಡಿದೆ.

ಇನ್ನು ಖಾಸಗಿ ಕಂಪನಿಗಳಲ್ಲಿ (Private Company) ಹೂಡಿಕೆ ಮಾಡಿದರೆ ಸುರಕ್ಷತೆ ಕಡಿಮೆ ಎಂದು ತಿಳಿದಿದ್ದರೂ ಕೂಡ ಕೆಲವು ಜನರು ಖಾಸಗಿ ಕಂಪನಿಗಳಲ್ಲಿ ಹಣವನ್ನ ಹೊದಿಕೆ ಮಾಡಿ ನಂತರ ಸಾಕಷ್ಟು ನಷ್ಟಗಳನ್ನ ಅನುಭವಿಸಿರುವುದನ್ನ ನಾವು ನೀವೆಲ್ಲ ನೋಡಿರಬಹುದು. ಸದ್ಯ ಹಣವನ್ನ ಹೂಡಿಕೆ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಲ್ಲಿ ಈ ಯೋಜನೆಗಳ ಬಗ್ಗೆ ಮಾಹಿತಿ ಇನ್ನೂ ಕೂಡ ಹಲವು ಜನರಿಗೆ ತಿಳಿದಿಲ್ಲ.

ಸರ್ಕಾರದ ಕೆಲವು ಹೂಡಿಕೆ ಯೋಜನೆಗಳ ಅಡಿಯಲ್ಲಿ ಕಡಿಮೆ ಹಣವನ್ನ ಹೂಡಿಕೆ ಮಾಡಿದರೆ ಸಾಕಷ್ಟು ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಲ್ಲಿ Mutual Fund ನಲ್ಲಿ ಹೂಡಿಕೆ ಮಾಡುವುದರ ಮೂಲಕ ಕೋಟಿ ಹಣದ ತನಕ ಲಾಭವನ್ನ ಪಡೆದುಕೊಳ್ಳಬಹುದು.

If you invest in mutual fund, you will get a lot of profit
Image Credit: businessinsider

ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಲು ಇದೆ ಹಲವು ಯೋಜನೆ
ಸಾಕಷ್ಟು ಜನರಿಗೆ ಅಂಚೆ ಕಚೇರಿಯ ಹಲವು ಯೋಜನೆಗಳ ಬಗ್ಗೆ ಮಾಹಿತಿ ತಿಳಿದಿಲ್ಲ. Post India Payment ನಲ್ಲಿ ಹಲವು ಹೂಡಿಕೆ ಯೋಜನೆಗಳು ಇದ್ದು ಕೆಲವು ಯೋಜನೆಗಳಲ್ಲಿ ಕಡಿಮೆ ಹೂಡಿಕೆ ಮಾಡಿದರೆ ಕೋಟಿ ರೂಪಾಯಿ ಹಣದ ತನಕ ಲಾಭವನ್ನ ಪಡೆದುಕೊಳ್ಳಬಹುದು.

ಹೌದು ಪೋಸ್ಟ್ ಆಫೀಸ್ (Post Office) ಸಾಕಷ್ಟು ಉಳಿತಾಯ ಯೋಜನೆಗಳು ಇದೆ ಮತ್ತು ಅವುಗಳ ಅವಧಿ ಸ್ವಲ್ಪ ಜಾಸ್ತಿಯಾದರೂ ಕೂಡ ಲಾಭ ಬಹಳಷ್ಟು ಅಧಿಕ ಆಗಿದೆ. ಅದೇ ರೀತಿಯಲ್ಲಿ ಹೂಡಿಕೆ ಮಾಡಲು ಇನ್ನೊಂದು ಉತ್ತಮವಾದ ವೇದಿಕೆ ಅಂದರೆ ಅದೂ MUTUAL FUND ಆಗಿದೆ.

Join Nadunudi News WhatsApp Group

ಪ್ರತಿನಿತ್ಯ 17 ರೂಪಾಯಿ ಹೂಡಿಕೆ ಮಾಡಿದರೆ ಸಿಗುತ್ತದೆ 1 ಕೋಟಿ
ಜೀವನದಲ್ಲಿ ಒಮ್ಮೆಯಾದರೂ ಕೋಟಿ ಹಣವನ್ನ ಸಂಪಾಧನೆ ಮಾಡಬೇಕು ಅನ್ನುವ ಆಸೆ ಎಲ್ಲರಿಗೂ ಇರುತ್ತದೆ, ಆದರೆ ಅವರಲ್ಲಿ ಅದಕ್ಕೆ ಬೇಕಾದ ಉಪಾಯ ಇರುವುದಿಲ್ಲ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ 1 ಕೋಟಿ ರೂಪಾಯಿ ಲಾಭವನ್ನ ಪಡೆದುಕೊಳ್ಳಬಹುದು.

