HRMS: ರಾಜ್ಯ ಸರ್ಕಾರೀ ನೌಕರರಿಗೆ 2024 ರಿಂದ ಹೊಸ ರೂಲ್ಸ್, HRMS ತಂತ್ರಜ್ಞಾನ ಜಾರಿಗೆ

ರಾಜ್ಯ ಸರ್ಕಾರೀ ನೌಕರರಿಗೆ HRMS ತಂತ್ರಾಂಶ ನಿಯಮವನ್ನ ಜಾರಿಗೆ ತಂದ ಸರ್ಕಾರ

New Rules For State Government Employees: ಪ್ರಾದೇಶಿಕ ಕಛೇರಿಗಳು ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.

HRMS ತಂತ್ರಜ್ಞಾನ ಬಳಕೆ ಹಾಗು ಇವುಗಳ ಸಂಪೂರ್ಣ ಮಾಹಿತಿಯನ್ನು ಈ ತರಬೇತಿ ಮೂಲಕ ನೀಡಲಾಗುವುದು ಎನ್ನಲಾಗಿದೆ. ಈ ತರಬೇತಿಯು ದಿನಾಂಕ 30.12.2023 ರಂದು ಕೇಂದ್ರ ಕಛೇರಿಯಲ್ಲಿ ನಡೆಯಲಿದೆ. ಹಾಗಾದರೆ ಏನಿದು HRMS ತಂತ್ರಜ್ಞಾನ ಅನ್ನುವುದರ ಬಗ್ಗೆ ತಿಳಿಯೋಣ.

New Rules For State Government Employees
Image Credit: Onmanorama

HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆ ಬಗ್ಗೆ ಮಾಹಿತಿ

ರಾಜ್ಯದಲ್ಲಿ ಕಡ್ಡಾಯವಾಗಿ HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆ 2024 ರಿಂದ ಪ್ರಾರಂಭ ಆಗಲಿದ್ದು ಈ ಕುರಿತು ಸಿಬ್ಬಂದಿಗಳಿಗೆ ತರಬೇತಿ ಅಗತ್ಯ ಇದ್ದು, ಇಲಾಖಾ ವ್ಯಾಪ್ತಿಯ ಕೇಂದ್ರ ಕಛೇರಿ, ಪ್ರಾದೇಶಿಕ ಕಛೇರಿಗಳು ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ದಿನಾಂಕ 30.12.2023 ರಂದು ಬೆಳಗ್ಗೆ 10.00 ಗಂಟೆಗೆ ಕೇಂದ್ರ ಕಛೇರಿಯಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಸಿಬ್ಬಂದಿಗಳು ತರಬೇತಿಗೆ ಹಾಜರಾಗಬಹುದಾಗಿದೆ.

State Government Employees Latest News
Image Credit: Tomorrowmakers

ಸಿಬ್ಬಂದಿಗಳಿಗೆ ತರಬೇತಿಗೆ ಹಾಜರಾಗಲು ಅನುಮತಿ ನೀಡಲಾಗುತ್ತದೆ

Join Nadunudi News WhatsApp Group

ದಿನಾಂಕ 30.12.2023ರಂದು ಬೆಳಗ್ಗೆ 10.00 ಗಂಟೆಗೆ ಕೇಂದ್ರ ಕಛೇರಿಯಲ್ಲಿ ನಡೆಯುವ ತರಬೇತಿ ಹಾಜರಾಗುವ ಸಿಬ್ಬಂದಿಗಳಿಗೆ ಹಾಜರಾತಿ ಪ್ರಮಾಣಪತ್ರ ಸಲ್ಲಿಸುವ ಷರತ್ತಿಗೊಳಪಟ್ಟು, ಸದರಿ ದಿನಾಂಕದಂದು ಅನ್ಯ ಕಾರ್ಯ ನಿಮಿತ್ತ ಮಂಜೂರು ಮಾಡಲಾಗಿದೆ. ಅಸಕ್ತ ನೌಕರರು ಕಛೇರಿ ಮುಖ್ಯಸ್ಥರ ಪೂರ್ವಾನುಮತಿಯೊಂದಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಹೆಚ್ಚಿನ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿದರೆ ಮುಂದೆ ಈ HRMS ಮತ್ತು ಖಜಾನೆ-2 ತಂತ್ರಾಂಶದ ಬಳಕೆಗೆ ಅನುಕೂಲಕರ ಆಗಲಿದೆ.

Join Nadunudi News WhatsApp Group