EPFO Rule: PPF ಖಾತೆ ಇದ್ದವರಿಗೆ ಜಾರಿಗೆ ಬಂತು ಹೊಸ ಆಧಾರ್ ನಿಯಮ, ರಾತ್ರೋರಾತ್ರಿ ಕೇಂದ್ರದ ಆದೇಶ.
PPF ಖಾತೆ ಇದ್ದವರಿಗೆ ಜಾರಿಗೆ ಬಂತು ಹೊಸ ರೂಲ್ಸ್, ಕೇಂದ್ರದ ಆದೇಶ
EPFO Latest Update: ಸದ್ಯ ದೇಶದಲ್ಲಿ ಹೊಸ ಹೊಸ ನಿಯಮಗಳು ಪರಿಚಯವಾಗುತ್ತಿದೆ. ಹಣಕಾಸಿನ ನಿಯಮಗಳಿದ ಹಿಡಿದು ವಿವಿಧ ಹೂಡಿಕೆಯ ನಿಯಮಗಳು ಕೂಡ ಬದಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ Aadhar Card ಪ್ರಮುಖ ಸ್ಥಾನದಲ್ಲಿದ್ದು, ಇದೀಗ ಈ ಕೆಲಸಕ್ಕೆ ಆಧಾರ್ ಕಾರ್ಡ್ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. Employees’ Provident Fund Organization ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಆಧಾರ್ ವಿಷಯವಾಗಿ ಮಹತ್ವದ ಬದಲಾವಣೆ ತರಲಿದೆ. PPF ಖಾತೆ ಇದ್ದವರಿಗೆ ಹೊಸ ಆಧಾರ್ ನಿಯಮ ಜಾರಿಯಾಗಲಿದೆ.
![EPFO Latest Update](https://nadunudi.in/wp-content/uploads/2024/01/EPFO-Latest-Update.png)
PPF ಖಾತೆ ಇದ್ದವರಿಗೆ ಜಾರಿಗೆ ಬಂತು ಹೊಸ ಆಧಾರ್ ನಿಯಮ
Employees’ Provident Fund Organization (EPFO) ಭವಿಷ್ಯ ನಿಧಿ ಸಂಬಂಧಿತ ಉದ್ದೇಶಗಳಿಗಾಗಿ ಜನ್ಮ ದಿನಾಂಕದ ಪರಿಷ್ಕರಣೆ ಮತ್ತು ತಿದ್ದುಪಡಿಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ಕೈಬಿಟ್ಟಿದೆ. EPFO ಇಂತಹ ಸೇವೆಗಳಿಗೆ ಮಾನ್ಯ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ಹೊರಗಿಟ್ಟಿದೆ. ಈ ಸಂಬಂಧ EPFO ಸುತ್ತೋಲೆಯನ್ನೂ ಹೊರಡಿಸಿದೆ. ಹೊಸ ನಿಯಮದ ಪ್ರಕಾರ ನಿಮ್ಮ ಬಳಿ ಆಧಾರ್ ಮಾಹಿತಿ ಇಲ್ಲದಿದ್ದರೂ ಕೂಡ ಭವಿಷ್ಯ ನಿಧಿ ಸಂಭಂದಿತ ಜನ್ಮ ದಿನಾಂಕದ ಪರಿಷ್ಕರಣೆ ಮತ್ತು ತಿದ್ದುಪಡಿಯನ್ನು ಮಾಡಿಕೊಳ್ಳಬಹುದು.
![PPF Account New Rules](https://nadunudi.in/wp-content/uploads/2024/01/PPF-Account-New-Rules.png)
ರಾತ್ರೋರಾತ್ರಿ ಕೇಂದ್ರದ ಆದೇಶ
ಇನ್ನುಮುಂದೆ ಜನ್ಮ ದಿನಾಂಕದ ಪರಿಷ್ಕರಣೆ ಮತ್ತು ತಿದ್ದುಪಡಿಗಾಗಿ ಜನನ ಪ್ರಮಾಣ ಪತ್ರ ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ದಾಖಲೆಗಳನ್ನು ಬಳಸಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಜನವರಿ 16 2024 ರಂದು ಪ್ರಮುಖ ಸುತ್ತೋಲೆಯನ್ನು ಹೊರಡಿಸಿದ್ದು, ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ಸೊತ್ತುಲೆ ಹೊರಡಿಸಿದೆ.