Nadageethe: ಇನ್ಮುಂದೆ ಈ ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ, ರಾಜ್ಯದ ಸರ್ಕಾರದ ಆದೇಶ.

ಇನ್ಮುಂದೆ ಈ ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ

Nadageethe Mandatory: ಸದ್ಯ ಕರ್ನಾಟದಲ್ಲಿ ಕನ್ನಡ ಉಳಿವಿಗಾಗಿ ಸಾಕಷ್ಟು ಕನ್ನಡ ಪರ ಹೋರಾಟಗಾರರು ಇನ್ನು ಕೂಡ ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರ ರಾಜ್ಯದ ಜನರು ವಾಸವಿದ್ದಾರೆ. ಅವ್ರೆಲ್ಲರಲ್ಲೂ ಕನ್ನಡದ ಅರಿವು ಮೂಡಿಸುವುದು ಅಗತ್ಯವಾಗಿದೆ. ಹೀಗಾಗಿ ಎಲ್ಲ ಕಡೆ ಕನ್ನಡವನ್ನು ಬಳಸುವುದು ಅಗತ್ಯವಾಯಿದೆ.

Nadageethe Latest News Update
Image Credit: NDTV

ಕನ್ನಡಿಗರಿಗೆ ಬಿಗ್ ಅಪ್ಡೇಟ್
ಇನ್ನು ಸರ್ಕಾರೀ ಕಚೇರಿಗಳಲ್ಲಿ ಈಗೀಗ ಕನ್ನಡ ಮಾತನಾಡುವವರನ್ನು ನೋಡಬಹುದುದಾಗಿದೆ. ಕನ್ನಡ ಮಾತನಾಡುವವರಿಗೆ ಮೊದಲ ಆದ್ಯತೆ ನೀಡುವುದು ಮುಖವಾಗಿದೆ. ಸದ್ಯ ರಾಜ್ಯ ಸರಕಾರ ಇದೀಗ ಈ ಎಲ್ಲ ಕಾರ್ಯಕ್ರಮಗಳಲ್ಲಿ ಮಹತ್ವದ ಬದಲಾವಣೆಯನ್ನು ತರಲು ನಿರ್ಧರಿಸಿದೆ. ಎಲ್ಲ ಸರ್ಕಾರೀ ಕಾರ್ಯಕ್ರಮಗಳು ಆರಂಭವಾಗುವ ಮೊದಲು ಈ ಗೀತೆಯನ್ನು ಹಾಡುವುದು ಇನ್ನುಮುಂದೆ ಕಡ್ಡಾಯವಾಗಲಿದೆ.

ಇನ್ಮುಂದೆ ಈ ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ
ರಾಜ್ಯ ಸರ್ಕಾರದ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಶಾಲೆಗಳಲ್ಲಿ ದಿನನಿತ್ಯದ ಚಟುವಟಿಕೆ ಆರಂಭಕ್ಕೂ ಮುನ್ನ ಹಾಗೂ ಸರಕಾರ, ನಿಗಮ,ಮಂಡಳಿ, ಪ್ರಾಧಿಕಾರ ಹಾಗೂ ಅರೆ ಸರ್ಕಾರೀ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ರಾಷ್ಟ್ರಕವಿ ಕುವೆಂಪು ರಚಿಸಿದ ಜಯಭಾರತ ಜನನಿ ತನುಜಾತೆ ನಾಡಗೀತೆ ಹಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.

Nadageethe Mandatory
Image Credit: Jagranjosh

ರಾಜ್ಯದ ಸರ್ಕಾರದ ಆದೇಶ
ಜನವರಿ 7 ರಂದು ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ, ಸಾಹಿತ್ಯ ಮತ್ತು ಇತರ ಎಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಹಾಡಬೇಕು ಎಂದು ಆದೇಶಿಸಲಾಗಿದೆ. ಈ ಆದೇಶಕ್ಕೆ ತಿದ್ದುಪಡಿ ತರಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಇನ್ನುಮುಂದೆ ಎಲ್ಲ ಸರ್ಕಾರೀ ಕಾರ್ಯಕ್ರಮ ಆರಾಭಕ್ಕೂ ಮುನ್ನ ನಾಡಗೀತೆ ಕಡ್ಡಾಯ ಎನ್ನುವುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

Join Nadunudi News WhatsApp Group

Join Nadunudi News WhatsApp Group