ಟ್ರಾಫಿಕ್ ಪೊಲೀಸರಿಗೆ ದಂಡ ಕಟ್ಟುವ ಎಲ್ಲರಿಗೂ ಹೊಸ ಯೋಜನೆ, ಇನ್ನುಮುಂದೆ ಕೈಯಲ್ಲಿ ಹಣ ಕೊಡಬೇಕಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ಜನರು ಸಂಚಾರಿ ಪೊಲೀಸರಿಗೆ ಹೆಚ್ಚು ಹೆಚ್ಚು ದಂಡವನ್ನ ಕಟ್ಟುತ್ತಿದ್ದಾರೆ ಎಂದು ಹೇಳಬಹುದು. ಹೌದು ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡಿದ ಕಾರಣ ಹಲವು ಜನರು ಸಂಚಾರಿ ಪೊಲೀಸರಿಗೆ ದಂಡವನ್ನ ಕಟ್ಟುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ನಡುವೆ ಅದೆಷ್ಟೋ ಜನರು ದಂಡವನ್ನ ಕಟ್ಟಲು ಕೈಯಲ್ಲಿ ಹಣವಿಲ್ಲದೆ ಪರದಾಡಿದ ಅದೆಷ್ಟೋ ಉದಾಹರಣೆಗಳನ್ನ ನಾವು ನೀವೆಲ್ಲ ನೋಡುತ್ತಲೇ ಇದ್ದೇವೆ. ಇನ್ನು ಇದರ ನಡುವೆ ಈಗ ಟ್ರಾಫಿಕ್ ರೋಲ್ ಪಾಲನೆ ಮಾಡದೆ ಪೊಲೀಸರು ದಂಡ ಹಾಕಿದ ಸಮಯದಲ್ಲಿ ನಿಮ್ಮ ಕೈಯಲ್ಲಿ ಹಣ ಇಲ್ಲದೆ ಇದ್ದರೆ ನೀವು ಇನ್ನುಮುಂದೆ ಆನ್ಲೈನ್ ಮೂಲಕ ಹಣವನ್ನ ಪಾವತಿ ಮಾಡಬಹುದಾಗಿದೆ.

ಹಾಗಾದರೆ ಆನ್ಲೈನ್ ಮೂಲಕ ದಂಡವನ್ನ ಪಾವತಿ ಮಾಡುವುದು ಹೇಗೆ ಮತ್ತು ಸರ್ಕಾರ ಜಾರಿಗೆ ತಂದಿರುವ ಹೊಸ ಆನ್ಲೈನ್ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹೊಸ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ. ಹೌದು ಇನ್ನುಮುಂದೆ ಸಂಚಾರಿ ಪೊಲೀಸರು ದಂಡ ಹಾಕಿದ ಸಮಯದಲ್ಲಿ ನಿಮ್ಮ ಕೈಯಲ್ಲಿ ಹಣ ಇಲ್ಲದೆ ಇದ್ದರೆ ನೀವು ಆನ್ಲೈನ್ ನಲ್ಲಿ ಹಣವನ್ನ ಪಾವತಿ ಮಾಡಬಹುದು.

new rule of traffic police

ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಮೊಬೈಲ್ ಮೂಲಕ www.echallan.parivahan.gov.in ವೆಬ್ಸೈಟ್ ಗೆ ಭೇಟಿನೀಡಿ ಆನ್ಲೈನ್ ಮೂಲಕ ಹಣವನ್ನ ಪಾವತಿ ಮಾಡಬಹುದು. ಇನ್ನು ಈ ವೆಬ್ಸೈಟ್ ಗೆ ಲಾಗ್ ಇನ್ ಆಗಿ ನಂತರ ನಿಮ್ಮ ವಾಹನದ ಅಥವಾ ದಂಡದ ಚಲನ್ ನಂಬರ್ ಹಾಕಿ ದಂಡವನ್ನ ಪಾವತಿ ಮಾಡಬಹುದು. ಇನ್ನು ನೀವು ಒಮ್ಮೆ ಇದಕ್ಕೆ ಲಾಗ್ ಇನ್ ಮಾಡಿ ನಿಮ್ಮ ವಿವರವನ್ನ ಹಾಕಿದ ನಂತರ ನೀವು ಹಿಂದೆ ಮಾಡಿದ ಸಂಚಾರಿ ನಿಯಮ ಉಲ್ಲಂಘನೆ ಮತ್ತು ಇತರೆ ಮಆಹಿತಿಯನ್ನ ಈ ವೆಬ್ಸೈಟ್ ಮೂಲಕ ತಿಳಿಯಬಹುದಾಗಿದೆ.

ಇನ್ನು ಈ ವೆಬ್ಸೈಟ್ ನಲ್ಲಿ ನೀವು ಫೋನ್ ಪೆ, ಗೂಗಲ್ ಪೆ, ಪೆಟಿಎಂ ಮತ್ತು ನೆಟ್ ಬ್ಯಾಂಕಿಂಹ್ ಮೂಲಕ ಹಣವನ್ನ ಪಾವತಿ ಮಾಡಬಹುದಾಗಿದೆ. ಜನರಿಗೆ ಅನುಕೂಲ ಆಗಲಿ ಅನ್ನುವ ಉದ್ದೇಶದಿಂದ ಈ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಸ್ನೇಹಿತರೆ ಈ ಹೊಸ ಯೋಜನೆಯನ್ನ ಪ್ರತಿಭಾರಿ ದಂಡ ಕಟ್ಟುವ ನಿಮ್ಮ ಸ್ನೇಹಿತರಿಗೆ ತಲುಪಿಸಿ.

Join Nadunudi News WhatsApp Group

new rule of traffic police

Join Nadunudi News WhatsApp Group