Long term investment in mutual fund will get more profit
Image Credit: economictimes.indiatimes

ಪ್ರತಿದಿನ 17 ರೂಪಾಯಿ ಅಂತೇ ತಿಂಗಳಿಗೆ 500 ರೂಪಾಯಿಯನ್ನ SIP ಮಾಡಬೇಕು. ಹೌದು ಮ್ಯೂಚುಯಲ್ ಫಂಡ್ ನಲ್ಲಿ ತಿಂಗಳಿಗೆ 500 ರೂಪಾಯಿ SIP ಮಾಡುವುದರ ಮೂಲಕ ಸಾಕಷ್ಟು ಲಾಭವನ್ನ ಪಡೆಯಬಹುದು. ಕಳೆದ 20 ವರ್ಷಗಳ ಅವಧಿಯಲ್ಲಿ ಮ್ಯೂಚುಯಲ್ ಫಂಡ್ ಗಳು ಶೇಕಡಾ 20 ರಷ್ಟು ಲಾಭವನ್ನ ನೀಡಿದೆ.

ಹೆಚ್ಚಿನ ಲಾಭ ಗಳಿಸುವುದು ಹೇಗೆ
ಪ್ರತಿನಿತ್ಯ 17 ರೂಪಾಯಿಯಂತೆ ತಿಂಗಳಿಗೆ 500 ರೂಪಾಯಿಯನ್ನ 20 ವರ್ಷಗಳ ಕಾಲ ಮ್ಯೂಚುಯಲ್ ಫಂಡ್ ನ ಉತ್ತಮ ಹೂಡಿಕೆಯಲ್ಲಿ SIP ಮಾಡಬೇಕು. 20 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಒಟ್ಟು ಹಣ 1.20 ಲಕ್ಷ ರೂಪಾಯಿ ಆಗುತ್ತದೆ ಮತ್ತು ಅದರ ಜೊತೆಗೆ ವಾರ್ಷಿಕವಾಗಿ ಶೇಕಡಾ 15 ರಷ್ಟು ಲಾಭವನ್ನ ನೀವು ಹೂಡಿಕೆ ಮಾಡಿದ ಹಣಕ್ಕೆ ಸೇರಿಸಿದರೆ ನಿಮ್ಮ ಒಟ್ಟು ಹಣ 7 ಲಕ್ಷ 8 ಸಾವಿರ ಆಗುತ್ತದೆ ಮತ್ತು 20 ವರ್ಷಕ್ಕೆ ನಿಮ್ಮ ಹೂಡಿಕೆ ಹಣ ಲಾಭವನ್ನ ಸೇರಿಸಿ 15.80 ಲಕ್ಷ ರೂಪಾಯಿ ಆಗುತ್ತದೆ.

If you sip every month in mutual fund, you will get a lot of profit
Image Credit: economictimes.indiatimes

ಅದೇ ರೀತಿಯಲ್ಲಿ 20 ವರ್ಷಕ್ಕೆ ಬದಲಾಗಿ 30 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣ 1.8 ಲಕ್ಷ ರೂಪಾಯಿ ಆಗುತ್ತದೆ. ಅದೇ ರೀತಿಯಲ್ಲಿ ಈ ಹೂಡಿಕೆಗೆ ಅನುಗುಣವಾಗಿ 30 ವರ್ಷಗಳ ಕಾಲ ಶೇಕಡಾ 20 ರಷ್ಟು ಲಾಭವನ್ನ ಹೂಡಿಕೆ ಮಾಡಿದ ಹಣಕ್ಕೆ ಪಡೆದರೆ ಹೂಡಿಕೆಯ ಜೊತೆಗೆ ಲಾಭದ ಹಣ 1.16 ಕೋಟಿ ರೂಪಾಯಿ ಆಗುತ್ತದೆ.

ಹೂಡಿಕೆ ಮಾಡುವ ಸಮಯದಲ್ಲಿ ಯಾವ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುತ್ತಿದ್ದೇವೆ ಅನ್ನುವುದರ ಮೇಲೆ ಅದರ ಲಾಭ ನಿರ್ಧಾರ ಆಗುತ್ತದೆ. ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಆಪಾಯ ಕೂಡ ಆಗಿದ್ದು ಅದರ ಕೆಲವು ಷರತ್ತುಗಳನ್ನ ಓದಿಕೊಂಡು ಹೂಡಿಕೆ ಮಾಡುವುದು ಉತ್ತಮ.

Join Nadunudi News WhatsApp Group