APL Card: APL ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಸಿಗಲ್ಲ ರೇಷನ್ ಅಕ್ಕಿ, ದಿಡೀರ್ ಹೊಸ ನಿಯಮ ಜಾರಿಗೆ

APL ರೇಷನ್ ಕಾರ್ಡ್ ಇದ್ದವರಿಗೆ ಹೊಸ ನಿಯಮ ಜಾರಿಗೆ ತರಲು ಸರ್ಕಾರದ ನಿರ್ಧಾರ

New Rules For APL Ration Card Holders: ರಾಜ್ಯ ಸರ್ಕಾರ ಉಚಿತ ಪಡಿತರನ್ನು ನುಡುತ್ತಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಸರ್ಕಾರ ಉಚಿತ ಪಡಿತರನ್ನು ನೀಡುತ್ತಿದೆ. ರಾಜ್ಯದ ಸಾಕಷ್ಟು ಬಡ ಕುಟುಂಬದವರು ಈ ಉಚಿತ ಪಡಿತರ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಇನ್ನು ರಾಜ್ಯದಲ್ಲಿ APL Card ದಾರರ ಸಂಖ್ಯೆ ಕೂಡ ಹೆಚ್ಚಿನ. BPL ಪಡಿತರ ಚೀಟಿ ಹೊಂದಿರುವವರು ಹೆಚ್ಚಿನ ಪ್ರಮಾಣದಲ್ಲಿ ರೇಷನ್ ಅನ್ನು ಪಡೆಯುತ್ತಿದ್ದಾರೆ. ಆದರೆ APL ಕುಟುಂಬದಾರರು ರೇಷನ್ ಪಡೆಯುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ APL ಕಾರ್ಡ್ ದಾರರ ವಿರುದ್ದ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

APL Card Latest Update
Image Credit: Original Source

APL ಕಾರ್ಡ್ ದಾರರೇ ಎಚ್ಚರ
ರಾಜ್ಯದಲ್ಲಿ APL Card ಹೊಂದಿರುವವರು ಅಷ್ಟಾಗಿ ರೇಷನ್ ಪಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಯಾರು ಪಡಿತರನ್ನು ಪಡೆಯಲು ನಿರಾಸಕ್ತಿ ಹೊಂದಿರುತ್ತಾರೋ ಅಂತವರ ಕಾರ್ಡ್ ಅನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ರಾಜ್ಯಾದ್ಯಂತ 24 ಲಕ್ಷ ಎಪಿಎಲ್ ಕಾರ್ಡ್‌ಗಳಿದ್ದು, ಶೇ 80ರಷ್ಟು ಕಾರ್ಡ್‌ ದಾರರಿಗೆ ಪ್ರತಿ ತಿಂಗಳು ಪಡಿತರನ್ನು ಪಡೆಯುತ್ತಿಲ್ಲ. ಈ ಕಾರಣಗಳಿಂದ ಕಠಿಣ ನಿರ್ಧಾರವನ್ನ ತಗೆದುಕೊಳ್ಳಲು ಈಗ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಇನ್ನುಮುಂದೆ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಗುರುತಿನ ಚೀಟಿಗಾಗಿಯೇ ಅಥವಾ ಪಡಿತರಕ್ಕಾಗಿಯೇ ಎಂಬುದನ್ನು ನಮೂದಿಸಿ ಪ್ರತ್ಯೇಕವಾಗಿ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ಗುರುತಿನ ಚೀಟಿಗಾಗಿ ಕಾರ್ಡ್ ಪಡೆದವರಿಗೆ ಪಡಿತರ ಸಿಗುವುದಿಲ್ಲ. ಎಪಿಎಲ್ ಗೆ ಖರ್ಚು ಮಾಡಿರುವ ಅನುದಾನ ಕಡಿತಗೊಳಿಸಿ ಬಿಪಿಎಲ್ ಮಂಜೂರಾದವರಿಗೆ ಬೇರೆ ಬೇರೆ ಪಡಿತರ ನೀಡುವ ಚಿಂತನೆ ನಡೆಯುತ್ತಿದೆ.

APL Ration Card Delete
Image Credit: News Next

ರಾಜ್ಯದಲ್ಲಿ ಇಂತವರ ರೇಷನ್ ಕಾರ್ಡ್ ರದ್ದು
ಇನ್ನು ಪ್ರತಿ ತಿಂಗಳು ಪಡಿತರ ಚೀಟಿದಾರರು ಪಡಿತರನ್ನು ಪಡೆಯುತ್ತಾರೆ. ಕೆಲವರು ಒಂದು ತಿಂಗಳಿನಲ್ಲಿ ಪಡೆದರೆ ಇನ್ನೊಂದು ತಿಂಗಳಿನಲ್ಲಿ ಪಡೆಯುವುದಿಲ್ಲ. ಇದೀಗ ಇಂತವರಿಗೆ ಸರ್ಕಾರ ಹೊಸ ನಿಯಮ ತಂದಿದೆ. ಕಳೆದ 6 ತಿಂಗಳಿನಿಂದ ಯಾರು ಪಡಿತರನ್ನು ಪಡೆಯುವುದಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸುಮಾರು 1.27 ಕೋಟಿಗೂ ಅಧಿಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳಿದ್ದು, 4.37 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಈಗಾಗಲೇ 6 ತಿಂಗಳಿನಿಂದ ಪಡಿತರ ಪಡೆಯದ ಸುಮಾರು 3.46 ಲಕ್ಷ BPL ಹಾಗೂ ಅಂತ್ಯೋದಯ ಕಾರ್ಡ್ ಗಳನ್ನೂ ಸರ್ಕಾರ ಈಗಾಗಲೇ ರದ್ದುಪಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group