Nita Ambani: ಶ್ರೀಮಂತ ಮಹಿಳೆ ನೀತಾ ಅಂಬಾನಿ ಅವರಿಗೆ ಮೇಕಪ್ ಮಾಡುವವರ ಸಂಬಳ ಎಷ್ಟು ಗೊತ್ತಾ…? ದುಬಾರಿ ಸಂಬಳ.

ನೀತಾ ಅಂಬಾನಿ ಅವರಿಗೆ ಮೇಕಪ್ ಮಾಡುವವರ ಸಂಬಳ ಎಷ್ಟು ಗೊತ್ತಾ...?

Nita Ambani Makeup Artist Remuneration: ಮುಕೇಶ್ ಅಂಬಾನಿ ಅವರ ಪತ್ನಿ Nita Ambani ಅವರು ಆಗಾಗ ತಮ್ಮ ಐಷಾರಾಮಿ ಜೀವನದ ವಿಚಾರವಾಗಿ ಸುದ್ದಿಯಾಗುತ್ತ ಇರುತ್ತಾರೆ. ದೇಶದ ಶ್ರೀಮಂತ ವ್ಯಕ್ತಿಯ ಪತ್ನಿಯಾಗಿರುವ ನೀತಾ ಅಂಬಾನಿ ಅವರು ಐಷಾರಾಮಿ ಜೀವನವನ್ನು ನಡೆಸುವುದು ಸಹಜವಾದ ವಿಚಾರ. ಈಗಾಗಲೇ ಸಾಕಷ್ಟು ಬಾರಿ ನೀತಾ ಅಂಬಾನಿ ಅವರು ತಮ್ಮ ದುಬಾರಿ ಉಡುಗೆ ತೊಡುಗೆಗಳ ವಿಚಾರವಾಗಿ ಸುದ್ದಿಯಾಗಿದ್ದಾರೆ. ಈಗಂತೂ ತಮ್ಮ ಮಗನ ಮದುವೆ ಹತ್ತಿರವಾಗುತ್ತಿದೆ.

ಹೀಗಾಗಿ ನೀತಾ ಅಂಬಾನಿ ದುಬಾರಿ ವಸ್ತ್ರ ಆಭರಣಗಳ ಜೊತೆಗೆ ಮಿಂಚುವುದಂತೂ ನಿಜ. ಇನ್ನು ದುಬಾರಿ ವಸ್ತ್ರ ಆಭರಣಗಳ ವಿಚಾರದ ಹೊರತಾಗಿ 60 ವರ್ಷದ ನಿಂತ ಅಂಬಾನಿ ಅಷ್ಟು ಸುಂದರವಾಗಿ ಕಾಣಲು ಅವರ ಮೇಕಪ್ ಪ್ರಮುಖವಾಗಿದೆ. ಇನ್ನು ಅಷ್ಟೊಂದು ನೀಟ್ ಅಂಡ್ ಅಟ್ರಾಕ್ಟಿವ್ ಆಗಿ ಕಾಣುವ ನೀತಾ ಅಂಬಾನಿ ಅವರ ಮೇಕಪ್ ನ ಬಗ್ಗೆ ಮಾಹಿತಿ ತಿಳಿದರೆ ನಿಮಗೆ ಅಚ್ಚರಿ ಆಗುದಂತು ನಿಜ. ನೀತಾ ಅಂಬಾನಿ ಮೇಕಪ್ ಮ್ಯಾನ್ ದಿನದ ಸಂಬಳ ಕೆಲವರ ವರ್ಷದ ಸಂಬಳವಾಗಿದೆ.

Nita Ambani Makeup Artist
Image Credit: Bollywoodshaadis

ಶ್ರೀಮಂತ ಮಹಿಳೆ ನೀತಾ ಅಂಬಾನಿ ಅವರಿಗೆ ಮೇಕಪ್ ಮಾಡುವವರ ಸಂಬಳ ಎಷ್ಟು ಗೊತ್ತಾ…?
ಇನ್ನು 60 ವರ್ಷ ವಯಸ್ಸಿನ ನೀತಾ ಅಂಬಾನಿ ಅವರಿಗೆ ಅಟ್ರಾಕ್ಟಿವ್ ಮೇಕಪ್ ಲುಕ್ ನೀಡುವವರು Celebrity Makeup Artist Mickey . ಹೌದು, ಮಿಕ್ಕಿ ಅವರು ಅಂಬಾನಿ ಪತ್ನಿ ನೀತಾ ಅಂಬಾನಿ ಅವರಿಗೆ ಬೆಸ್ಟ್ ಮೇಕಪ್ ಮಾಡುತ್ತಾರೆ. ನೀತಾ ಅಂಬಾನಿ ಅವರ ಮಗಳು ಮತ್ತು ಸೊಸೆಗೆ ಮಿಕ್ಕಿ ಮೇಕಪ್ ಮಾಡುತ್ತಾರೆ. ಮಿಕ್ಕಿ ಒಬ್ಬ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿರುವುದರಿಂದ ಅವರು ವಿಧಿಸುವ ಮೊತ್ತವು ದೊಡ್ಡದಾಗಿದೆ. ಮಿಕ್ಕಿ ಅವರು ನೀತಾ ಅಂಬಾನಿ ಅವರ ಒಂದು ದಿನದ ಮೇಕ್ಅಪ್ ಗೆ ಸರಿಸುಮಾರು 75 ಸಾವಿರದಿಂದ 1 ಲಕ್ಷದವರೆಗೆ ವೇತನ ತೆಗೆದುಕೊಳ್ಳುತ್ತಾರೆ.

ಈ ಶುಲ್ಕ ಮುಂಬೈನಲ್ಲಿ ಮಾಡಿದ ಮೇಕಪ್‌ ಗೆ ಮಾತ್ರ. ಮುಂಬೈ ಆಚೆಗೆ ಇನ್ನೂ ಹೆಚ್ಚಿರುತ್ತದೆ. ಸೆಲೆಬ್ರಿಟಿಗಳು ಮಾತ್ರ ಮಿಕ್ಕಿಯಿಂದ ಮೇಕಪ್ ಮಾಡಿಕೊಳ್ಳುತ್ತಾರೆ. ದೊಡ್ಡ ಕಂಪನಿಗಳ ಸಿಇಒಗಳಿಗಿಂತ ಮಿಕ್ಕಿಯ ಗಳಿಕೆ ಹೆಚ್ಚು. ಇನ್ನು ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಅನುಷ್ಕಾ ಶರ್ಮಾ ಸೇರಿದಂತೆ ಇನ್ನಿತರ ದೊಡ್ಡ ಸೆಲೆಬ್ರಿಟಿಗಳಿಗೆ ಮಿಕ್ಕಿ ಮೇಕಪ್ ಮಾಡುತ್ತರೆ. ವೈಯಕ್ತಿಕ ಮೇಕಪ್ ಕಲಾವಿದೆಯಾಗಿ ನೀತಾ ಅಂಬಾನಿಯೊಂದಿಗೆ ಮಿಕ್ಕಿ ಜೊತೆಗಿದ್ದು, ಸೆಲೆಬ್ರಿಟಿಗಿಂತಲೂ ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ ಎಂದರೆ ತಪ್ಪಾಗಲಾರದು.

Nita Ambani Makeup Artist Remuneration
Image Credit: Free Press Journal

Join Nadunudi News WhatsApp Group

Join Nadunudi News WhatsApp Group