March Rule: ಮಾರ್ಚ್ 31 ರೊಳಗೆ ಈ 4 ಕೆಲಸ ಮುಗಿಸಿಕೊಳ್ಳಿ, ಏಪ್ರಿಲ್ 1 ರಿಂದ ಈ 4 ಕೆಲಸಗಳಿಗೆ ಶುಲ್ಕ ಕಡ್ಡಾಯ

ಮಾರ್ಚ್ ಅಂತ್ಯದೊಳಗೆ ಮುಗಿಸಿಕೊಳ್ಳಬೇಕಾದ ಕೆಲಸಗಳ ಬಗ್ಗೆ  ಮಾಹಿತಿ

New Rule From March 2024: ಪ್ರಸ್ತುತ 2024 ರ ಮೂರನೇ ತಿಂಗಳು March ಆರಂಭವಾಗಿದೆ. ಇನ್ನು ವರ್ಷದ ಪ್ರತಿ ತಿಂಗಳ ಆರಂಭದಲ್ಲಿ ಹೆಚ್ಚಿನ ನಿಯಮಗಳು ಬದಲಾಗುತ್ತದೆ. ಪ್ರತಿ ತಿಂಗಳು ಆರಂಭವಾಗುತ್ತಿದ್ದಂತೆ ಜನರು ಹೊಸ ಹೊಸ ನಿಯಮಗಳ ಬಗ್ಗೆ ತಿಳಿಯುವುದು ಅಗತ್ಯವಾಗಿರುತ್ತದೆ.

ಇನ್ನು ತಿಂಗಳ ಅಂತ್ಯದೊಳಗೆ ಜನಸಾಮಾನ್ಯರು ಮುಗಿಸಿಕೊಳ್ಳಬೇಕಾದ ಸಾಕಷ್ಟು ಕೆಲಸಗಳಿರುತ್ತದೆ. ಹೀಗಾಗಿ ಮಾರ್ಚ್ ನಲ್ಲಿ ಜನರು ಪೂರ್ಣಗೊಳಿಸಿಕೊಳ್ಳಬೇಕಾದ ಸಾಕಷ್ಟು ಕೆಲಸಗಳಿವೆ. ಒಂದಿಷ್ಟು ಮುಖ್ಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು ಮಾರ್ಚ್ ನಲ್ಲಿ ಗಡುವನ್ನು ನೀಡಲಾಗಿದೆ. ನೀವು ಮಾರ್ಚ್ ಅಂತ್ಯದೊಳಗೆ ಮುಗಿಸಿಕೊಳ್ಳಬೇಕಾದ ಕೆಲಸಗಳ ಬಗ್ಗೆ  ಮಾಹಿತಿ ಇಲ್ಲಿದೆ ನೋಡಿ.

Sukanya Samriddhi Yojana
Image Credit: Topbihar

ಮಾರ್ಚ್ ನಲ್ಲಿ ಈ ಎಲ್ಲ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿ
•Sukanya Samriddhi Yojana
Sukanya Samriddhi Yojana (SSY) ಖಾತೆಯನ್ನು ಸಕ್ರಿಯವಾಗಿಡಲು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಹೊಸ ನಿಯಮವೂ ಜಾರಿಗೆ ಬಂದಿದೆ. ಮಾರ್ಚ್ 31, 2024 ರ ವರೆಗೆ ಈ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ಖಾತೆದಾರರು ತನ್ನ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ ಅಂತವರ ಖಾತೆಯು ನಿಷ್ಕ್ರಿಯವಾಗಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ Minimum Balance 250 ರೂ. ಆಗಿದೆ. ಅಂದರೆ ಖಾತೆಯನ್ನು ಸಕ್ರಿಯವಾಗಿಡಲು ಆರ್ಥಿಕ ವರ್ಷದಲ್ಲಿ 250 ರೂ. ಗಳನ್ನು ಹೂಡಿಕೆ ಮಾಡುವುದು ಅಗತ್ಯ.

•Aadhar Card Update
ಹತ್ತು ವರ್ಷಗಳ ಹಿಂದೆ ಮಾಡಿಸಲಾದ ಆಧಾರ್ ಕಾರ್ಡ್ ನವೀಕರಣ ಕಡ್ಡಾಯವಾಗಲಿದೆ. ಎಲರೂ ಕೂಡ ಉಚಿತವಾಗಿ ಮಾರ್ಚ್ 14 ರ ತನಕ ಆಧಾರ್ ನವೀಕರಣವನ್ನು ಮಾಡಿಕೊಳ್ಳಬಹುದು. ಈಗಾಗಲೇ UIDAI ಸಾಕಷ್ಟು ಬಾರಿ ಈ ಗಡುವನ್ನು ವಿಸ್ತರಿಸಿದೆ. ಇನ್ನು ಮತ್ತೆ ವಿಸ್ತರಿಸಲು ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಈ ಬಾರಿ ಕೊನೆಯ ದಿನಾಂಕದೊಳಗೆ ಮಾತ್ರ ನವೀಕರಣ ಮಾಡಿಕೊಂಡರೆ ಉಚಿತವಾಗಿರುತ್ತದೆ. ಕೊನೆಯ ದಿನಾಂಕದ ನಂತರ ನವೀಕರಣಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.

