Income Tax Filing: ಇಂತವರು ಆದಾಯ ತೆರಿಗೆ ಪಾವತಿ ಮಾಡುವ ಅಗತ್ಯ ಇಲ್ಲ, ವಿನಾಯಿತಿ ಘೋಷಿಸಿದ ನಿರ್ಮಲ ಸೀತಾರಾಮನ್.

ಆದಾಯ ತೆರಿಗೆ ವಿನಾಯಿತಿ ಘೋಷಣೆ ಮಾಡಿದ ನಿರ್ಮಲ ಸೀತಾರಾಮನ್. ೭ ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರಿಗೆ ವಿನಾಯಿತಿ.

Nirmala Sitharaman About Income Tax Filing: ಇದೀಗ ಏಪ್ರಿಲ್ 1 2023 ರಿಂದ ಹೊಸ ಹಣಕಾಸು ವರ್ಷ (Financial Year) ಆರಂಭವಾಗಿದೆ. ಈ ಹೊಸ ಹಣಕಾಸು ವರ್ಷ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ತರುತ್ತಿದೆ. ಜನಸಾಮಾನ್ಯರು ಇದೀಗ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಇನ್ನು ಈ ಹಣದುಬ್ಬರದ ಏರಿಕೆಯ ಪರಿಣಾಮವಾಗಿ ಜನತೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.

Nirmala Sitharaman About Income Tax Filing
Image Source: Hindusthan Times

ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ
ಇತ್ತೀಚೆಗಂತೂ ತೆರಿಗೆಗೆ (Tax) ಸಂಬಂಧಿತ ನಿಯಮಗಳು ಕೂಡ ಬದಲಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರು ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಕಟ್ಟುವ ಪರಿಸ್ಥಿತಿ ಬಂದೊದಗಿದೆ. ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಹೊಸ ಆದಾಯ ತೆರಿಗೆ ಪದ್ದತಿಯನ್ನು ಘೋಷಿಸಿದ್ದಾರೆ. ಈ ಹೊಸ ಆದಾಯ ತೆರಿಗೆ ಪದ್ದತಿಯು ಜನಸಾಮಾನ್ಯರಿಗೆ ತೆರಿಗೆ ವಿನಾಯಿತಿಯನ್ನು ನೀಡಲಿದೆ.

Nirmala Sitharaman About Income Tax Filing
Image Source: Zee News

ಆದಾಯ ತೆರಿಗೆಯಲ್ಲಿ ವಿನಾಯಿತಿ ಘೋಷಿಸಿದ ನಿರ್ಮಲಾ ಸೀತಾರಾಮನ್
ಹೊಸ ಹಣಕಾಸು ವರ್ಷದ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಏಪ್ರಿಲ್ 1 2023 ರಿಂದ ಹೊಸ ತೆರಿಗೆ ಪದ್ದತಿಯು ಡಿಫಾಲ್ಟ್ ತೆರಿಗೆ ಪದ್ಧತಿಯಾಗಿದೆ. ಇನ್ನು ಮುಂದೆ ITR ಪೋರ್ಟಲ್ ನ ಸಂಪೂರ್ಣ ಸ್ವರೂಪವು ಹೊಸ ತೆರಿಗೆ ಆಡಳಿತ ವ್ಯವಸ್ಥೆಗೆ ಅನುಗುಣವಾಗಿರುತ್ತದೆ. ಪ್ರಸ್ತುತ ಹೂಡಿಕೆ ಮತ್ತು HRA ವಿನಾಯಿತಿಗಳೊಂದಿಗೆ ಹಳೆಯ ತೆರಿಗೆ ಪದ್ಧತಿಯಲ್ಲಿಯೇ ಯಾವುದೇ ಬದಲಾವಣೆಗಳು ಇರುವುದಿಲ್ಲ. ಹೊಸ ತೆರಿಗೆ ಪದ್ದತಿಯಲ್ಲಿ ಮೂಲ ವಿನಾಯಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.

Nirmala Sitharaman About Income Tax Filing
Image Source: India Today

Join Nadunudi News WhatsApp Group

Join Nadunudi News WhatsApp Group