Expensive Water Bottle: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ ಎಷ್ಟು ಗೊತ್ತಾ..? ದುಬಾರಿ ಬಾಟಲ್.

ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ ಎಷ್ಟು...?

Nita Ambani’s Expensive Water Bottle: ಮುಕೇಶ್ ಅಂಬಾನಿ ಅವರ ಪತ್ನಿ Nita Ambani ಅವರು ಆಗಾಗ ತಮ್ಮ ಐಷಾರಾಮಿ ಜೀವನದ ವಿಚಾರವಾಗಿ ಸುದ್ದಿಯಾಗುತ್ತ ಇರುತ್ತಾರೆ. ದೇಶದ ಶ್ರೀಮಂತ ವ್ಯಕ್ತಿಯ ಪತ್ನಿಯಾಗಿರುವ ನೀತಾ ಅಂಬಾನಿ ಅವರು ಐಷಾರಾಮಿ ಜೀವನವನ್ನು ನಡೆಸುವುದು ಸಹಜವಾದ ವಿಚಾರ. ಈಗಾಗಲೇ ಸಾಕಷ್ಟು ಬಾರಿ ನೀತಾ ಅಂಬಾನಿ ಅವರು ತಮ್ಮ ದುಬಾರಿ ಉಡುಗೆ ತೊಡುಗೆಗಳ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಸದಾ ದುಬಾರಿ ಉಡುಗೆ ಹಾಗೂ ಆಭರಣಗಳ ವಿಚಾರವಾಗಿ ಸುದ್ದಿಯಾಗುತ್ತಿದ್ದ ನೀತಾ ಅಂಬಾನಿ ಇದೀಗಾ ತಾವು ಕುಡಿಯಲು ಬಳಸುವ ನೀರಿನ ಬಾಟಲಿಯ ವಿಚಾರವಾಗಿ ಎಲ್ಲರ ಗಮನ ಸೆಳೆದಿದ್ದಾರೆ. ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ ಬಗ್ಗೆ ಕೇಳಿದ್ರೆ ನೀವು ಅಚ್ಚರಿ ಪಡುವುದಂತೂ ನಿಜ. ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ ಎಷ್ಟು…? ಈ ಬಾಟಲಿಯಲ್ಲಿ ಏನು ವಿಶೇಷತೆ ಇದೆ…? ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

Nita Ambani's Expensive Water Bottle
Image Credit: Sakshi

ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ ಎಷ್ಟು ಗೊತ್ತಾ..?
ಜನಪ್ರಿಯ ಡಿಸೈನರ್ ಫರ್ನಾಂಡೋ ಅಲ್ಟಮಿರಾನೊ ವಿನ್ಯಾಸಗೊಳಿಸಿದ ಕಸ್ಟಮೈಸ್ ಮಾಡಿದ ಬಾಟಲಿಯಿಂದ ನೀತಾ ಅಂಬಾನಿ ನೀರು ಕುಡಿಯುತ್ತಾರೆ. ಇದು ವಿಶ್ವದ ಅತ್ಯಂತ ದುಬಾರಿ ನೀರು ಬಾಟಲಿಯಾಗಿದೆ. ಯಾಕೆಂದರೆ ಈ ಚಿನ್ನದ ಬಾಟಲಿಯ ಬೆಲೆ ಬರೋಬ್ಬರಿ 49 ಲಕ್ಷ ರೂಪಾಯಿ. ನೀತಾ ಅಂಬಾನಿ ಈ 49 ಲಕ್ಷ ರೂ.ಗಳ ಬ್ರಾಂಡ್ ಆಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ನೀರನ್ನು ಕುಡಿಯುತ್ತಾರೆ ಎಂದು ಹೇಳಲಾಗಿದೆ.

ಇದು ವಿಶ್ವದ ಅತ್ಯಂತ ದುಬಾರಿ ನೀರು ಎಂದು ಹೇಳಲಾಗುತ್ತದೆ. ಮೂಲ ಫೋಟೋದಲ್ಲಿ, ನೀತಾ ಅಂಬಾನಿ 2015 ರ ಐಪಿಎಲ್ ಪಂದ್ಯದ ಸಮಯದಲ್ಲಿ ಸಾಮಾನ್ಯ ನೀರಿನ ಬಾಟಲಿಯನ್ನು ಹಿಡಿದಿದ್ದಾರೆ. ಅದೇ ಚಿತ್ರವನ್ನು ಚಿನ್ನದ ಬಾಟಲಿಯಾಗಿ ಪರಿವರ್ತಿಸಿ ಪ್ರಕಟಿಸಲಾಗಿದೆ. ಈ ಬ್ರಾಂಡ್ ನೀರು ಪ್ರಪಂಚದಲ್ಲೇ ಅತ್ಯಂತ ದುಬಾರಿ ಎಂಬುದು ನಿಜ.

ಈ ದುಬಾರಿ ನೀರಿನ ಬಾಟಲಿಯ ವಿಶೇಷತೆ ಏನು…?
ಚರ್ಮದ ಯೌವನವನ್ನು ಕಾಪಾಡಲು ಚಿನ್ನದ ಕಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ ನೀತಾ ಅಂಬಾನಿ ಯುವ ಮತ್ತು ರೋಮಾಂಚಕವಾಗಿ ಕಾಣಲು ಈ ಚಿನ್ನದ ನೀರನ್ನು ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ. ಈ ನೀರಿನ ಬಾಟಲಿಯು 24 ಕ್ಯಾರೆಟ್ ಚಿನ್ನದಿಂದ ಮುಚ್ಚಲ್ಪಟ್ಟಿದೆ. ಫಿಜಿ ಮತ್ತು ಫ್ರಾನ್ಸ್‌ ನ ನೈಸರ್ಗಿಕ ಬುಗ್ಗೆಗಳಿಂದ ನೀರನ್ನು ಸಂಗ್ರಹಿಸಲಾಗುತ್ತದೆ. ಐಸ್ಲ್ಯಾಂಡ್ನ ಗ್ಲೇಶಿಯಲ್ ನೀರಿನಲ್ಲಿ 23 ಕ್ಯಾರೆಟ್ ಚಿನ್ನದ ಧೂಳು ಇದೆ.

Join Nadunudi News WhatsApp Group

World’s most expensive water
Image Credit: Times Of India

Join Nadunudi News WhatsApp Group