SBI FD Scheme
Image Credit: Naidunia

•SBI FD Scheme
State Bank of India (SBI) ಅಮೃತ್ ಕಲಶ ವಿಶೇಷ FD ಯೋಜನೆಯನ್ನು 400 ದಿನಗಳ ಅವಧಿಗೆ ಪ್ರಾರಂಭಿಸಿದೆ. ಈ FD ಯೋಜನೆಯು 7.10% ಬಡ್ಡಿಯನ್ನು ಗಳಿಸುತ್ತದೆ. ಅದೇ ಸಮಯದಲ್ಲಿ, ಹಿರಿಯ ನಾಗರಿಕರಿಗೆ ಶೇಕಡಾ 7.60 ಬಡ್ಡಿ ಸಿಗುತ್ತದೆ. ಈ ಯೋಜನೆಯು ಮಾರ್ಚ್ 31, 2024 ರ ವರೆಗೆ ಮಾನ್ಯವಾಗಿರುತ್ತದೆ, ಅಂದರೆ ನೀವು ಮಾರ್ಚ್ 31 ರ ವರೆಗೆ ಈ ಯೋಜನೆಯನ್ನು ಪಡೆಯಬಹುದು.

Join Nadunudi News WhatsApp Group

•IDBI Bank FD Scheme
ಐಡಿಬಿಐ ಬ್ಯಾಂಕ್‌ ನ ಹಬ್ಬದ FD ಯೋಜನೆ ಮಾರ್ಚ್‌ ನಲ್ಲಿ ಕೊನೆಗೊಳ್ಳಲಿದೆ. ಈ ಯೋಜನೆಯು 7.05 ರಿಂದ 7.25 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತದೆ. ಅದೇ ಸಮಯದಲ್ಲಿ, ಹಿರಿಯ ನಾಗರಿಕರಿಗೆ ಶೇಕಡಾ 7.55 ರಿಂದ 7.75 ರಷ್ಟು ಬಡ್ಡಿ ಸಿಗುತ್ತದೆ. ಈ ಯೋಜನೆಯನ್ನು ಪಡೆಯಲು ನೀವು ಮಾರ್ಚ್ 31, 2024 ರ ವರೆಗೆ ಅರ್ಜಿ ಸಲ್ಲಿಸಬಹುದು.

Tax saving Investment
Image Credit: Rmoneyindia

•Tax saving Investment
2023-24 ಹಣಕಾಸು ವರ್ಷಕ್ಕೆ ತೆರಿಗೆ ವಿನಾಯಿತಿ ಪಡೆಯಲು ಕೊನೆಯ ಅವಕಾಶ 31 ಮಾರ್ಚ್ 2024 ಆಗಿದೆ. ತೆರಿಗೆ ಪ್ರಯೋಜನಗಳನ್ನು ಪಡೆಯಲು, ತೆರಿಗೆದಾರರು ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಬೇಕು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆದಾರರಿಗೆ ತೆರಿಗೆ ವಿನಾಯಿತಿ ಸಿಗುವುದಿಲ್ಲ ಎನ್ನುವುದು ತಿಳಿದಿರಲಿ.

•Paytm  Payment Bank
RBI ಜನವರಿ 31, 2024 ರಂದು Paytm ಪಾವತಿಗಳ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದೆ. ಈ ಆದೇಶದ ಪ್ರಕಾರ, ಎಲ್ಲಾ ಪಾವತಿಗಳ ಬ್ಯಾಂಕ್ ಹೊಂದಿರುವವರು Paytm ಪಾವತಿಗಳ ಬ್ಯಾಂಕ್‌ ನಲ್ಲಿರುವ ಮೊತ್ತವನ್ನು ಮತ್ತೊಂದು ಖಾತೆಗೆ ವರ್ಗಾಯಿಸಬೇಕು. ಇದರ ಗಡುವು 29 ಫೆಬ್ರವರಿ 2024 ಆಗಿತ್ತು, ಇದನ್ನು ಈಗ 15 ಮಾರ್ಚ್ 2024 ಕ್ಕೆ ವಿಸ್ತರಿಸಲಾಗಿದೆ. ಖಾತೆದಾರರು ಮಾರ್ಚ್ 15 ರವರೆಗೆ ಖಾತೆಯಲ್ಲಿರುವ ಮೊತ್ತವನ್ನು ವರ್ಗಾಯಿಸಬಹುದು.

Join Nadunudi News WhatsApp Group