July Rules: ನಾಳೆಯಿಂದ ಜಾರಿಗೆ ಬರಲಿದೆ 5 ಹೊಸ ನಿಯಮ, ಹೊಸ ತಿಂಗಳು ಹೊಸ ನಿಯಮ ಆರಂಭ.

ನಾಳೆಯಿಂದ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ.

New Rules From July 1st: ನಾಳೆಯಿಂದ ಜುಲೈ ತಿಂಗಳು ಆರಂಭಗೊಳ್ಳಲಿದೆ. ಜುಲೈ (July) ಆರಂಭದಲ್ಲಿ ಅನೇಕ ನಿಯಮಗಳು ಬದಲಾಗಲಿವೆ. ಇನ್ನು ಜುಲೈ ಅಂತ್ಯದೊಳಗೆ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಸಲು ಗಡುವು ನೀಡಲಾಗಿದೆ. ಬ್ಯಾಂಕ್, ತೆರಿಗೆ, ಎಲ್ ಪಿಜಿ ದರದ ನಿಯಮದಲ್ಲಿ ಬಾರಿ ಬದಲಾವಣೆ ಆಗಲಿದೆ.

ನಾಳೆಯಿಂದ ಜಾರಿಗೆ ಬರಲಿದೆ ಈ ಹೊಸ ನಿಯಮಗಳು
ಜುಲೈ ತಿಂಗಳ ಮೊದಲ ದಿನದಿಂದ ಕೆಲವು ಪ್ರಮುಖ ನಿಯಮಗಳು ಬದಲಾಗಲಿವೆ. ಕೆಲವು ನಿಯಮಗಳ ಬದಲಾವಣೆ ಜನಸಾಮಾನ್ಯರಿಗೆ ಆರ್ಥಿಕ ನಷ್ಟವನ್ನು ತರಲಿದೆ. ಇದೀಗ ನಾಳೆಯಿಂದ ಬದಲಾಗಲಿರುವ ಕೆಲವು ನಿಯಮಗಳ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

The price of gas cylinders has come down from June 1.
Image Credit: News18

1. ಜುಲೈ ತಿಂಗಳಿನಲ್ಲಿ ಎಲ್ ಪಿಜಿ ದರ ಪರಿಷ್ಕರಣೆ ಸಾಧ್ಯ
ಪ್ರತಿ ತಿಂಗಳ ಆರಂಭದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಆಗುವುದು ಕಡ್ಡಾಯವಾಗಿದೆ. ಜೂನ್ 1 ರಿಂದ ಗ್ಯಾಸ್ ಸಿಲಿಂಡರ್ ಗಳ ಬೆಲೆ ಇಳಿಕೆ ಆಗಿದೆ. 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 83.50 ರೂ. ಗೆ ಇಳಿಕೆಯಾಗಿತ್ತು.

ಇನ್ನು ಜುಲೈ ತಿಂಗಳ ಆರಂಭದಲ್ಲಿ ಕೂಡ ಎಲ್ ಪಿಜಿ ದರ ಪರಿಷ್ಕರಣೆ ಆಗಲಿದೆ. ಕಳೆದ ಎರಡು ತಿಂಗಳಿನಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಕಾರಣಕ್ಕೆ ಜುಲೈ ನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

Change in CNG and PNG rates
Image Credit: Timesofindia

2. ಸಿಎನ್ ಜಿ ಮತ್ತು ಪಿಎನ್ ಜಿ ದರದಲ್ಲಿ ಬದಲಾವಣೆ
ಪ್ರತಿ ತಿಂಗಳ ಆರಂಭದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಜೊತೆಗೆ ಸಿಎನ್ ಜಿ ಮತ್ತು ಪಿಎನ್ ಜಿ ದರ ಕೂಡ ಪರಿಷ್ಕರಣೆ ಆಗಲಿದೆ. ಜುಲೈ ನಲ್ಲಿ ಸಿಎನ್ ಜಿ ಮತ್ತು ಪಿಎನ್ ಜಿ ದರದಲ್ಲಿ ಇಳಿಕೆ ಸಾಧ್ಯತೆ ಇದೆ. ದೆಹಲಿ ಮತ್ತು ಮುಂಬೈನಲ್ಲಿ ಪೆಟ್ರೋಲಿಯಂ ಕಂಪನಿಗಳು ಸಿಎನ್ ಜಿ ಮತ್ತು ಪಿಎನ್ ಜಿ ದರವನ್ನು ಪರಿಶೀಲಿಸುವ ಸಾಧ್ಯತೆ ಇದೆ.

Join Nadunudi News WhatsApp Group

Submission of income tax return is mandatory
Image Credit: Taxationplanning

3. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕಡ್ಡಾಯ
ಆದಾಯ ತೆರಿಗೆ ಇಲಾಖೆಯು ತೆರಿಗೆ ಸಂಬಂಧಿತ ನಿಯಮದಲ್ಲಿ ಕೂಡ ಬದಲಾವಣೆ ತರಲಿದೆ. ಹಣಕಾಸು ವರ್ಷ 2022 -23 ರ ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿದೆ. ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು.

It has been clarified that HDFC Bank merger will start from July 1.
Image Credit: Moneycontrol

4. ಜುಲೈ 1 ಕ್ಕೆ ವಿಲೀನವಾಗಲಿದೆ HDFC ಬ್ಯಾಂಕ್
ಜುಲೈ 1 ರಿಂದ ಹೆಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಆರಂಭವಾಗಲಿದೆ ಎಂದು  ಸ್ಪಷ್ಟಪಡಿಸಲಾಗಿದೆ. ಬ್ಯಾಂಕ್ ವಿಲೀನದ ನಂತರ HDFC ಲಿಮಿಟೆಡ್ ನ ಪ್ರತಿಯೊಂದು ಸೇವೆಯು ಬ್ಯಾಂಕ್ ನ ಎಲ್ಲ ಶಾಖೆಗಳಲ್ಲಿ ಲಭ್ಯವಿರುತ್ತದೆ. HDFC ಬಡ್ಡಿದರಗಳು ಬದಲಾಗಬಹುದು. HDFC ಷೇರುಗಳನ್ನು ಹೊಂದಿರುವ ಹೂಡಿಕೆದಾರರ ಮೇಲೆ ಬ್ಯಾಂಕ್ ವಿಲೀನದ ಪರಿಣಾಮ ಬೀರಲಿದೆ.

Change in Debit and Credit Card Rules
Image Credit: Cnbc

5. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ
ಇನ್ನು ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡಲು TCS ಅನ್ನು ಅನ್ವಯಿಸಲಾಗಿದೆ. ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ಗಳ ಮೇಲೆ TCS ಅನ್ವಯಿಸುತ್ತದೆ. ಈ ಹೊಸ ನಿಯಮದಡಿ 7 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಮೇಲೆ 20 ಪ್ರತಿಶತದವರೆಗೆ TCS ಶುಲ್ಕವನ್ನು ವಿಧಿಸಲಾಗುತ್ತದೆ. ಶಿಕ್ಷಣ ಮತ್ತು ವೈದ್ಯಕೀಯಕ್ಕಾಗಿ ಈ ಶುಲ್ಕವನ್ನು 5 ಪ್ರತಿಶತಕ್ಕೆ ಇಳಿಸಲಾಗುತ್ತದೆ.

Join Nadunudi News WhatsApp Group