Bank Loan Apply: ಇನ್ನುಮುಂದೆ ಬ್ಯಾಂಕುಗಳಲ್ಲಿ ಸಾಲ ಪಡೆಯುವುದು ಬಹಳ ಕಷ್ಟ, RBI ಮಹತ್ವದ ನಿರ್ಧಾರ.

ಬ್ಯಾಂಕುಗಳಲ್ಲಿ ಸಾಲ ಪಡೆಯುವ ಬಗ್ಗೆ RBI ಮಹತ್ವದ ನಿರ್ಧಾರ.

Reserve Bank Of India New Update On Bank Loan: ಮುಂದಿನ ದಿನಗಳಲ್ಲಿ ನಿಮಗೆ ವೈಯಕ್ತಿಕ ಸಾಲ ಪಡೆಯುವುದು ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವುದು ಮತ್ತಷ್ಟು ಕಷ್ಟಕರವಾಗಲಿದೆ. ಆರ್ ಬಿ ಐ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಅಸುರಕ್ಷಿತ ಚಿಲ್ಲರೆ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಗಳನ್ನೂ ನೀಡುವ ಮೊದಲು ಗ್ರಾಹಕರ ಹಿನ್ನಲೆ ಪರಿಶೀಲನೆಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ದೇಶಾದ್ಯಂತ ಬ್ಯಾಂಕುಗಳಲ್ಲಿ ಕೋರಿಕೆ ಇಟ್ಟಿದೆ.

ಬ್ಯಾಂಕ್‌ ಗಳು ಅಸುರಕ್ಷಿತ ಸಾಲಗಳಲ್ಲಿ ಯಾವುದೇ ಮೇಲಾಧಾರವನ್ನು ಹೊಂದಿಲ್ಲ ಮತ್ತು ಅಂತಹ ಸಾಲಗಳು ಮುಳುಗಡೆಯಾಗುವ ಅಪಾಯದ ಕುರಿತು RBI ಬ್ಯಾಂಕ್‌ಗಳಿಗೆ ಎಚ್ಚರಿಕೆ ನೀಡಿದೆ. ಸಂಭವನೀಯ ಡೀಫಾಲ್ಟ್‌ನ ಅಪಾಯದ ನಡುವೆ ಆರ್‌ ಬಿ ಐ ಬ್ಯಾಂಕ್‌ ಗಳ ಅಸುರಕ್ಷಿತ ಪೋರ್ಟ್‌ ಫೋಲಿಯೊವನ್ನು ಸಹ ನಿಗ್ರಹಿಸಬಹುದು.

Important decision by RBI
Image Credit: Zeebiz

ಕ್ರೆಡಿಟ್ ಕಾರ್ಡ್ ಮತ್ತು ವಯಕ್ತಿಕ ಸಾಲ
2022 ರಿಂದ ಕೋವಿಡ್ ನಂತರ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ವಯಕ್ತಿಕ ಸಾಲದ ಪ್ರವೃತಿ ಸಾಕಷ್ಟು ಹೆಚ್ಚಾಗಿದೆ. 2022 ರಲ್ಲಿ ವೈಯಕ್ತಿಕ ಸಾಲಗಳು 7 .8 ಕೋಟಿಗಳಿಗಿಂತ 9 .9 ಕೋಟಿಗಳಿಗೆ ಏರಿಕೆಯಾಗಿದೆ. ಅಂದರೆ ಸುಮಾರು ಶೇಕಡಾ 24 ರಷ್ಟು ಹೆಚ್ಚಳವಾಗಿದೆ, ಆದರೆ ಕ್ರೆಡಿಟ್ ಕಾರ್ಡ್ ಗಳಿಂದ ಪಡೆದ ಸಾಲವು ಶೇಕಡಾ, 28 ರಷ್ಟು ಹೆಚ್ಚಾಗಿದೆ.

ಈ ಅಸುರಕ್ಷಿತ ಸಾಲಗಳ ಹೆಚ್ಚಳದ ವೇಗ 2023 ರಲ್ಲಿಯೂ ನಿಲ್ಲುತ್ತಿಲ್ಲ. ಆರ್‌ ಬಿ ಐ ಅಂ ಕಿಅಂಶಗಳ ಪ್ರಕಾರ ಫೆಬ್ರವರಿ 2022 ಕ್ಕೆ ಹೋಲಿಸಿದರೆ, ಈ ವರ್ಷ ಫೆಬ್ರವರಿ 2023 ರ ವೇಳೆಗೆ, ವೈಯಕ್ತಿಕ ಸಾಲಗಳು 33 ಲಕ್ಷ ಕೋಟಿಯಿಂದ 40 ಲಕ್ಷ ಕೋಟಿಗೆ ಅಂದರೆ ಶೇ. 20.4 ಕ್ಕೆ ಏರಿಕೆಯಾಗಿವೆ, ಆದರೆ ಜನವರಿ 2023 ರ ಹೊತ್ತಿಗೆ 1.87 ಲಕ್ಷ ಕೋಟಿಯೊಂದಿಗೆ ಕ್ರೆಡಿಟ್ ಕಾರ್ಡ್ ಬಾಕಿ ದಾಖಲೆಯ ಶೇ. 29.6ರ ಮಟ್ಟದಲ್ಲಿತ್ತು ಎನ್ನಲಾಗಿದೆ.

Important decision by RBI
Image Credit: Idfcfirstbank

ಅಸುರಕ್ಷಿತ ಸಾಲದ ಬೆಳವಣಿಗೆಯು ಹಣದುಬ್ಬರ ಮತ್ತು ಹೆಚ್ಚಿದ ಬಡ್ಡಿದರಗಳ ನಡುವೆ ದೇಶದ ಸೆಂಟ್ರಲ್ ಬ್ಯಾಂಕ್ ಗೆ ಕಳವಳಕಾರಿ ವಿಷಯವಾಗಿ ಪರಿಣಮಿಸಿದೆ. ಹೀಗಾಗಿ ಇಂತಹ ಸಾಲಗಳಲ್ಲಿ ಸಂಭವನೀಯ ಡಿಫಾಲ್ಟ್ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅಸುರಕ್ಷಿತ ಸಾಲಗಳ ಬಗ್ಗೆ ಕಟ್ಟುನಿಟ್ಟಾಗಿ ಇರುವಂತೆ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗಳನ್ನೂ ಕೋರಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

Join Nadunudi News WhatsApp Group

ಸಾಲ ಅಥವಾ ಕ್ರೆಡಿಟ್ ಕಾರ್ಡ್ ನೀಡುವ ಮೊದಲು, ಹಿನ್ನೆಲೆ ಪರಿಶೀಲನೆಯು ಹೆಚ್ಚು ಪರಿಣಾಮಕಾರಿಯಾಗಿಸಲು ಕೋರಲಾಗಿದೆ. ಇದರಿಂದಾಗಿ ಬ್ಯಾಂಕುಗಳು ತಂತ್ರಜ್ಞಾನವನ್ನು ಉಪಯೋಗಿಸಲು ಆರಂಭಿಸಿದೆ.

Join Nadunudi News WhatsApp Group