My Ration App: ಈಗ ನಿಮ್ಮ ಮನೆಗೆ ಬರಲಿದೆ ಪಡಿತರ ಆಹಾರ, ಜಾರಿಗೆ ಬಂದಿದೆ ಮೇರಾ ರೇಷನ್ ಅಪ್ಲಿಕೇಶನ್.

ಮೈ ರೇಷನ್ ಅಪ್ಲಿಕೇಶನ್ ಮೂಲಕ ಜನರು ಮನೆಯಲ್ಲಿಯೇ ಕುಳಿತುಕೊಂಡು ಇನ್ನುಮುಂದೆ ರೇಷನ್ ಧಾನ್ಯಗಳನ್ನ ಪಡೆಯಬಹುದು.

My Ration App Benefits: ಕೇಂದ್ರ ಸರ್ಕಾರ (Central Government) ಜನಸಾಮಾನ್ಯರಿಗಾಗಿ ಉಚಿತ ಪಡಿತರನ್ನು ನೀಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಡಿತರ ವಿತರಣೆಯ ಸುದ್ದಿಗಳ ಸಾಕಷ್ಟು ಹರಡಿದ್ದವು. ಹಾಗೆಯೆ ಜನಸಾಮಾನ್ಯರಿಗಾಗಿ ಪಡಿತರ ವಿತರಣೆಯಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಇದೀಗ ಪಡಿತರ ವಿತರಣೆಯಲ್ಲಿ ಸರ್ಕಾರ ಹೊಸ ಸೌಲಭ್ಯವನ್ನು ಒದಗಿಸಿದೆ. ಸರ್ಕಾರದ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

ಪಡಿತರ ವಿತರಣೆಗಾಗಿ ಮೇರಾ ರೇಷನ್ ಅಪ್ಲಿಕೇಶನ್ (My Ration) 
ಪಡಿತರ ಚೀಟಿದಾರರಿಗೆ ಸಹಾಯವಾಗಲು ಸರ್ಕಾರ ಮೇರಾ ರೇಷನ್ ಅಪ್ಲಿಕೇಶನ್ ಅನ್ನು ಪರಿಚಯಿಸಲಿದೆ. ಈ ಅಪ್ಲಿಕೇಶನ್ ನಿಂದಾಗಿ ಜನಸಾಮಾನ್ಯರು ಮನೆಯಲ್ಲಿಯೇ ಕುಳಿತು ಪಡಿತರ ಪಡೆಯಬಹುದು. ಈ ಮೇರಾ ರೇಷನ್ ಅಪ್ಲಿಕೇಶನ್ ನಿಂದ ಆಗುವ ಪ್ರಯೋಜನಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

My Ration App Benefits
Image Source: Zee News

ಮೇರಾ ರೇಷನ್ ಅಪ್ಲಿಕೇಶನ್ ನ ಪ್ರಯೋಜನಗಳು
ಮೇರಾ ರೇಷನ್ ಅಪ್ಲಿಕೇಶನ್ ಬಳಕೆದಾರರನ್ನು ಕುಟುಂಬ ಸದಸ್ಯರನ್ನು ಸೇರಿಸಲು ಅಥವಾ ತೆಗೆದುಹಾಕಲು ಅನುಮತಿಸುತ್ತದೆ. ಈ ಆಪ್ ನ ಮೂಲಕ ಆನ್ಲೈನ್ ನಲ್ಲಿ ಪಡಿತರಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಇದರಿಂದಾಗಿ ಪಡಿತರ ಅರ್ಜಿದಾರರ ಮನೆ ಬಾಗಿಲಿಗೆ ತಲುಪುತ್ತದೆ. ಕಳೆದ ಆರು ತಿಂಗಳ ವಹಿವಾಟಿನ ವಿವರಗಳನ್ನು ಮೇರಾ ರೇಷನ್ ಅಪ್ಲಿಕೇಶನ್ ನ ಮೂಲಕ ಪಡೆಯಬಹುದು.

My Ration App Benefits
Image Source: India Today

ನೀವು ಮೇರಾ ರೇಷನ್ (My Ration) ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ (Google Ply Store) ನ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ಲೇ ಸ್ಟೋರ್ ನಲ್ಲಿ ಮೇರಾ ರೇಷನ್ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ಅಪ್ಲಿಕೇಶನ್ ನಿಮಗೆ ಕಾಣಿಸುತ್ತದೆ.

ಈ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ ಇದರ ಮೂಲಕ ನೀವು ಪಡಿತರಿಗೆ ಅರ್ಜಿಯನ್ನು ಸಲ್ಲಿಸಬಹುದು. ಸದ್ಯ ಈ ಅಪ್ಲಿಕೇಶನ್ ಪ್ರಯೋಜನ ಹಲವು ರಾಜ್ಯಗಳ ಜನರು ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಈ ಅಪ್ಲಿಕೇಶನ್ ಪ್ರಯೋಜನ ಮುಂದಿನ ದಿನಗಳಲ್ಲಿ ಕರ್ನಾಟಕದ ಜನರು ಕೂಡ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

Join Nadunudi News WhatsApp Group

My Ration App Benefits
Image Source: India Today

Join Nadunudi News WhatsApp Group