Oil Price: ಮನೆಯಲ್ಲಿ ಅಡುಗೆಗೆ ಹೆಚ್ಚು ಎಣ್ಣೆ ಬಳಸುವವರಿಗೆ ಕೇಂದ್ರದಿಂದ ಸಿಹಿಸುದ್ದಿ, ಬೆಲೆ ಇಳಿಕೆಗೆ ಕೇಂದ್ರದ ಮೇಘಾ ಪ್ಲ್ಯಾನ್

ಅಡುಗೆ ಎಣ್ಣೆ ಬೆಲೆಯನ್ನು ಇಳಿಕೆ ಮಾಡಲು ಈಗ ಕೇಂದ್ರ ಸರ್ಕಾರ ಹೊಸ ಮಾರ್ಗವನ್ನ ಕಂಡುಹಿಡಿದಿದೆ

Oil Price Down: ಪ್ರಸ್ತುತ 2024 ಆರಂಭಗೊಂಡಿದೆ. ಹೊಸ ವರ್ಷದಲ್ಲಿ ಆರಂಭದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿವೆ. ಇನ್ನು 2023 ರ ಆರಂಭದಿಂದ ಜನರು ಹಣದುಬ್ಬರತೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ.

ಈಗಲೂ ಕೂಡ ಜನರಿಗೆ ಬೆಲೆ ಏರಿಕೆಯ ಬಿಸಿ ತಾಗುತ್ತಲೇ ಇದೆ. ಒಂದಲ್ಲ ಒಂದು ವಸ್ತುವಿನ ಬೆಲೆಯಲ್ಲಿ ಏರಿಕೆ ಆಗುತ್ತಾ ಬಂದಿದೆ. ದಿನ ನಿತ್ಯ ಬಳಸುವ ವಸ್ತುಗಳ ಬೆಲೆಯ ಏರಿಕೆಯಿಂದಾಗಿ ಜನರು ಕಂಗಾಲಾಗುವಂತಾಗಿದೆ. ಇದೀಗ ಬೆಲೆ ಏರಿಕೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜನರಿಗೆ ಸರ್ಕಾರದಿಂದ ಬಿಗ್ ರಿಲೀಫ್ ಸಿಕ್ಕಿದೆ ಎನ್ನಬಹುದು.

Oil Price Down
Image Credit: Original Source

ಮನೆಯಲ್ಲಿ ಅಡುಗೆಗೆ ಹೆಚ್ಚು ಎಣ್ಣೆ ಬಳಸುವವರಿಗೆ ಕೇಂದ್ರದಿಂದ ಸಿಹಿಸುದ್ದಿ
ಸದ್ಯ ಸರಕಾರ ದಿನ ನಿತ್ಯ ಅಡುಗೆಗೆ ಬೇಕಾಗುವ ಅಡುಗೆ ಎಣ್ಣೆಯ ಬೆಲೆಯನ್ನು ಪರಿಷ್ಕರಿಸಲು ನಿರ್ಧರಿಸಿದೆ. ಈ ಮೂಲಕ ಜನತೆಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಹೊಸ ವರ್ಸಾಹದ್ ಜನರು ಒಂದು ವಸ್ತುವಿನ ಬೆಲೆಯಲ್ಲಾದರೂ ಇಳಿಕೆ ಕಾಣುವ ಸಮಯ ಬಂದಿದೆ ಎನ್ನಬಹುದು.

ಮಾರ್ಚ್ 2025 ರ ವರೆಗೆ ಹೆಚ್ಚುವರಿ ವರ್ಷಕ್ಕೆ ಕಡಿಮೆ ಸುಂಕದಲ್ಲಿ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಈ ಕ್ರಮವು ಸ್ಥಳೀಯ ಬೆಲೆಗಳನ್ನು ಕಾಯ್ದುಕೊಳ್ಳುವ ಮತ್ತು ಭವಿಷ್ಯದಲ್ಲಿ ಯಾವುದೇ ತೀವ್ರ ಏರಿಕೆಯನ್ನು ತಡೆಯುವ ಗುರಿಯನ್ನು ಹೊಂದಿದೆ.

Cooking Oil Price Fall
Image Credit: Newscientist

ಕಡಿಮೆ ಆಮದು ಸುಂಕ 2025 ರ ಮಾರ್ಚ್ ವರೆಗೆ ವಿಸ್ತರಣೆ
ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೂರ್ಯಕಾಂತಿ ಎಣ್ಣೆ ಮತ್ತು ಕಚ್ಚಾ ಸೋಯಾಯಿಲ್ ಮೇಲಿನ ಕಡಿಮೆ ಆಮದು ಸುಂಕ ರಚನೆಯು ಆರಂಭದಲ್ಲಿ ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳಲಿದೆ. ಇದನ್ನು ಮುಂದಿನ ವರ್ಷದವರೆಗೆ ವಿಸ್ತರಿಸಲಾಗಿದೆ. ಖಾದ್ಯ ತೈಲದ ಮೇಲಿನ ಕಡಿಮೆ ಆಮದು ಸುಂಕಗಳು ಮುಂದಿನ ವರ್ಷ ಮಾರ್ಚ್‌ ವರೆಗೆ ಮುಂದುವರಿಯಲಿದೆ.

Join Nadunudi News WhatsApp Group

ಸಚಿವಾಲಯವು ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಆಮದಿನ ಮೇಲಿನ ರಿಯಾಯಿತಿ ಸುಂಕ ದರಗಳನ್ನು ಮಾರ್ಚ್ 31, 2025 ರ ವರೆಗೆ ಒಂದು ವರ್ಷದವರೆಗೆ ವಿಸ್ತರಿಸಿದೆ. ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಆಮದು ಸುಂಕವನ್ನು ಶೇ.17.5 ರಿಂದ ಶೇ.12.5ಕ್ಕೆ ಇಳಿಸಲಾಗಿದೆ. ಇನ್ನುಮುಂದೆ ಜನಸಮಾನ್ಯರು ಕಡಿಮೆ ಬೆಲೆಯಲ್ಲಿ ಅಡುಗೆ ಎಣ್ಣೆಯನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group