ಮದುವೆಯಲ್ಲಿ ನಯನತಾರ ಧರಿಸಿದ ಒಡವೆಯ ಬೆಲೆ ಎಷ್ಟು ಗೊತ್ತಾ, ನೋಡಿ ದುಬಾರಿ ಮದುವೆ.

ಖ್ಯಾತ ನಟಿ ನಯನತಾರಾ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟಿ ನಯನತಾರಾ ಅವರಿಗೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಗಳ ಇದೆ ಎಂದು ಹೇಳಬಹುದು. ಚಿತ್ರಗಳಿಗೆ ಕೋಟಿ ಲೆಕ್ಕದಲ್ಲಿ ಸಂಭಾವನೆಯನ್ನ ಪಡೆದುಕೊಳ್ಳುವ ನಟಿ ನಯನತಾರಾ ಅವರು ಕೋಟಿ ಕೋಟಿ ಖರ್ಚು ಮಾಡಿ ಮದುವೆಯನ್ನ ಮಾಡಿಕೊಂಡಿದ್ದು ಸದ್ಯ ಅವರ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ದೇಶದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ನಟಿ ನಯನತಾರಾ ಅವರು ತನ್ನ ಬಹುಕಾಲದ ಪ್ರಿಯತಮ ವಿಘ್ನೇಶ್ ಶಿವನ್ ಅವರನ್ನ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಂಡಿದ್ದು ಈ ಮದುವೆಗೆ ಕೋಟಿಗಟ್ಟಲೆ ಹಣವನ್ನ ಖರ್ಚು ಮಾಡಲಾಗಿದೆ.

ಇನ್ನು ನಟಿ ನಯನತಾರ ಮದುವೆಗೆ ನಟ ಶಾರುಖ್ ಖಾನ್, ರಜನೀಕಾಂತ್ ಸೇರಿದಂತೆ ಹಲವು ಖ್ಯಾತ ನಟ ನಟಿಯರು ಅಥಿತಿಗಳಾಗಿ ಬಂದಿದ್ದು ನಯನತಾರ ಮತ್ತು ವಿಘ್ನೇಶ್ ಶಿವನ್ ಶುಭ ಹಾರೈಸಿದ್ದಾರೆ. ಸದ್ಯ ಮದುವೆಯಲ್ಲಿ ನಟಿ ನಯನತಾರ ಧರಿಸಿದ ಒಡವೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಹೌದು ನಟಿ ನಯನತಾರ ಮದುವೆಯಲ್ಲಿ ಬಳಸುವ ಒಡವೆಯ ಬೆಲೆಯನ್ನ ಕೇಳಿ ಜನರು ಶಾಕ್ ಆಗಿದ್ದಾರೆ ಎಂದು ಹೇಳಬಹುದು. ಹಾಗಾದರೆ ನಟಿ ನಯನತಾರ ಧರಿಸಿದ ಒಡವೆಯ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

Nayanatara marriage

ಹೌದು ನಟಿ ನಯನತಾರ ಮತ್ತು ವಿಘ್ನೇಶ್ ಶಿವನ್ ಅವರು ಕಳೆದ ಏಳು ವರ್ಷಗಳಿಂದ ಒಬ್ಬರನ್ನ ಒಬ್ಬರು ತುಂಬಾ ಇಷ್ಟಪಟ್ಟಿದ್ದು ಈಗ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಂಡಿದ್ದಾರೆ. ಈ ಮದುವೆಗೆ ಕೊಟ್ಟಿಗಟ್ಟಲೆ ಹಣವನ್ನ ಖರ್ಚು ಮಾಡಲಾಗಿದ್ದು ನಯನತಾರ ಧರಿಸಿದ ಎಲ್ಲಾ ಒಡವೆಯನ್ನ ವಿಘ್ನೇಶ್ ಶಿವನ್ ನೀಡಿದ್ದು ಎಂದು ತಿಳಿದುಬಂದಿದೆ. ಹೌದು ವಿಘ್ನೇಶ್ ಶಿವನ್ ಅವರು ನಯನತಾರ ಅವರಿಗೆ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಒಡವೆಯನ್ನ ಉಡುಗೊರೆಯ ರೂಪದಲ್ಲಿ ನೀಡಿದ್ದಾರೆ.

ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ವಿಘ್ನೇಶ್ ಶಿವನ್ ನಟಿ ನಯನತಾರ ಅವರಿಗೆ ಹಾಕಿದ ರಿಂಗ್ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ ಮತ್ತು ಅದರ ಜೊತೆಗೆ ಇನ್ನಷ್ಟು ಬೆಲೆಬಾಳುವ ಒಡವೆಯನ್ನ ತನ್ನ ಮಡದಿಗೆ ವಿಘ್ನೇಶ್ ಶಿವನ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಇದರ ಜೊತೆಗೆ ವಿಘ್ನೇಶ್ ಶಿವನ್ ಗೆ 20 ಕೋಟಿ ರೂಪಾಯಿ ಬೆಲೆಬಾಳುವ ಬಂಗಲೆಯನ್ನ ಉಡುಗೊರೆಯ ರೂಪದಲ್ಲಿ ನಟಿ ನಯನತಾರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಮದುವೆಗೆ 7 ರಿಂದ 8 ಕೋಟಿ ರೂಪಾಯಿಯನ್ನ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಈ ದುಬಾರಿ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Nayanatara marriage

Join Nadunudi News WhatsApp Group