NSC Investment: Post Office ನ ಈ ಯೋಜನೆಯಲ್ಲಿ ನಿಮಗೆ FD ಗಿಂತಗಳು ಹೆಚ್ಚು ಬಡ್ಡಿ ಸಿಗಲಿದೆ, ಬೆಸ್ಟ್ ಸ್ಕೀಮ್

ಪೋಸ್ಟ್ ಆಫೀಸ್ ನ ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದಾಗಿದೆ.

National Saving Certificate Investment Details: ಸಾಮಾನ್ಯವಾಗಿ ಜನರು ತಮ್ಮ ಹೂಡಿಕೆಗಾಗಿ ಹೆಚ್ಚು ಸುರಕ್ಷಿತ ಯೋಜನೆಗಳನ್ನು ಹುಡುಕುತ್ತಾರೆ. ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚು Returns ಪಡೆಯಬಹುದು ಹಾಗೂ ಯಾವ ಯೋಜನೆಗಳ ಹೂಡಿಕೆಯು ಸುರಕ್ಷಿತವಾಗಿರುತ್ತದೆ ಎನ್ನುವ ಬಗ್ಗೆ ಹೂಡಿಕೆದಾರರು ಹೂಡಿಕೆಯು ಮುನ್ನ ಲೆಕ್ಕಾಚಾರ ಹಾಕುತ್ತಾರೆ. ಹೆಚ್ಚು Return ಪಡೆಯುವ ಹಾಗೂ ಸುರಕ್ಷಿತ ಯೋಜನೆಗಳಲ್ಲಿ Post Office ಹೂಡಿಕೆಯ ಯೋಜನೆಗಳು ಕೂಡ ಒಂದಾಗಿದೆ.

National Saving Certificate Investment Details
Image Credit: India TV News

National Saving Certificate
ಇನ್ನು Post Office ಜನಸಾಮಾನ್ಯರಿಗಾಗಿ ಸಾಕಷ್ಟು ಉಳಿತಾಯ ಯೋಜನೆಗಳನ್ನು ನೀಡುತ್ತಿದೆ. Post office ದೀರ್ಘಕಾಲೀನ ಉಳಿತಾಯ ಯೋಜನೆಗಳು ಹಾಗೂ ಸಣ್ಣ ಉಳಿತಾಯ ಯೋಜನೆಗಳು ಕೂಡ ಲಭ್ಯವಿದೆ. ಇನ್ನು ಮಧ್ಯಮ ವರ್ಗದ ಜನರು ಹೆಚ್ಚಾಗಿ ಸಣ್ಣ ಉಳಿತಾಯ ಯೋಜನೆಗಳಲ್ಲಿ Invest ಮಾಡಲು ಇಷ್ಟಪಡುತ್ತಾರೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ National Saving Certificate ಹೂಡಿಕೆಗೆ ಉತ್ತಮ ಎನ್ನಬಹುದು.

NSC ನಲ್ಲಿ FD ಹೂಡಿಕೆಗಿಂತಲೂ ಹೆಚ್ಚಿನ ಬಡ್ಡಿ ಸಿಗಲಿದೆ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಸರ್ಕಾರ ನಡೆಸುವ ಯೋಜನೆಯಾಗಿದೆ. ಈ ಯೋಜನೆಯ ಬಡ್ಡಿದರವನ್ನು ಸರ್ಕಾರವೇ ನಿರ್ಧರಿಸುತ್ತದೆ. ಯೋಜನೆಗೆ ಸಿಗುವಂತಹ ಬಡ್ಡಿದರವು ಆಗಾಗ ಪರಿಷ್ಕರಣೆ ಆಗುತ್ತಿರುತ್ತದೆ. ಇನ್ನು Post Office FD ಹೂಡಿಕೆಗೆ ಹೋಲಿಸಿದರೆ NSC ನಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದಾಗಿದೆ.

National Saving Certificate Investment Profit
Image Credit: Weinvestsmart

ಪ್ರಸ್ತುತ ಸರ್ಕಾರವು NSC ಮೇಲೆ 7.7% ಬಡ್ಡಿಯನ್ನು ನೀಡುತ್ತಿದೆ. ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರಯೋಜನವೆಂದರೆ ನೀವು ಉತ್ತಮ ಆದಾಯವನ್ನು ಪಡೆಯುವುದರ ಜೊತೆಗೆ ಆದಾಯ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಬಹುದು. ಒಬ್ಬ ವ್ಯಕ್ತಿಯು ಹಣಕಾಸು ವರ್ಷದಲ್ಲಿ ರೂ. 1.5 ಲಕ್ಷದವರೆಗೆ ಹೂಡಿಕೆ ಮಾಡಿದರೆ, ಅವರು ಆದಾಯ ತೆರಿಗೆಯ ಸೆಕ್ಷನ್ 80 c ಅಡಿಯಲ್ಲಿ ವಿನಾಯಿತಿ ಪಡೆಯಬಹುದು.

NSC ನಲ್ಲಿನ ಹೂಡಿಕೆಯ ಮಿತಿ ಬಗ್ಗೆ ತಿಳಿಯಿರಿ
NSC 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಖಾತೆ ತೆರೆದ ಒಂದು ವರ್ಷದೊಳಗೆ NSC ಅನ್ನು ಮುಚ್ಚಿದರೆ, ಯಾವುದೇ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ. ಹೂಡಿಕೆ ಮೊತ್ತವನ್ನು ಮಾತ್ರ ನೀಡಲಾಗುವುದು. ನೀವು ಕನಿಷ್ಠ 1000 ರೂ. ಹೂಡಿಕೆಯೊಂದಿಗೆ NSC ನಲ್ಲಿ ಹೂಡಿಕೆಯನ್ನು ಆರಂಭಿಸಬಹುದು. ನಿಮ ಹೂಡಿಕೆಗೆ ಗರಿಷ್ಟ ಮಿತಿ ಅನ್ವಯವಾಗುವುದಿಲ್ಲ. Offline ಅಥವಾ Online ನಲ್ಲಿ ಕೂಡ NSC ನಲ್ಲಿ ನೀವು ಹೂಡಿಕೆಯನ್ನು ಮಾಡಬಹುದು.

Join Nadunudi News WhatsApp Group

Join Nadunudi News WhatsApp Group